ಶ್ರೀ ಮಲ್ಲನಗೌಡ. ಎಸ್. ಬಿರಾದಾರ ಕೋರವಾರ ಇವರ ನೇತೃತ್ವದಲ್ಲಿ ಡಿಜಿಟಲ್ ಎಲೆಕ್ಟ್ರಾನಿಕ್ಸ ತಂತ್ರಜ್ಞಾನ ಕ್ಷೇತ್ರದಲ್ಲಿ 2 ಹೊಸ ಯೋಜನೆಗಳನ್ನು ಪ್ರಾರಂಭಿಸಲು ಉತ್ತರ ಕರ್ನಾಟಕ ಭಾಗದ ಪ್ರಮುಖರ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ

ಸೋಮವಾರ 07. 06. 2020: ಮುಖ್ಯಮಂತ್ರಿಗಳ ಗ್ರೃಹ ಕಛೇರಿ ಕ್ರೃಷ್ಣಾದಲ್ಲಿ ಮುಖ್ಯ ಮಂತ್ರಿಗಳನ್ನು ಖುದ್ದು ಭೇಟಿಯಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಡಿಜಿಟಲ್ ಎಲೆಕ್ಟ್ರಾನಿಕ್ , ಎರೋಸ್ಪೇಸ್ ಎಂಜೀನೀಯರಿಂಗ್, ಸೆಮಿಕಂಡಕ್ಟರ ತಂತ್ರಜ್ಞಾನ ಕ್ಷೇತ್ರ ಗಳಿಗೆ ಸಂಬಂಧಿಸಿದ 2 ಹೊಸ ಯೋಜನೆಗಳು ಬಗ್ಗೆ:

  1. ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳನ್ನು 5-6 ವಲಯಗಳನ್ನಾಗಿ ಮಾಡಿ ಕನಾ೯ಟಕ ರಾಜ್ಯಾದ್ಯಂತ ವಿಕೇಂದ್ರೀಕರಣ ಮಾಡುವುದು.
  2. ಭಾರತದಲ್ಲಿ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಹಬ್ನ್ನು ಪ್ರಾರಂಬಿಸುವುದು
    ಈ ಹೊಸ ಯೋಜನೆಗಳಿಂದ
    ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಳ, ಉದ್ಯೋಗ ಸ್ತ್ರಷ್ಠೀ, ಹೆಚ್ಚು ಕಂದಾಯ ಶೇಖರಣೆ ಹೀಗೆ ಹಲವಾರು ಉಪಯೋಗಗಳಿಂದ ಭಾರತವನ್ನು ಸ್ವಾವಲಂಬಿ ಹಾಗೂ ಬಲಿಷ್ಠ ಭಾರವನ್ನು ಹಾಗೂ ಹೊಸ ಭಾರತವನ್ನು ಕಟ್ಟಲು ಪೂರಕ ಹಾಗೂ ಸಹಾಯಕವಾಗುವುದೆಂದು
    ಮುಖ್ಯ ಮಂತ್ರಿಗಳಿಗೆ ಸುಧೀಘ೯ವಾಗಿ ವಿವರಿಸಿ ಮನವಿ ಪತ್ರವನ್ನೂ ಸಲ್ಲಿಸಿದರು. ಈ ನಿಯೋಗದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮಿ, ಬಿಜೆಪಿ ಮುಖಂಡರು ದೇವರ ಹಿಪ್ಪರಗಿ ಹಾಗೂ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಶ್ರೀ ಮಲ್ಲನಗೌಡ. ಎಸ್. ಬಿರಾದಾರ ಕೋರವಾರ, ಶೀ ಮುರುಗೇಶ ಜವಳಿ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ನಿದೇ೯ಶಕರಾದ ದಯಾನಂದ ಪಾಟೀಲ, ಶ್ರೀ. ಎಸ್. ಬಿ. ಛಬ್ಬಿ ನಿವ್ರೃತ್ತ ಡಿವೈಎಸ್ಪಿ ಹಾಗೂ ಎಸಿಪಿ, ಶ್ರೀ ಮಹಾಂತೇಶ ತಾರಾಪೂರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಮಹಾಲಕ್ಷ್ಮೀ ಪುರಂ ಬೆಂಗಳೂರು, ಶ್ರೀ ಈರಣ್ಣ ಬಿ ಬಿರಾದಾರ ಬಿಜೆಪಿ ಯುವ ಮುಖಂಡರು ಹಾಗೂ ಇನ್ನಿತರ ಉತ್ತರ ಕರ್ನಾಟಕ ಭಾಗದ ಪ್ರಮುಖರು ಉಪಸ್ಥಿತರಿದ್ದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.