ಗಾನಗಾರುಡಿಗ, ಪದ್ಮಶ್ರೀ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರ ಅಕಾಲಿಕ ನಿಧನದಿಂದ ನನ್ನ ಮನಸ್ಸಿಗೆ ಅತೀವವಾದ ನೋವುಂಟಾಗಿದೆ – ವಿಶ್ವೇಶ್ವರ ಹೆಗಡೆ ಕಾಗೇರಿ,ಸಭಾಧ್ಯಕ್ಷರು

ಶೋಕ ಸಂದೇಶ

ಗಾನಗಾರುಡಿಗ, ಪದ್ಮಶ್ರೀ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರ ಅಕಾಲಿಕ ನಿಧನದಿಂದ ನನ್ನ ಮನಸ್ಸಿಗೆ ಅತೀವವಾದ ನೋವುಂಟಾಗಿದೆ.

ತಮ್ಮ ಕಂಚಿನ ಕಂಠದ ಮೂಲಕ ಜನರ ಮನವನ್ನು ಸೂರೆಗೊಂಡಿದ್ದ ಶ್ರೀಯುತರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಸರಳಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಇವರ ನಿಧನದಿಂದ ಸಂಗೀತ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ.
ಇವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

ವಿಶ್ವೇಶ್ವರ ಹೆಗಡೆ, ಕಾಗೇರಿ,
ಸಭಾಧ್ಯಕ್ಷರು,
ಕರ್ನಾಟಕ ವಿಧಾನ ಸಭೆ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.