- ಟ್ರಕ್‌ಗಳಿಗೆ ಉತ್ತಮ ಗುಣಮಟ್ಟ, ಕಡಿಮೆ ಬೆಲೆ ಮತ್ತು ನಿಜವಾದ ಪ್ರಮಾಣದ ಭರವಸೆ
- ಟ್ರಕ್ ಮಾಲೀಕರು ಹಣ ಉಳಿತಾಯ ಮಾಡಲು ಡೀಸೆಲ್ ಮೇಲೆ 1% ಸಬ್ಸಿಡಿ ಘೋಷಣೆ
- ದೇಶಾದ್ಯಂತ 750 ಕ್ಕೂ ಹೆಚ್ಚು ಬಹು ಬ್ರಾಂಡ್ ಪಂಪ್‌ಗಳು ಒಳಗೊಂಡಿವೆ
- ಏರುತ್ತಿರುವ ಡೀಸೆಲ್ ಬೆಲೆಯ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶ

ಜುಲೈ, 2020: ಟ್ರಕ್ ಮಾಲೀಕರ ಸಂಕಷ್ಟದಲ್ಲಿ ಭಾಗಿಯಾಗಲು ನಿರ್ಧರಿಸಿರುವ ವೀಲ್ಸ್ಐ ಇಂಧನ ಕೇಂದ್ರಿತವಾದ ಉಪಕ್ರಮ ಅಪ್ನಾ ಪಂಪ್ ಅನ್ನು ಬಿಡುಗಡೆ ಮಾಡಿದೆ. ಉತ್ತಮ ಗುಣಮಟ್ಟ, ಕಡಿಮೆ ಬೆಲೆ ಮತ್ತು ನಿಜವಾದ ಪ್ರಮಣದ ಡೀಸೆಲ್ ಅನ್ನು ಭಾರತದಾದ್ಯಂತ ಟ್ರಕ್ ಮಾಲೀಕರಿಗೆ ಒದಗಿಸುವ ಭರವಸೆ ನೀಡುತ್ತದೆ. ಡೀಸೆಲ್ ಬೆಲೆ ಏರುತ್ತಿರುವ ಈ ಹೊತ್ತಿನಲ್ಲೇ, ಕೋವಿಡ್‌ನಿಂದ ಉಂಟಾದ ಸಂಕಷ್ಟದ ಸನ್ನಿವೇಶವನ್ನು ಟ್ರಕ್ ಮಾಲೀಕರು ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಬಿಡುಗಡೆಯಾಗಿರುವ ಈ ಸೌಲಭ್ಯವು ಟ್ರಕ್ ಮಾಲೀಕರ ಸಂಕಷ್ಟ ನಿವಾರಣೆಯ ಮಹತ್ವದ ಭಾಗವಾಗಿದೆ.
