
ನಾಗಮಂಗಲತಾಲ್ಲೂಕು ..ದೇವಲಾಪುರ ..ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿಯೇ ಓಡಾಡುವುದು, ಕನಿಷ್ಠ ಪ್ರತಿ ಗಂಟೆಗೊಮ್ಮೆ ಸಾಬೂನು ಅಥವಾ ಡೆಟಾಲ್ ನಿಂದ ಕೈ ತೊಳೆಯುವುದು ಹಾಗೂ ಬಹಳ ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಕೊರೊನಾ (ಕೋವಿಡ್-೧೯) ನಿಂದ ಮುಕ್ತವಾಗಿರಲು ಸಾಧ್ಯ ಎಂದು ದೇವಲಾಪುರ ವೈದ್ಯದಿಕಾರಿ ಪ್ರೀತಂ ತಿಳಿಸಿದರು.
ಅವರು ದೇವಲಾಪುರ ಪ್ರಾಥಮಿಕ ಆರೋಗ್ಯಕೇಂದ್ರ ಆಯೋಜನೆ ಮಾಡಿದ್ದ ಕೇಂದ್ರ ಸರ್ಕಾರ ಘೋಷಿಸಿರುವ ಜೂನ್ ಹದಿನೆಂಟು ಮಾಸ್ಕ್ ದಿನಾಚರಣೆ ಜಾಥಾಹಾಗೂ ಮಲೆರೀಯಾ ವಿರುದ್ದ ವಿರೋಧ ಮಾಸಚಾರಣಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊರೊನಾ ರೋಗವು ದಿನೆದಿನೇ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಇದಕ್ಕೆ ತಕ್ಕ ಉತ್ತರ ನೀಡಬೇಕಾದರೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಸಣ್ಣಪುಟ್ಟ ಖಾಯಿಲೆಗಳಿಗೂ ಆಸ್ಪತ್ರೆಗೆ ಎಡತಾಕುವುದನ್ನು ಬಿಡುವ ಮೂಲಕ ರೋಗಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಹೊರಗಿನಿಂದ ಮನೆಗೆ ಹೋದಾಗಲೂ ಸಹ ತಮ್ಮ ಕುಟುಂಬದ ಹಿತದೃಷ್ಟಿಯಿಂದ ಬಟ್ಟೆ ಬದಲಿಸಿ ಸ್ನಾನ ಮಾಡುವುದರಿಂದ ತಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಜಾಥಾವನ್ನು ಡಾ.ಪ್ರೀತಂ ಉದ್ಘಾಟಿಸಿದರು. ದೇವಲಾಪುರ ಬಸ್ ನಿಲ್ದಾಣ, ಮೂಲಕ ಆವರಣದ ತನಕ ಮಾಸ್ಕ್ ಡೇ ಜಾಥಾ ನಡೆಯಿತು.
ಜಾಥಾ ದಲ್ಲಿ ಆರೋಗ್ಯ ಸಿಬ್ಬಂದಿಗಳ .ಮತ್ತು ಆರೋಗ್ಯಪರಿವಿಕ್ಷರಾದ ಈಶ್ವರ ಇಲಾಖೆಯ ಸಿಬ್ಬಂದಿ, ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
City Today News
(citytoday.media)
9341997936
