ಭಾರತದಲ್ಲಿ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2 ಅನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿದ ಒನ್‌ಪ್ಲಸ್

ಮಾರ್ಚ್ 31, 2022 – ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಆಗಿರುವ ಒನ್‌ಪ್ಲಸ್ ಅಧಿಕೃತವಾಗಿ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝೆಡ್ 2 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಭಾರತದಲ್ಲಿ ಲಭ್ಯವಿದೆ. ಅಲ್ಲದೇ ಇದರ ಹೊಸ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಆದ ಒನ್‌ಪ್ಲಸ್ 10 ಪ್ರೊ ಭಾರತ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಲಭ್ಯವಿದೆ. ಒನ್‌ಪ್ಲಸ್ ಭಾರತ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ರೇಡಿಯಂಟ್ ಸಿಲ್ವರ್ ಎಂದು ಕರೆಯಲ್ಪಡುವ ಒನ್‌ಪ್ಲಸ್ ಬಡ್ಸ್ ಪ್ರೊಗಾಗಿ ಹೊಸ ಬಣ್ಣಗಳಲ್ಲಿ ಸಹ ಬಿಡುಗಡೆ ಮಾಡಿದೆ, ಇದು ಸ್ಟೈನ್ಲೆಸ್ ಸ್ಟೀಲ್ ನಂತೆ ಇರುತ್ತದೆ. ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2 (ಭಾರತದಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ) ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್2 ಒನ್‌ಪ್ಲಸ್ ಬುಲೆಟ್ಸ್ ವೈರ್ಲೆಸ್ ಝಡ್ ಮತ್ತು ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ ಬಾಸ್ ಎಡಿಷನ್ ನ ಸಮುದಾಯದ ನೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವೇಗದ ಚಾರ್ಜಿಂಗ್, ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಸುಧಾರಿತ ಧ್ವನಿ ಗುಣಮಟ್ಟಕ್ಕಾಗಿ ದೊಡ್ಡ ಡ್ರೈವರ್ ನೊಂದಿಗೆ ಇದು ಲಭ್ಯವಿದೆ. ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2 ಸಂಗೀತ ಉತ್ಸಾಹಿಗಳಿಗೆ ಅತ್ಯುತ್ತಮ ಗುಣ ಮಟ್ಟದ ನಿಸ್ತಂತು ಇಯರ್ ಫೋನ್ ಗಳನ್ನು ಒದಗಿಸುತ್ತದೆ. 
ಫಾಸ್ಟ್ ಚಾರ್ಜಿಂಗ್ ನೊಂದಿಗೆ ಶಾಶ್ವತ ಬ್ಯಾಟರಿ ಬಾಳಿಕೆ  ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝೆಡ್ 2 ವೇಗದ ವೈರ್ಡ್ ಚಾರ್ಜಿಂಗ್ ನೊಂದಿಗೆ ಸಜ್ಜುಗೊಂಡಿದೆ, ಇದು ಕೇವಲ 10 ನಿಮಿಷಗಳಲ್ಲಿ 20 ಗಂಟೆಗಳ ಆಡಿಯೋ ಪ್ಲೇ ಬ್ಯಾಕ್ ಅನ್ನು ನೀಡುತ್ತದೆ. ಇದನ್ನು ಪೂರ್ಣವಾಗಿ ಚಾರ್ಜ್ ಮಾಡಿದರೆ, ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝೆಡ್2, 30 ಗಂಟೆಗಳ ತಲ್ಲೀನಗೊಳಿಸುವ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನು ನೀಡುತ್ತದೆ, ಇದು ಬಳಕೆದಾರರಿಗೆ ಚಿಂತೆ-ಮುಕ್ತ ಬ್ಯಾಟರಿ ಅನುಭವವನ್ನು ಸಹ ನೀಡುತ್ತದೆ.  
ತಲ್ಲೀನಗೊಳಿಸುವ ಧ್ವನಿ ಗುಣಮಟ್ಟ
