ಪುಂಡರ ಸಮರ್ಥನೆಗೆ ಇಳಿದು ಪ್ರಚೋದನೆ ನೀಡುತ್ತಾ ರಾಜಕೀಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಪಕ್ಷವು ಹುನ್ನಾರ ನಡೆಸುತ್ತಿರುವುದು ತೀರಾ ವಿಷಾದನೀಯ-ಡಿ.ಸಿ.ಎಂ

ಡಿ.ಸಿ.ಎಂ. ಸವದಿಯವರ ಪತ್ರಿಕಾ ಪ್ರಕಟಣೆ

ಬೆಂಗಳೂರಿನ ಕೆಲವೆಡೆ ನಿನ್ನೆ ರಾತ್ರಿ ಹಿಂಸಾಕೃತ್ಯ ನಡೆಸಿ ಅಮಾನವೀಯವಾಗಿ ಲೂಟಿ, ದೊಂಬಿ ನಡೆಸಿದ್ದು ಯಾರೇ ಆಗಲಿ ಮೊದಲಿಗೆ ನಾನು ಇದನ್ನು ಖಂಡಿಸುತ್ತೇನೆ. ಅಷ್ಟೇ ಅಲ್ಲ ಇನ್ನು ಮುಂದೆ ಈ ರೀತಿಯ ದುಷ್ಕೃತ್ಯ ನಡೆಸುವವರಿಗೆ ತಕ್ಕ ಶಾಸ್ತಿ ಕಾದಿದೆ ಎಂಬ ಎಚ್ಚರಿಕೆ ನೀಡಬಯಸುತ್ತೇನೆ. ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆ ವಿಧಿಸುವುದಕ್ಕೆ ನಮ್ಮ ಸರ್ಕಾರ ಹಿಂದೆಮುಂದೆ ನೋಡುವುದಿಲ್ಲ.

ಆದರೆ ಈ ಕೃತ್ಯಗಳನ್ನು ಖಂಡಿಸುವ ಬದಲು ಕಾಂಗ್ರೆಸ್ ಮುಖಂಡರು ಪೊಲೀಸರ ವೈಫಲ್ಯವೇ ಈ ಘಟನೆಗೆ ಕಾರಣ ಮತ್ತು
ಇದಕ್ಕೆ ಪ್ರಚೋದನೆ ನೀಡಿದ ವ್ಯಕ್ತಿ ಬಿ.ಜೆ.ಪಿ. ಬೆಂಬಲಿಗ ಎಂದು ಹೇಳಿರುವುದು ಅವರ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸುತ್ತದೆ.

ತಮ್ಮವರೇ ಪ್ರಚೋದನಾಕಾರಿ ಹೇಳಿಕೆ ನೀಡಿದ ಪರಿಣಾಮವಾಗಿ ಇಂಥ ಹಿಂಸಾಕೃತ್ಯಗಳು ನಡೆದರೂ ಇದು ಬಿಜೆಪಿ ಬೆಂಬಲಿಗರ ಕೃತ್ಯ ಎಂದು
ಆರೋಪಿಸಿ ಜನರನ್ನು ದಾರಿತಪ್ಪಿಸಲು
ಹವಣಿಸುವುದು ಕಾಂಗ್ರೆಸ್ಸಿನವರ ಹಳೆಯ ಚಾಳಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸೋಲಿನ ಮೇಲೆ ಸೋಲು ಉಣ್ಣುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಇಂಥ ಸವಾಲಿನ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡುತ್ತಿರುವುದು ಅವರು ಹತಾಶೆಗೆ ನಿದರ್ಶನವಾಗಿದೆ.

ಇಂತಹ ಗಲಭೆಯನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಕೈ ಜೋಡಿಸುವ ಬದಲು ಪರೋಕ್ಷವಾಗಿ
ಇಂತಹ ಪುಂಡರ ಸಮರ್ಥನೆಗೆ ಇಳಿದು ಪ್ರಚೋದನೆ ನೀಡುತ್ತಾ ರಾಜಕೀಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಪಕ್ಷವು ಹುನ್ನಾರ ನಡೆಸುತ್ತಿರುವುದು ತೀರಾ ವಿಷಾದನೀಯ.

ಲಕ್ಷ್ಮಣ ಸವದಿ
ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು,
ಕರ್ನಾಟಕ ಸರ್ಕಾರ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.