ಭಾರತದಾದ್ಯಂತ 750 ಪೆಟ್ರೋಲ್ ಪಂಪ್‌ಗಳನ್ನು ಆನ್‌ಬೋರ್ಡ್ ಮಾಡಿಕೊಂಡಿದೆ. ಡೀಸೆಲ್ ಮೇಲೆ 1% ಕ್ಯಾಶ್‌ಬ್ಯಾಕ್ ಅನ್ನು ಇದು ಒದಗಿಸುತ್ತದೆ. 10 ಟ್ರಕ್‌ಗಳನ್ನು ಹೊಂದಿರುವ ಟ್ರಕ್ ಮಾಲೀಕರು 1 ವರ್ಷದಲ್ಲಿ 1 ಲಕ್ಷ ರೂ. ಅನ್ನು ವೀಲ್ಸ್‌ಐ ಅಪ್ನಾ ಪಂಪ್‌ನಿಂದ ಉಳಿಸಬಹುದು. ಆಸಕ್ತಿಕರ ಸಂಗತಿಯೆಂದರೆ, ಟ್ರಕ್ ಮಾಲೀಕರ ಜೀವನವನ್ನು ಸರಳವಾಗಿಸಲು ಇತರ ವಿಧಾನಗಳ ಜೊತೆಗೆ ನಗದು ಪಾವತಿಗಳನ್ನೂ ಸಮ್ಮತಿಸಲಾಗುತ್ತದೆ. ಕಟ್ಟುನಿಟ್ಟಾದ ಗುಣಮಟ್ಟ ತಪಾಸಣೆಯಿಂದಾಗಿ ಉನ್ನತ ದರ್ಜೆಯ ಡೀಸೆಲ್ ಲಭ್ಯವಾಗುತ್ತದೆ. ಕಡಿಮೆ ಬೆಲೆಯಲ್ಲಿ ಉತ್ತಮ ಬೆಲೆ ಒದಗಿಸುವ ವೀಲ್ಸ್ಐ, ಟ್ರಕ್ ಮಾಲೀಕರಿಗೆ ಹೆಚ್ಚುವರಿ ಹೊರೆಯನ್ನು ಕಡಿಮೆ ಮಾಡುತ್ತದೆ.
ಈ ಪ್ರೋಗ್ರಾಮ್ ಬಗ್ಗೆ ಮಾತನಾಡಿದ ವೀಲ್ಸ್‌ಐ ವಕ್ತಾರ ವಿಪುಲ್ ಖನ್ನಾ, “ಇಂದು ಕೋವಿಡ್ 19 ಸಾಂಕ್ರಾಮಿಕ ರೋಗವು ಸರಕು ಸಾಗಣೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಇದು ಅವರ ಗಳಿಕೆಯ ಮೇಲೆ ಭಾರಿ ಹೊಡೆತ ನೀಡಿದೆ ಮತ್ತು ಇತ್ತೀಚೆಗೆ ಏರುತ್ತಿರುವ ಇಂಧನ ಬೆಲೆಯೂ ಅವರ ಸವಾಲನ್ನ ಇನ್ನಷ್ಟು ಹೆಚ್ಚಿಸಿದೆ. ಈ ಸಮಸ್ಯೆಯನ್ನು ನಾವು ಪರಿಹರಿಸಲು ಬಯಸಿದ್ದೇವೆ ಮತ್ತು ಈ ಮೂಲಕ ಟ್ರಕ್ ಮಾಲೀಕರಿಗೆ ಅವರ ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ಸಹಾಯ ಮಾಡಲು ನಿರ್ಧರಿಸಿದ್ದೇವೆ. ತಮ್ಮ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅವರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದ ಬಗ್ಗೆ ನಮಗೆ ಅರಿವಿದೆ.”
ಈ ವಿಪತ್ತಿನಲ್ಲಿ ಟ್ರಕ್ ಮಾಲೀಕರಿಗೆ ಬೆಂಬಲಿಸಲು ವೀಲ್ಸ್‌ಐ ನ ಪ್ರಯತ್ನವೇ ಅಪ್ನಾ ಪಂಪ್ ಆಗಿದೆ. ತಮಗೆ ಬೇಕಾದ ಯಾವುದೇ ಪ್ರಮಾಣಕ್ಕೆ ಉತ್ತಮ ಗುಣಮಟ್ಟದ ಇಂಧನವನ್ನು ಅವರು ಪಡೆಯಬಹುದು. ಇದು ಗಮನಾರ್ಹ ಪ್ರಮಾಣದ ಹಣವನ್ನು ಅವರಿಗೆ ಉಳಿತಾಯ ಮಾಡಲಿದೆ ಮತ್ತು ಅವರ ಆರ್ಥಿಕ ಹೊರೆ ಕಡಿಮೆಯಾಗಲಿದೆ” ಎಂದು ಅವರು ಹೇಳಿದ್ದಾರೆ.
City Today News
(citytoday.media)
9341997936