12.4 ಎಂಎಂ ಡ್ರೈವರ್ ಗಳನ್ನು ಹೊಂದಿರುವ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2 ಆಳವಾದ ಮತ್ತು ರಿಚ್ ಆದ ಬಾಸ್ ಆಡಿಯೊ ಅನುಭವವನ್ನು ನೀಡುತ್ತದೆ ಮತ್ತು ವಿರೂಪ-ವಿರೋಧಿ ಕ್ರಮಾವಳಿಗಳಿಗೆ ಬೆಂಬಲದೊಂದಿಗೆ, ಬುಲೆಟ್ಸ್ ವೈರ್‌ಲೆಸ್ ಝಡ್2 ನಿಮಗೆ ಸೌಂಡ್ ಹೆಚ್ಚು ಮಾಡಲು ಮತ್ತು ನಿಮ್ಮ ನೆಚ್ಚಿನ ಕಲಾವಿದರ ಹಾಡುಗಳನ್ನು ಆನಂದಿಸಲು ಅನುಮತಿಸುತ್ತದೆ.
ಅಷ್ಟೇ ಅಲ್ಲದೇ ಎಐ ದೃಶ್ಯ ಮಾದರಿ ಅಲ್ಗಾರಿದಮ್ ಅನ್ನು ಬಳಸಿಕೊಂಡು, ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2 ನ ಮೈಕ್ರೊಫೋನ್ ಸ್ಪಷ್ಟ ಮತ್ತು ನಿಖರವಾದ ಧ್ವನಿ ಪತ್ತೆ ಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳಲು ತನ್ನ ಕರೆ ಕಡಿಮೆ ಮಾಡುವ ಮಟ್ಟವನ್ನು ಸರಿಹೊಂದಿಸಲು ಸಮರ್ಥವಾಗಿದೆ, ಇದು ಬಳಕೆದಾರರು ಪ್ರಯಾಣದಲ್ಲಿರುವಾಗ ಸಹ ಕರೆಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಆರಾಮದಾಯಕ ಮತ್ತು ಬಾಳಿಕೆ ಬರುವ ವಿನ್ಯಾಸ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್2 ಐಪಿ 55 ರೇಟೆಡ್ ನೀರು ಮತ್ತು ಧೂಳಿನ ಪ್ರತಿರೋಧದೊಂದಿಗೆ ಬರುತ್ತದೆ, ಜೊತೆಗೆ ಹೈಡ್ರೋಫೋಬಿಕ್ ನ್ಯಾನೊ-ಕೋಟಿಂಗ್ ಜೊತೆಗೆ ಬಳಕೆದಾರರು ತಮ್ಮ ನೆಚ್ಚಿನ ಪ್ಲೇ ಲಿಸ್ಟ್ ಅನ್ನು ಮಳೆಯಲ್ಲಿ ಕೇಳುವಾಗಲೂ ಸಹ ದೀರ್ಘ ಸಮಯದವರೆಗೆ ಇದನ್ನು ಕೇಳಬಹುದಾಗಿದೆ. 
ಬಳಕೆದಾರರ ವಿಸ್ತರಣೆಯಾಗಿ ನಿರ್ಮಿಸಲಾದ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2 ರ ನೆಕ್ ಬ್ಯಾಂಡ್ ಅನ್ನು ಸಿಲಿಕಾನ್ ನಿಂದ ತಯಾರಿಸಲಾಗಿದೆ. ಇದು ಹೆಚ್ಚು ಚರ್ಮ ಸ್ನೇಹಿ ಮತ್ತು ಆರಾಮದಾಯಕವಾದ ಧರಿಸುವ ಅನುಭವವನ್ನು ನೀಡುತ್ತದೆ.
ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2 ಮ್ಯಾಜಿಕೋ ಕಪ್ಪು ಮತ್ತು ಬೀಮ್ ನೀಲಿ ಬಣ್ಣಗಳಲ್ಲಿ ಲಭ್ಯವಿದೆ.
ಇದರ ಬೆಲೆ ಮತ್ತು ಲಭ್ಯತೆ ಭಾರತದಲ್ಲಿ, ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2  ಏಪ್ರಿಲ್ 5 ರಂದು ಮಾರಾಟಕ್ಕೆ ಬರಲಿದೆ ಮತ್ತು OnePlus.in, ಒನ್‌ಪ್ಲಸ್  ಸ್ಟೋರ್ ಅಪ್ಲಿಕೇಶನ್, Amazon.in, Flipkart.com, ಒನ್‌ಪ್ಲಸ್ ಸ್ಟೋರ್ ಗಳು ಮತ್ತು ಪಾಲುದಾರ ಸ್ಟೋರ್ ಗಳಲ್ಲಿ ಲಭ್ಯವಿದೆ. ಇಯರ್ ಬಡ್ ಗಳ ಬೆಲೆ 1999 ರೂಪಾಯಿ. OnePlus.in, ಒನ್‌ಪ್ಲಸ್  ಸ್ಟೋರ್ ಅಪ್ಲಿಕೇಶನ್ ಮತ್ತು ಒನ್‌ಪ್ಲಸ್  ಸ್ಟೋರ್ ಗಳಲ್ಲಿ  ಆರಂಭಿಕ ಪ್ರವೇಶ ಮಾರಾಟದ ಭಾಗವಾಗಿ ರೆಡ್ ಕೇಬಲ್ ಕ್ಲಬ್ ಸದಸ್ಯರು ಏಪ್ರಿಲ್ 4 ರಂದು ಹೊಸ ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ ಝಡ್ 2 ಅನ್ನು ಪಡೆಯಬಹುದು.  
