ಪದ್ಮಭೂಷಣ ಡಾ. ಎಂ. ಸಿ. ಮೋದಿ ಕಣ್ಣಿನ ಆಸ್ಪತ್ರೆ ಆವರಣ ರಾಜಾಜಿನಗರ ಬೆಂಗಳೂರಿನಲ್ಲಿ 75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿದ ಮಲ್ಲನಗೌಡ ಎಸ್. ಪಾಟೀಲ (ಕೋರವಾರ)

ಪದ್ಮಭೂಷಣ ಡಾ. ಎಂ. ಸಿ. ಮೋದಿ ಕಣ್ಣಿನ ಆಸ್ಪತ್ರೆ ಆವರಣ ರಾಜಾಜಿನಗರ ಬೆಂಗಳೂರಿನಲ್ಲಿ ಭಾರತ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಲ್ಲನಗೌಡ ಎಸ್. ಪಾಟೀಲ (ಕೋರವಾರ) ಇವರು ಧ್ವಜಾರೋಹಣವನ್ನು ನೆರವೇರಿಸಿ, ಸಭೆಯನ್ನುದ್ದೇಶಿಸಿ ಸ್ವಾತಂತ್ರೋತ್ಸವ ಹಾಗೂ ಡಾ. ಎಂ. ಸಿ. ಮೋದಿಜಿಯವರ ಕುರಿತು ಪದ್ಮಭೂಷಣ, ನೇತ್ರತಜ್ಞ, ಗಿನ್ನಿಸ್ ದಾಖಲೆಯ ಸರದಾರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ
ಖ್ಯಾತಿ ಹೊಂದಿರುವ
ಡಾ. ಎಂ. ಸಿ. ಮೋದಿಜಿಯವರ ಅದ್ಭುತ ಸಾಧನೆ ಮತ್ತು ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ & ಪ್ರಶಂವಸನೀಯ ಎಂದು ಮಾತನಾಡಿದರು.
ಇದಲ್ಲದೇ ಭಾರತ ದೇಶವು ಸ್ವತಂತ್ರ್ಯವಾಗಲು ಶ್ರಮಿಸಿದ ಪ್ರಮುಖ ನೇತಾರರಾದ ಮಹಾತ್ಮಾ ಗಾಂಧೀಜಿ, ಮಂಗಲಪಾಂಡೆ, ಭಗತಸಿಂಗ್, ಸುಭಾಸಚಂದ್ರ ಬೋಸ್, ಚಂದ್ರಶೇಖರ ಆಜಾದ್ ಹಾಗೂ ಇನ್ನೂ ಹಲವಾರು ನೇತಾರರ ತ್ಯಾಗ, ಬಲಿದಾನ & ನಿರಂತರ ಹೋರಾಟ, ಚಳುವಳಿಗಳ ಫಲಶೃತಿಯಿಂದ ಭಾರತ ದೇಶವು ಸ್ವಾತಂತ್ರ್ಯವಾಗಲು ಸಾಧ್ಯವಾಯಿತು ಎಂದು ಎಳೆ ಎಳೆಯಾಗಿ ಹೇಳಿದರು.
ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದ ಗುಣಾತ್ಮಕ ಶಿಕ್ಷಣ ವ್ಯವಸ್ಥೆಯ ಮೇಲೆ ಅವಲಂಭಿತವಾಗಿರುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ಎಂದರೆ ಈ ಭಾರತ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಎಲ್ಲಾ ರೀತಿಯ ಮೂಲಭೂತ ಹಕ್ಕು ಹಾಗೂ ಎಲ್ಲಾ ರೀತಿಯ ಸ್ವಾತಂತ್ರ್ಯವಿದೆ. ಇದನ್ನು ಯಾರೂ ಅಡ್ಡಿಪಡಿಸಬಾರದು.
ಸುಭಾಸ್ ಮೋದಿ, ಮಲ್ಲಿಕಾರ್ಜುನ ಮೋದಿ, ಗುಬ್ಬಿ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ, ರುದ್ರಪ್ಪ ಏನ್. ಏನ್., ಎಸ್. ಎಸ್. ಸಂತಿ ಸಹಾಯಕ ಇಂಜಿನಿಯರ್ ಐಟಿಐ ಲಿಮಿಟೆಡ್ ಬೆಂಗಳೂರು, ಕರ್ಜಗಿ ದಾವಣಗೆರೆ ಹಾಗೂ ಮುಂತಾದವರು ಭಾಗವಹಿಸಿದ್ದರು.

City Today News
9341997936

Leave a comment

This site uses Akismet to reduce spam. Learn how your comment data is processed.