
ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಸಹಯೋಗದಲ್ಲಿ ಬದುಕು-ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ನಗರದಲ್ಲಿ ಇಂದು ಆಯೋಜಿಸಿದ್ದ ‘ಪತ್ರಕರ್ತರಿಗಾಗಿ ಪರ್ಯಾಯಾ ಜೀವನೋಪಾಯ ಸಾಧ್ಯತೆಗಳು’ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರು ಉದ್ಘಾಟಿಸಿದರು.

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಕೆ. ತೊಗರ್ಸಿ, ಪ್ರೆಸ್ ಕ್ಲಬ್ ಖಜಾಂಚಿ ಬಿ.ಎನ್. ಮೋಹನ್ ಕುಮಾರ್ ಮತ್ತು ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್ ಹಾಗೂ ಬದುಕು ಸಂಸ್ಥೆ ಮುಖ್ಯಸ್ಥರಾದ ಮುರಳಿ ಮೋಹನ್ ಕಾಟಿ ಉಪಸ್ಥಿತರಿದ್ದರು.
City Today News – 9341997936