ರೇಡಿಯಂಟ್ ಸಿಲ್ವರ್ ನಲ್ಲಿ ಒನ್‌ಪ್ಲಸ್ ಬಡ್ಸ್ ಪ್ರೊ ರೇಡಿಯಂಟ್ ಸಿಲ್ವರ್ ನಲ್ಲಿ ಲಭ್ಯವಿರುವ ಒನ್‌ಪ್ಲಸ್ ಬಡ್ಸ್ ಪ್ರೊ ಸಾಮಾನ್ಯ ಒನ್‌ಪ್ಲಸ್ ಬಡ್ಸ್ ಪ್ರೊ ನಿಂದ ಎಲ್ಲಾ ನಂಬಲಾಗದ ವೈಶಿಷ್ಟ್ಯಗಳನ್ನು ತೆಗೆದುಕೊಳ್ಳುತ್ತದೆ. 11 ಎಂಎಂ ದೊಡ್ಡ ಕ್ರಿಯಾತ್ಮಕ ಡ್ರೈವರ್ ಗಳೊಂದಿಗೆ ಜೋಡಿಯಾದ 40 ಡೆಸಿಬಲ್ ವರೆಗೆ  ಶಕ್ತಿಯುತ ಶಬ್ದ ರದ್ದತಿಯಂತೆ ಮತ್ತು ಅವುಗಳನ್ನು ಸುಂದರವಾದ ಹೊಸ ಬಣ್ಣಗಳಲ್ಲಿ ತಲುಪಿಸುತ್ತದೆ. ನಾನ್-ಕಂಡಕ್ಟಿವ್ ವ್ಯಾಕ್ಯೂಮ್ ಮೆಟಲೈಸೇಶನ್ ಎಂಬ ಪ್ರಕ್ರಿಯೆಯನ್ನು ಬಳಸಿಕೊಂಡು, ರೇಡಿಯಂಟ್ ಸಿಲ್ವರ್ ನಲ್ಲಿರುವ ಒನ್‌ಪ್ಲಸ್ ಬಡ್ಸ್ ಪ್ರೊ ಸ್ಟೈನ್‌ಲೆಸ್ ಸ್ಟೀಲ್ ನ ನೋಟ ಮತ್ತು ಅನುಭವವನ್ನು ಪುನರಾವರ್ತಿಸುತ್ತದೆ, ಅಲ್ಯೂಮಿನಿಯಂ ಮಿಶ್ರಲೋಹಕ್ಕಿಂತ ಪ್ರಕಾಶಮಾನವಾದ ಮತ್ತು ಹೆಚ್ಚು ಪ್ರತಿಫಲನಶೀಲವಾದ ವಿನ್ಯಾಸವನ್ನು ನೀಡುತ್ತದೆ. ಹೊಸ ರೇಡಿಯಂಟ್ ಸಿಲ್ವರ್ ಬಣ್ಣದೊಂದಿಗೆ ಇಯರ್ ಬಡ್ ಗಳು ಮತ್ತು ಅದರೊಂದಿಗೆ ಬರುವ ಚಾರ್ಜಿಂಗ್ ಕೇಸ್ ಎರಡಕ್ಕೂ ಅನ್ವಯಿಸಲಾಗುತ್ತದೆ.
ಬೆಲೆ ಮತ್ತು ಲಭ್ಯತೆ ಭಾರತದಲ್ಲಿ, ಒನ್‌ಪ್ಲಸ್ ಬಡ್ಸ್ ಪ್ರೊ ರೇಡಿಯಂಟ್ ಸಿಲ್ವರ್ ಏಪ್ರಿಲ್ 5 ರಂದು ಮಾರಾಟಕ್ಕೆ ಬರಲಿದೆ ಮತ್ತು OnePlus.in, ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್, Amazon.in, ಒನ್‌ಪ್ಲಸ್ ಎಕ್ಸ್ಪೀರಿಯನ್ಸ್ ಸ್ಟೋರ್ ಗಳು ಮತ್ತು ಪಾಲುದಾರ ಸ್ಟೋರ್ ಗಳಲ್ಲಿ  ಲಭ್ಯವಿದೆ. ಇಯರ್ ಬಡ್ ಗಳ ಬೆಲೆ 9990 ರೂಪಾಯಿ. ಮುಕ್ತ ಮಾರಾಟಕ್ಕೆ ಮುಂಚಿತವಾಗಿ, ರೆಡ್ ಕೇಬಲ್ ಕ್ಲಬ್ ಸದಸ್ಯರು OnePlus.in, ಒನ್‌ಪ್ಲಸ್ ಅಪ್ಲಿಕೇಶನ್ ಸ್ಟೋರ್, ಒನ್‌ಪ್ಲಸ್ ಸ್ಟೋರ್ ಗಳು ಮತ್ತು ಪ್ರೈಮ್ ಸದಸ್ಯರಿಗಾಗಿ Amazon.in ಆರಂಭಿಕ ಪ್ರವೇಶ ಮಾರಾಟದ ಭಾಗವಾಗಿ ಏಪ್ರಿಲ್ 4 ರಂದು ಹೊಸ ಒನ್‌ಪ್ಲಸ್ ಬಡ್ಸ್ ಪ್ರೊ ರೇಡಿಯಂಟ್ ಸಿಲ್ವರ್ ಅನ್ನು ನೀವು ಪಡೆಯಬಹುದು.
‘ಪವರ್ ಆಫ್ ಟೆನ್’ ಅಭಿಯಾನ 
ಇಂದು ಒನ್‌ಪ್ಲಸ್ ತನ್ನ ‘ಪವರ್ ಆಫ್ ಟೆನ್’ ಅಭಿಯಾನವನ್ನು ಸಹ ಪ್ರಾರಂಭಿಸಿದೆ, ಇದು ತನ್ನ ಪ್ರಯಾಣದುದ್ದಕ್ಕೂ ಬ್ರ್ಯಾಂಡ್ ಅನ್ನು ಬೆಂಬಲಿಸಿದ ಒನ್‌ಪ್ಲಸ್ ಬಳಕೆದಾರರಿಗೆ ಬಹುಮಾನ ನೀಡುವ ಗುರಿಯನ್ನು ಹೊಂದಿದೆ, ಇದರಲ್ಲಿ ಅದರ ಮೊದಲ ಸ್ಮಾರ್ಟ್‌ಫೋನ್ – ಒನ್‌ಪ್ಲಸ್ ಒನ್ ಅನ್ನು ಖರೀದಿಸಿದವರು ಸೇರಿದ್ದಾರೆ.
ಇದೀಗ, ಒನ್‌ಪ್ಲಸ್ ಒನ್ ಅನ್ನು ಹೊಂದಿರುವ ಅಥವಾ ಹೊಂದಿರುವವರು ಒನ್‌ಪ್ಲಸ್ ಆನ್‌ಲೈನ್ ಸ್ಟೋರ್ ನಲ್ಲಿ ಬಳಸಲು ಯುಎಸ್‌ಡಿ 2,990 / ಐಎನ್ಆರ್ 219,990 / ಯುರೋ 2,990 ವೋಚರ್ ಗೆಲ್ಲುವ ಅವಕಾಶಕ್ಕಾಗಿ OnePlus.com ಅಥವಾ OnePlus.in ಹೋಗಬಹುದು. 
ಒನ್‌ಪ್ಲಸ್ 100 ಒನ್‌ಪ್ಲಸ್ ಒನ್ ಮಾಲೀಕರಿಗೆ 2,990 ಯುಎಸ್‌ಡಿ / 219,990 / ಯುರೋ 2,990 ವೋಚರ್ ಮತ್ತು ಇತರ ಯಾವುದೇ ಒನ್‌ಪ್ಲಸ್ ಸಾಧನದ 500 ಮಾಲೀಕರಿಗೆ ಯುಎಸ್‌ಡಿ 729 / ಐಎನ್ಆರ್ 44,999 / ಯುರೋ 719 ವರೆಗಿನ ವೋಚರ್ ನೊಂದಿಗೆ ಬಹುಮಾನ ನೀಡಲಿದೆ. ಪವರ್ ಆಫ್ ಟೆನ್ ಅಭಿಯಾನವು ರೆಡ್ ಕೇಬಲ್ ಕ್ಲಬ್ ಪ್ಲಾಟ್‌ಫಾರ್ಮ್ ಮೂಲಕ ಭಾರತ, ಯುರೋಪ್ ಮತ್ತು ಉತ್ತರ ಅಮೆರಿಕಾದ ಎಲ್ಲಾ ಒನ್‌ಪ್ಲಸ್ ಮಾಲೀಕರಿಗೆ ಮುಕ್ತವಾಗಿದೆ. ಆದರೆ 66,999 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಖರೀದಿಸಿದರೆ ಮಾತ್ರ ಈ ವೋಚರ್ ಅನ್ವಯವಾಗುತ್ತದೆ.

City Today News

9341997936

ಟಿಪ್ಪು ಸುಲ್ತಾನ್ ರವರ ಕುರಿತ ಕೆಲವು ವಿಷಯಗಳನ್ನು ತೆಗೆಯುತ್ತಿರುವ ‘ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ‘ ಯ ನಿಲುವನ್ನು ಖಂಡಿಸಿ ಪತ್ರಿಕಾ ಗೋಷ್ಠಿ

ಮೈಸೂರು ಹುಲಿ ಟಿಪ್ಪುಸುಲ್ತಾನ್ ರವರ ಹೆಸರಿನಲ್ಲಿ ಹೆಸರರಚುವ ಕೆಲಸವನ್ನು ಒಂದು ವರ್ಗ ನಿರಂತರವಾಗಿ ಮಾಡುತ್ತ ಬಂದಿದೆ . ಅದರ ಭಾಗವಾಗಿಯೇ ಇತಿಹಾಸಕಾರರಲ್ಲದ ಸೃಜ ಚರಿತ್ರೆಯನ್ನು ತಿರುಚುವ ಕಲ ವ್ಯಕ್ತಿಗಳು ಟಿಪ್ಪು ರವರಿಗೆ ಮೈಸೂರು ಹುಲಿ ಎಂಬ ಬಿರುದು ಕೊಟ್ಟವರಾರೆಂದು ಪ್ರಶ್ನಿಸುತ್ತಾರೆ , ಹಾಗೆ ಕೇಳುವ ಹಕ್ಕು ಇಲದ ಇಂತಹ ವ್ಯಕ್ತಿಗಳು ಪಠ್ಯಪುಸ್ತಕದಿಂದ ಟಿಪ್ಪುರನ್ನು ಮರೆಮಾಚುವ ಕೃತ್ಯದ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡುತ್ತಿದ್ದಾರೆ ,

ಪ್ರಚಂಡ ಹೋರಾಟಗಾರರಾಗಿದ್ದ , ಜನಪರ ನವ ರಾಜ್ಯ ಆಡಳಿತ ವ್ಯವಸ್ಥೆಯನ್ನು ಈ ನಾಡಿಗೆ ಪರಿಚಯಿ ಸಿದ , ರೇಷ್ಮೆ ಕೃಷಿಯನ್ನು ಅಭಿವೃದ್ಧಿಗೊಳಿಸಿ ಕೋಟ್ಯಂತರ ರೈತರಿಗೆ ನೇರವಾದ , ರಾಕೆಟ್ ತಂತ್ರಜ್ಞಾನವನ್ನು ಮೊದಲಿಗೆ ಪರಿಚಯಿಸಿದ ಸ್ವಾಭಿಮಾನಿ , ಕನ್ನಡ ಪರ , ಭಾರತದ ಸ್ವತಂತ್ರ ಹೋರಾಟ ಗಾರ ಟಿಪ್ಪು ಸುಲ್ತಾನ್ ರನ್ನು ಮೈಸೂರಿನ ಹುಲಿಯೆಂದು ಮೈಸೂರಿನ ಮಹಾಜನತೆಯೇ ಕರೆದವರು .

ನಮ್ಮ ದೇಶವಾಳಿದ ಟಿಪ್ಪುವಿನ ಪರಮ ವೈರಿಗಳಾಗಿದ್ದ ಬ್ರಿಟೀಷರೇ ಒಪ್ಪಿಕೊಂಡು ಹಾಗಂತ ದಾಖಲಿಸಿದ್ದಾರೆ . ಸುಮಾರು ಭಾಷೆಗಳಲ್ಲಿ ಸಾವಿರಾರು ಪುಸ್ತಕಗಳಲ್ಲಿ ಇದನ್ನು ದಾಖಲಿಸಲಾಗಿದೆ . ಒಂದು ವರ್ಗ ಟಿಪ್ಪುರನ್ನು ಪಠ್ಯ ಪುಸ್ತಕದಿಂದ ಅಳಿಸಿದ ಮಾತ್ರಕ್ಕೆ ಚರಿತ್ರೆಯೇ ಬದಲಾಗಿ ಬಿಡುವುದಿಲ್ಲ ಟಿಪ್ಪು ಸುಲ್ತಾನ್ ಕನ್ನಡ ನಾಡಿಗೆ ಆ ಮೂಲಕ ಭಾರತಕ್ಕೆ ಕೊಟ್ಟ ಕೊಡುಗೆ- ಸಾಧನೆಗಳನ್ನು ಜನಗಳಿಗೆ ತಿಳಿಸುವ ಕೆಲಸವನ್ನು ಮಾಡುವಂಥವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ .

ನೈಜ ಇತಿಹಾಸದ ಬುನಾದಿಯ ಮೇಲೆ ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ನಾವಲಾ ಕೈಜೋಡಿಸಿದ್ದೇವೆ . ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ‘ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ‘ ಯ ಶಾಲಾ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ರ ಕುರಿತಾದ ಕೆಲವು ಅಂಶಗಳನ್ನು ತೆಗೆಯುತ್ತಿರುವ ನಿಲುವನ್ನು ನಾವು ಖಂಡಿಸುತ್ತೇವೆ .

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರು ಸಾಹಿಬ್ ಜಾದ ಸಯದ್ ಮನ್ಸೂರ್ ಅಲಿ ರವರು , ರಾಷ್ಟ್ರೀಯ ಅಧ್ಯಕ್ಷರು , ತಹರಿಕ್ -ಇ – ಖುದಾ ದಾದ್ ಹಾಗು ಟಿಪ್ಪುಸುಲ್ತಾನ್ ವಂಶಸ್ಥರು . ಸುಭಾಷ್ K R ರವರು , ವಕೀಲರು ಅನಂದ್ ಸಿದ್ಧಾರ್ಥ ಮಾಲೂರು ರವರು , ಯುವ ಮುಖಂಡರು ಫೈರೋಜ್ ಖಾನ್ ರವರು , ಅಧ್ಯಕ್ಷರು , ಜೈ ಜನ್ಮ ಭೂಮಿ ರಕ್ಷಣಾ ಪಡೆ , ಡಾ . ಖಾಸಿಂ ಸಾಬ್ ರವರು , ಸಂಚಾಲಕರು , ಯೂಥ್ ಬ್ಯುಸಿನೆಸ್ ಚೇಂಬರ್ , ಬೆಂಗಳೂರು . ವ್ಯವಸ್ಥಾಪಕರು : ತಹರಿಕ್ -ಇ – ಖುದಾ ದದ್ , ಸಂಘಟನ – ಕರ್ನಾಟಕ

City Today News

9341997936

ತಲ್ಲೀನಗೊಳಿಸುವ ಲೈವ್ ಪ್ಲಾಟ್ಫಾರಂ ವೇದಾಂತು ವೇವ್ 2.0 ಭಾರತದಲ್ಲಿ ಆನ್ಲೈನ್ ಕಲಿಕೆಯ ಮರು ಕಲ್ಪನೆ

• ವಿದ್ಯಾರ್ಥಿಗಳ ಕಲಿಕೆಯ ಅನುಭವವನ್ನು ಹೆಚ್ಚಿಸುವ ಸುಧಾರಿತ 67 ಲೈವ್ ಇಂಟರಾಕ್ಟಿವ್ ಫೀಚರ್ಗಳು
• ಪ್ರಮುಖ ವಿಶೇಷತೆಗಳಲ್ಲಿ 3ಡಿ++, ಮಲ್ಟಿ ಟೀಚರ್ ಮಾಡೆಲ್, ಪೋರ್ಟಲ್, ಎಆರ್ ಫಿಲ್ಟರ್, ಡ್ರ್ಯಾಗ್/ಡ್ರಾಪ್, ಸ್ಟಾರ್ಸ್, ಬ್ಯಾಡ್ಜಸ್ ಅಂಡ್ ಧೋಲ್, ಆನ್ ಸ್ಟೇಜ್, ಇನ್ಸ್ಟಂಟ್ ಡೌಟ್ ಸಾಲ್ವಿಂಗ್, ಲೀಡರ್ಬೋರ್ಡ್, ರಿಪೋರ್ಟ್ ಕಾರ್ಡ್ ಮತ್ತು ಮೈಲ್ಸ್ಟೋನ್ಸ್
• ವೇವ್ 2.0 ಇತರೆ ಪ್ಲಾಟ್ಫಾರಂಗಳಿಗಿಂತ ಶೇ.40ರಷ್ಟು ಕಡಿಮೆ ಬ್ಯಾಂಡ್ವಿಡ್ತ್ ಬಳಸುತ್ತದೆ
• ಕಳೆದ ಒಂದು ವರ್ಷದಲ್ಲೇ 280 ಮಿಲಿಯನ್ ವಿದ್ಯಾರ್ಥಿಗಳು ವೇದಾಂತುಗೆ ಭೇಟಿ ನೀಡಿದ್ದಾರೆ ಮತ್ತು ಅದರ ಯೂಟ್ಯೂಬ್ ಚಾನೆಲ್ಗಳು 500 ಮಿಲಿಯನ್ ವೀಕ್ಷಣೆ ಕಂಡಿವೆ

ಭಾರತ, ಮಾರ್ಚ್ 31, 2022: ಲೈವ್ ಆನ್ಲೈನ್ ಕಲಿಕೆಯಲ್ಲಿ ಮುಂಚೂಣಿಯಲ್ಲಿರುವ ವೇದಾಂತು ವಿಶ್ವದ ಅತ್ಯಂತ ಸಂವಹನ ಹಾಗೂ ಪರಿಣಾಮಕಾರಿ ತರಗತಿ ವೇವ್ 2.0(W.ಂ.ಗಿ.ಇ 2.0) ತಮ್ಮ ಕಾರ್ಯಕ್ರಮ ವಿಟೋಪಿಯಾದಲ್ಲಿ ಬಿಡುಗಡೆ ಮಾಡಿದೆ. ಈ ಪೇಟೆಂಟ್ ಮಾಡಲಾದ ತಂತ್ರಜ್ಞಾನವು ಕಲಿಕೆಯ ಅನುಭವವನ್ನು ಮರು ರೂಪಿಸಲಿದೆ ಮತ್ತು ಸಾಧನೆಯ ಮಾನ್ಯತೆಯನ್ನು ಸಂಪೂರ್ಣ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ವೇವ್(ವೈಟ್ಬೋರ್ಡ್ ಆಡಿಯೊ ವಿಡಿಯೊ ಎನ್ವಿರಾನ್ಮೆಂಟ್) ಕಲಿಕಾ ಪ್ಲಾಟ್ಫಾರಂನ 2.0 ಆವೃತ್ತಿಯಾಗಿದ್ದು ಪ್ರತಿ ಮಗುವಿಗೂ ಸ್ಫೂರ್ತಿ ತುಂಬುವ ಹಾಗೂ ಗುಣಮಟ್ಟದ ಶಿಕ್ಷಣವನ್ನು ಲಭ್ಯವಿರುವಂತೆ ಮಾಡವ ಹಾಗೂ ಭಾರತದಲ್ಲಿ ಪರಿಣಾಮವನ್ನು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಸುವ ಗುರಿ ಹೊಂದಿದೆ.
ವೇವ್ನ ಶಕ್ತಿಯು ರಿಯಲ್ ಟೈಮ್ನಲ್ಲಿ ತನ್ನ ಎಐ/ಎಂಎಲ್ ಬಳಸಿ 100+ ನಿಯತಾಂಕಗಳನ್ನು ಅಳೆಯುವ ಮಹತ್ತರ ಸಾಮಥ್ರ್ಯದಲ್ಲಿದ್ದು ವಿದ್ಯಾರ್ಥಿಯ ಸಕ್ರಿಯತೆ, ಬೋಧನೆಯ ಪರಿಣಾಮಕಾರಿತ್ವ ಮತ್ತು ಕಲಿಕೆಯ ಫಲಿತಾಂಶಗಳನ್ನು ಉತ್ತೇಜಿಸುತ್ತದೆ. ಈ ಸಂಚಲನಾತ್ಮಕ ತಂತ್ರಜ್ಞಾನವು ಫೇಸ್ ರಿಕಗ್ನಿಷನ್, ಕಂಟೆಂಟ್, ವೈಟ್ಬೋರ್ಡ್ ಯುಸೇಜ್ ಅನಾಲಿಸಿಸ್, ವರ್ಬಲ್ ಇಂಟರಾಕ್ಷನ್ ಅನಾಲಿಸಿಸ್, ಡೌಟ್ ಅನಾಲಿಸಿಸ್, ಟೋನ್ ಮತ್ತು ಸೆಂಟಿಮೆಂಟ್ ಅನಾಲಿಸಿಸ್ ಮತ್ತಿತರವುಗಳ ಮೂಲಕ ನಿಖರ ಒಳನೋಟಗಳನ್ನು ನೀಡುತ್ತದೆ.
ತಂತ್ರಜ್ಞಾನ ಹಾಗೂ ವೈಯಕ್ತೀಕರಣವು ಊಹಿಸಲಾಗದ ಪ್ರಮಾಣದಲ್ಲಿ ಬಳಕೆಗೆ ಬಂದಿದ್ದರಿಂದ ಇಂದು ವಿದ್ಯಾರ್ಥಿಗಳು ವಿನೋದ, ಸಂವಹನಾತ್ಮಕ ಮತ್ತು ಪುರಸ್ಕಾರಯುತವಾದ ಅಧ್ಯಯನ ವಿಧಾನದೊಂದಿಗೆ ಸಕ್ರಿಯವಾಗಿದ್ದು ವೇವ್ 2.0 ಅತ್ಯುತ್ತಮವಾದ ವೈಯಕ್ತಿಕಗೊಳಿಸಿದ ಬೋಧನೆ, ಕಲಿಕೆ ಮತ್ತು ಗುರುತಿಸುವಿಕೆಯನ್ನು ಪ್ರತಿ ಮಗುವಿಗೂ ತಂದಿದ್ದು ಇದು 10 ಪಟ್ಟು ಹೆಚ್ಚು ಸಕ್ರಿಯ, ಪರಿಣಾಮಕಾರಿ, ಊಹಿಸಿಕೊಳ್ಳಬಲ್ಲದು ಮತ್ತು ಕೋಟ್ಯಂತರ ವಿದ್ಯಾರ್ಥಿಗಳ ಅತ್ಯಂತ ಅಲ್ಪ ವೆಚ್ಚದಲ್ಲಿ ಪರಿವರ್ತನೀಯ ಕಲಿಕೆಯ ಫಲಿತಾಂಶಗಳಿಗೆ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಎಐ/ಎಂಎಲ್ ತಂತ್ರಜ್ಞಾನದ ಅಳವಡಿಕೆಯಿಂದ ವೇದಾಂತು ಆನ್ಲೈನ್ ಶಿಕ್ಷಣ ಕಲೆಯ ಭವಿಷ್ಯಕ್ಕೆ ಮಾನದಂಡಗಳನ್ನು ನಿಗದಿಪಡಿಸಿದೆ. ಈ ಪ್ಲಾಟ್ಫಾರಂನ ಸಮಗ್ರ ಅನುಭವವು ಸಕ್ರಿಯ ವಿದ್ಯಾರ್ಥಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಹೆಚ್ಚು ವೇಗದ ಇಂಟರ್ನೆಟ್ ಪ್ರತಿಯೊಂದು ಕಡೆಯೂ ಇನ್ನೂ ತಲುಪದ ಭಾರತಕ್ಕೆ ನೈಜವಾಗಿ ವಿನ್ಯಾಸಗೊಳಿಸಲಾದ ವೇವ್ 2.0 ಉನ್ನತ ಗುಣಮಟ್ಟದ ಕಂಟೆಂಟ್ ನೀಡುತ್ತದೆ ಮತ್ತು ಇತರೆ ಪ್ಲಾಟ್ಫಾರಂಗಳಿಗಿಂತ ಶೇ.40ರಷ್ಟು ಕಡಿಮೆ ಬ್ಯಾಂಡ್ವಿಡ್ತ್ ಬಳಸುತ್ತದೆ.
ವೇದಾಂತು ಸಿಇಒ ಮತ್ತು ಸಹ-ಸಂಸ್ಥಾಪಕ ವಂಸಿ ಕೃಷ್ಣ, “ನಮ್ಮ ಪೇಟೆಂಟ್ ಮಾಡಲಾದ ತಂತ್ರಜ್ಞಾನದ ಮೂಲಕ ಅತ್ಯುತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲು ನಾವು ಬದ್ಧರಾಗಿದ್ದೇವೆ. ಪ್ರಾರಂಭದಿಂದಲೂ ವೇವ್ ಅನ್ನು 4000+ ಶಿಕ್ಷಕರು ಬಳಸುತ್ತಿದ್ದು 70 ಮಿಲಿಯನ್ ಗಂಟೆಗಳ ಕಾಲ 24 ಮಿಲಿಯನ್ ವಿದ್ಯಾರ್ಥಿಗಳಿಗೆ ಬೋಧಿಸಲು ಬಳಸಿದ್ದಾರೆ. ಮತ್ತು ಈ ವಿದ್ಯಾರ್ಥಿಗಳು 7300+ ನಗರಗಳು ಮತ್ತು ಪಟ್ಟಣಗಳಿಂದ ಬಂದಿದ್ದು ಅದು ಭಾರತದ ಒಟ್ಟು ನಗರಗಳು ಮತ್ತು ಪಟ್ಟಣಗಳ ಶೇ.92ರಷ್ಟು ಒಳಗೊಂಡಿದೆ. ವೇವ್ 2.0 ಮೂಲಕ ನಾವು ಕುತೂಹಲ ಹುಟ್ಟಿಸುವ ಮತ್ತು ಇಡೀ ಕಲಿಕೆಯ ಪ್ರಕ್ರಿಯೆಯನ್ನು ಹೆಚ್ಚು ತಲ್ಲೀನಗೊಳಿಸುವಂತೆ ಮಾಡುವ ಉದ್ದೇಶ ಹೊಂದಿದ್ದೇವೆ. ಶಿಕ್ಷಣದ ಗಡಿಗಳನ್ನು ಮೀರುವ ಕೊಡುಗೆ ಆವಿಷ್ಕರಿಸಲು ಮತ್ತು ಭಾರತದಲ್ಲಿ ಶಿಕ್ಷಣ ಕ್ಷೇತ್ರವು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಉತ್ಸುಕರಾಗಿದ್ದೇವೆ. ಭೌಗೋಳಿಕ ಗಡಿಗಳು ಏನೇ ಇರಲಿ, ನಾವು ದೇಶಾದ್ಯಂತ ಮಕ್ಕಳಿಗೆ ಪರಿಣಾಮ ಸೃಷ್ಟಿಸುವ ಗುರಿ ಹೊಂದಿದ್ದೇವೆ” ಎಂದರು.
ಇಂದು ವೇವ್ 5 ಪೇಟೆಂಟ್ಗಳಿಗೆ ಅರ್ಜಿ ಸಲ್ಲಿಸಿದೆ ಮತ್ತು 1 ಪೇಟೆಂಟ್ಗೆ ಯ.ಎಸ್.ನಲ್ಲಿ ಈಗಾಗಲೇ ಅನುಮೋದನೆ ದೊರೆತಿದೆ.

ವೇವ್ 2.0 ತನ್ನಲ್ಲಿ 67 ಲೈವ್ ಇಂಟರಾಕ್ಟಿವ್ ಫೀಚರ್ಗಳನ್ನು ಒಳಗೊಂಡಿದ್ದು ಅದು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂವಹನಗಳು ಉತ್ತೇಜಿಸುವ ಮೂಲಕ ಅವರ ನೈಜ ಸಾಮಥ್ರ್ಯ ಅನಾವರಣಗೊಳಿಸಲು ಮತ್ತು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಸನ್ನದ್ಧರಾಗಿಸುತ್ತದೆ. ಈ ಹೊಸ ಆವೃತ್ತಿಯ ಪ್ರಮುಖಾಂಶಗಳಲ್ಲಿ-
1.ಎ ಪೋರ್ಟಲ್-  ವಿದ್ಯಾರ್ಥಿಗಳಿಗೆ ಬರೆಯಲು ಮತ್ತು ಅವರ ತಿಳಿವಳಿಕೆಗೆ ತಕ್ಕಂತೆ ನಿರೂಪಿಸಲು ಡಿಜಿಟಲ್ ನೋಟ್ಬುಕ್. ಶಿಕ್ಷಕರು ವಿದ್ಯಾರ್ಥಿಗಳಿಗೆ 1:1 ಮೌಲ್ಯಮಾಪನ ಮತ್ತು ನೆರವು ನೀಡಬಹುದು ಮತ್ತು ನೋಟ್ಬುಕ್ ಅನ್ನು ಲೈವ್ ತರಗತಿಯಲ್ಲಿ ಹಂಚಿಕೊಳ್ಳಬಹುದು.
2. ಸಂಕೀರ್ಣತೆ ನಿವಾರಿಸಲು 3ಡಿ++ ಮಾಡೆಲ್ಗಳು – ಇದು ಸಂಕೀರ್ಣ ರೇಖಾಚಿತ್ರಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ. ವಿದ್ಯಾರ್ಥಿಗಳು 3ಡಿ ಜಗತ್ತನ್ನು ಪ್ರವೇಶಿಸಬಹುದು, ಅತ್ಯಂತ ಸಣ್ಣ ವಿವರಗಳನ್ನೂ ಝೂಮ್ ಮಾಡಿ ನೋಡಬಹುದು ಮತ್ತು 3ಡಿ ಮಾಡೆಲ್ ತಿರುಗಿಸಬಹುದು.
3.ಮಲ್ಟಿ ಟೀಚರ್ ಮಾಡೆಲ್- ದೊಡ್ಡ ತರಗತಿಗಳನ್ನು ಗುಣಮಟ್ಟದಲ್ಲಿ ರಾಜಿಯಾಗದೆ ತಂಡಗಳಾಗಿ ನಿರ್ವಹಿಸಲು ತಡೆರಹಿತವಾಗಿ ಸೌಲಭ್ಯ ನೀಡುತ್ತದೆ. ಮಾಸ್ಟರ್ ಟೀಚರ್ಗಳು ಬೋಧನೆಗೆ ಗಮನ ನೀಡಿದರೆ ಕ್ಲಾಸ್ ಟೀಚರ್ ಎನಿಸಿದ ಎರಡನೆಯ ಶಿಕ್ಷಕರು ಏಕಕಾಲಕ್ಕೆ ವಿದ್ಯಾರ್ಥಿಗಳ ಅನುಮಾನಗಳನ್ನು ರಿಯಲ್-ಟೈಮ್ನಲ್ಲಿ ಪರಿಹರಿಸಬಹುದು. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಕಲ್ಪನೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲು ಅವಕಾಶ ನೀಡುತ್ತದೆ.
4. ಮೈಲಿಗಲ್ಲು, ರಿಪೋರ್ಟ್ ಕಾರ್ಡ್ ಮತ್ತು ಲೀಡರ್ಬೋರ್ಡ್ – ಇದು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಸಾಧನೆ ತೋರಲು ಉತ್ತೇಜಿಸುತ್ತದೆ. ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅಂಕಿ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಅವರ ಕ್ವಿಜ್ó ಪ್ರಯತ್ನಗಳ ಮೂಲಕ ಮೈಲಿಗಲ್ಲಿನ ಘಟನೆಗಳ ರಿಪೋರ್ಟ್ ಕಾರ್ಡ್ ಪಡೆಯಬಹುದು. `ಲೀಡರ್ಬೋರ್ಡ್’ ವಿದ್ಯಾರ್ಥಿಗಳಿಗೆ ಟಾಪ್ 15 ಪಟ್ಟಿಯಲ್ಲಿ ರ್ಯಾಂಕ್ ನೀಡುತ್ತದೆ ಅದು ಅವರು ಚಟುವಟಿಕೆಯಲ್ಲಿ ಭಾಗವಹಿಸುವ ಮತ್ತು ಸರಿಯಾದ ಉತ್ತರಗಳನ್ನು ಪಡೆಯುವುದನ್ನು ಆಧರಿಸಿರುತ್ತದೆ.

5.ಸ್ಟಾರ್ಸ್, ಬ್ಯಾಡ್ಜಸ್ ಮತ್ತು ಢೋಲ್ ಇನ್ಸ್ಟಂಟ್ಲಿ – ತಕ್ಷಣದ ತೃಪ್ತಿ ವಿದ್ಯಾರ್ಥಿಯ ಮನೋಬಲ ಹೆಚ್ಚಿಸುತ್ತದೆ. ಈ ವಿಶೇಷತೆಯು ಅದನ್ನು ಸ್ಟಾರ್ಗಳು ಮತ್ತು ಢೋಲುಗಳನ್ನು ತಕ್ಷಣವೇ ಸುರಿಸುವ ಮೂಲಕ ವಿನೋದಮಯ ಅನುಭವ ಸೃಷ್ಟಿಸುತ್ತದೆ, ರಿವಾರ್ಡ್ ಕ್ಲಾಸ್ರೂಮ್ ಪರ್ಫಾರ್ಮೆನ್ಸ್ ಮತ್ತು ವರ್ತನೆ ಮತ್ತು ಅನಿಮೇಷನ್ ಹಾಗೂ ಸೌಂಡ್ ಎಫೆಕ್ಟ್ಗಳಿಂದ ಜನ್ಮದಿನಗಳ ಸಂಭ್ರಮಾಚರಣೆ ಹೊಂದಿದೆ.
6.ಎಆರ್ ಫಿಲ್ಟರ್ಗಳು – ಕಲಿಕೆಯನ್ನು ಮನರಂಜನೆ ಮತ್ತು ಶೈಕ್ಷಣಿಕವಾಗಿಸಲು ಶಿಕ್ಷಕರು ಕಿರಿಯ ವಿದ್ಯಾರ್ಥಿಗಳಿಗೆ ಬೋಧಿಸುವಾಗ ಅವರ ಗಮನ ಭಂಗವಾಗದಿರಲು ಫಿಲ್ಟರ್ಗಳನ್ನು ಬಳಸಬಹುದು.

7. ಆನ್  ಸ್ಟೇಜ್ ಅಪ್ರಿಸಿಯೇಷನ್ – ಪ್ರೇರಣೆ ಮತ್ತು ಪ್ರಶಂಸೆಯು ಕೇಂದ್ರವಾಗಿರುವ `ಆನ್ ಸ್ಟೇಜ್’ ಶಿಕ್ಷಕರಿಗೆ ಭೌತಿಕ ತರಗತಿಯಲ್ಲಿ ಏನು ಮಾಡುತ್ತಾರೋ ಅದನ್ನೇ ಮಾಡಲು ಅವಕಾಶ ನೀಡುತ್ತದೆ, ಅದು ವಿದ್ಯಾರ್ಥಿಗಳನ್ನು ಕಪ್ಪು ಹಲಗೆಯ ಮುಂದರೆ ತರುತ್ತದೆ ಹಾಗೂ ಅವರನ್ನು ಗುರುತಿಸಲು ಮತ್ತು ಪುರಸ್ಕರಿಸಲು ಅವಕಾಶ ನೀಡುತ್ತದೆ.
8.ಟ್ಯಾಗ್, ಡ್ರ್ಯಾಗ್, ಡ್ರಾಪ್ – ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಸ್ಪರ್ಶ ಆಧರಿತ ಸಂವಹನವನ್ನು ಟ್ಯಾಗ್ ಅಂಡ್ ಡ್ರ್ಯಾಗ್/ಡ್ರಾಪ್ ಫೀಚರ್ನಿಂದ ಸರಳಗೊಳಿಸಬಹುದು. ವಸ್ತುಗಳನ್ನು ವೈಟ್ಬೋರ್ಡ್ ಸುತ್ತಲೂ ವಸ್ತುಗಳನ್ನು ಚಲಿಸಬಹುದು ಮತ್ತು ಹೊಂದಿಸಬಹುದು ಮತ್ತು ವಾಸ್ತವ ಚಿತ್ರಗಳನ್ನು ಕ್ಲಿಕ್ ಮಾಡುವ ಮೂಲಕ ಉತ್ತರಗಳನ್ನು ಆಯ್ಕೆ ಮಾಡಬಹುದು.

9.ತಕ್ಷಣ ಅನುಮಾನ ಪರಿಹಾರ-ರೆಕಾರ್ಡೆಡ್ ವಿಡಿಯೋ ಮತ್ತು ಲೈವ್ ರಿಯಲ್ – ಟೈಮ್ ತರಗತಿಗೆ ಅತ್ಯಂತ ಹೆಚ್ಚು ವ್ಯತ್ಯಾಸವೆಂದರೆ ವಿದ್ಯಾರ್ಥಿಯ ಸಂವಹನ ನಡೆಸಬಲ್ಲ ಹಾಗೂ ಅನುಮಾನಗಳನ್ನು ಕೇಳಬಲ್ಲ ಸಾಮಥ್ರ್ಯ. ವೇವ್ 2.0 `ಇನ್ಸ್ಟಂಟ್ ಡೌಟ್ ಸಾಲ್ವಿಂಗ್’ ಹೊಂದಿದ್ದು ಲೈವ್ ತರಗತಿಯಲ್ಲಿ ಹಲವು ಟೀಚರ್ ಅಸಿಸ್ಟೆಂಟ್ಸ್(ಟಿಎಗಳು) ವಿದ್ಯಾರ್ಥಿಗಳ ಅನುಮಾನಗಳನ್ನು ಪರಿಹರಿಸುವಲ್ಲಿ ಬೆಂಬಲಿಸುತ್ತಾರೆ. ಅವರ ತಂಡದ ಕೆಲಸ ಕನಸು ನನಸಾಗಿಸುತ್ತದೆ.
ವಿದ್ಯಾರ್ಥಿಗಳಿಗೆ ದೇಶದ ಮೂಲೆ ಮೂಲೆಗಳಿಂದ ಅತ್ಯುತ್ತಮ ಗುಣಮಟ್ಟದ ಶಿಕ್ಷಕರ ಲಭ್ಯತೆ ನೀಡುತ್ತದೆ ಮತ್ತು ಅವರು ಉನ್ನತ ಗುಣಮಟ್ಟದ ವೈಯಕ್ತಿಕಗೊಳಿಸಿದ ಕಂಟೆಂಟ್ ಮೂಲಕ ಅವರ ಕಲಿಕೆಯನ್ನು ರಿಯಲ್-ಟೈಮ್ ತರಗತಿಯ ನಂತರದ ವಿವರವಾದ ಒಳನೋಟಗಳನ್ನ ಪ್ರತಿ ತರಗತಿಗೆ ಅವರ ತೊಡಗಿಕೊಳ್ಳುವಿಕೆಯ ಫೀಡ್ಬ್ಯಾಕ್ನೊಂದಿಗೆ ಪಡೆಯುತ್ತಾರೆ. ದೊಡ್ಡ ಗುಂಪಿನ ತರಗತಿಗಳಿಗೆ ಈ ಪ್ಲಾಟ್ಫಾರಂ 2000 ವಿದ್ಯಾರ್ಥಿಗಳನ್ನು ಒಳಗೊಳ್ಳಬಹುದು ಮತ್ತು ವೆಬಿನಾರ್ ಗಳಿಗೆ 10000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಳ್ಳುತ್ತದೆ.

City Today News

9341997936