‘ಪೌರಕಾರ್ಮಿಕರ ಸಮಾವೇಶ’

‘ಪೌರಕಾರ್ಮಿಕರ ಸಮಾವೇಶ’ ಕುರಿತು ಪತ್ರಿಕಾ ಪ್ರಕಟಣೆ

03.11.2022, ಬೆಂಗಳೂರು ರಾಜ್ಯದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾವಿರಾರು ಸ್ವಚ್ಛತಾ ಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರು ಕಸ ಸಂಗ್ರಹಿಸುವ ಮತ್ತು ಮಲ ಬಾಚುವ ಕೆಲಸದಲ್ಲಿ ತೊಡಗಿದ್ದಾರೆ. ಆ ಮೂಲಕ ನಗರ, ಪಟ್ಟಣ ಸ್ವಚ್ಛತೆಯಲ್ಲಿ ಮಹತ್ವಪೂರ್ಣ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಸೇವಾನಿರತ ಸಾವಿರಾರು ಕಾರ್ಮಿಕರಿಗೆ ಕನಿಷ್ಠ ಕೂಲಿಯಾಗಲಿ, ನ್ಯಾಯೋಚಿತ ಸಂವಿಧಾನಬದ್ಧ ಕನಿಷ್ಠ ಸೌಕರ್ಯಗಳಾಗಲಿ ದೊರತಿಲ್ಲ, ಕೆಲಸದಿಂದ ದೊರೆಯುವ ಆದಾಯವನ್ನೇ ನಂಬಿ ಬದುಕುತ್ತಿರುವ ಕಾರ್ಮಿಕರು ಬೆಲೆ ಏರಿಕೆಯಿಂದಾಗಿ ದೈನಂದಿನ ಅವಶ್ಯಕತೆಗಳನ್ನು ಕೊಂಡುಕೊಳ್ಳಲು ಆಗದೇ ಪಡಿಪಾಟಲು ಅನುಭವಿಸುತ್ತಿದ್ದಾರೆ.

ಸಮಾಜದ, ಸರ್ಕಾರದ ಉದಾಸೀನತೆಯನ್ನು ವಿರೋಧಿಸುವ ಸಲುವಾಗಿ ರಾಜ್ಯದ ಎಲ್ಲಾ ನೇರ ಪಾವತಿ ಪೌರಕಾರ್ಮಿಕರು ಮತ್ತು ನೆಪಮಾತ್ರ ಗುತ್ತಿಗೆ ಪದ್ಧತಿಯಲ್ಲಿ ಶೋಷಣೆ ಅನುಭವಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ವಾಹನ ಚಾಲಕರು ಮತ್ತು ಸಹಾಯಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಒಂದೇ ಬಾರಿಗೆ ಖಾಯಂಗೊಳಿಸಲು ಒತ್ತಾಯಿಸಿ ಜುಲೈ 1 – 4, 2022 ರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರವು ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಶ್ವಾಸನೆಯನ್ನು ನೀಡಿದ್ದರು. ಈ ನಿಟ್ಟಿನಲ್ಲಿ ಪೌರಕಾರ್ಮಿಕರನ್ನು ಯಾವ ರೀತಿಯಲ್ಲಿ ಖಾಯಂಗೊಳಿಸಬೇಕೆಂದು ವರದಿ ನೀಡುವಂತೆ ಸಮಿತಿಯೊಂದನ್ನು ಅಚಿಸಲಾಗಿದ್ದು, ಹಲವಾರು ಸಂಘಟನೆಗಳನ್ನು ಒಳಗೊಂಡಂತೆ ನಮ್ಮ ಸಂಘಟನೆಯ ಪ್ರತಿನಿಧಿ ಸಹ ಈ ಸಮಿತಿಯಲ್ಲಿ ಒಬ್ಬರಾಗಿದ್ದಾರೆ. ಹೀಗಿರುವಾಗ್ಯೂ, ಸರ್ಕಾರವು ತಮ್ಮ ಆಶ್ವಾಸನೆಯನ್ನು ಮುರಿದು ರಾಜ್ಯಾದ್ಯಂತ ಕೇವಲ 11,133 ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ನಮ್ಮ ಸಂಘಟನೆಯು, ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ವಾಹನ ಚಾಲಕರು/ ಸಹಾಯಕರನ್ನು ನೇರ ಪಾವತಿ ಸಂಭಾವನೆ ವ್ಯವಸ್ಥೆಯಡಿಯಲ್ಲಿ ತಂದು ಅವರನ್ನೂ ಸಹ ಮುಂದಿನ ದಿನಗಳಲ್ಲಿ ಖಾಯಂ ಮಾಡಬೇಕು ಎಂದು ಒತ್ತಾಯವನ್ನು ಮಾಡಿದೆ.

ಒಟ್ಟಾರೆಯಾಗಿ ನೋಡಿದಾಗ ಇದು, ಸಚಿವ ಸಂಪುಟದ ನಿರ್ಣಯವನ್ನು ಉಲ್ಲಂಘಿಸಿ ನಾಡಿನ ಸ್ವಚ್ಛತಾ ಕಾರ್ಮಿಕರಿಗೆ ಮೋಸ ಮಾಡಿದಂತೆ ಕಂಡು ಬರುತ್ತದೆ. ಪೌರಕಾರ್ಮಿಕರ ಧೈಯೋದ್ದೇಶವು ಖಾಯಮಾತಿ ಎಡೆಗೆ ಇದ್ದರೂ, ಖಾಯಮಾತಿಯು ಕಾರ್ಮಿಕರ ಬದುಕಿಗೆ ಘನತೆಯನ್ನು ತರುತ್ತದೆ ಎಂಬುದು ಮೂಲ ಉದ್ದೇಶವಾಗಿರುತ್ತದೆ. ಖಾಯಮಾತಿ, ವಸತಿ, ಮಕ್ಕಳ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯತೆ, ಮುಂತಾದವುಗಳೊಂದಿಗೆ, ಪೌರಕಾರ್ಮಿಕರ ಹೋರಾಟವು ಘನತೆಯುತ್ತ ಜೀವನ ಮತ್ತು ಉತ್ತಮ ಜೀವನದೆಡೆಗೆ ‘ಪೌರಕಾರ್ಮಿಕರ ಸಮಾವೇಶ’ ವನ್ನು ಆಯೋಜಿಸಲಾಗಿದೆ.

ನಮ್ಮ ಮುಖ್ಯವಾದ ಹಕ್ಕೊತ್ತಾಯಗಳು :

  1. ಕಸ ಗುಡಿಸುವ ಪೌರಕಾರ್ಮಿಕರು, ವಾಹನ ಚಾಲಕರು, ಲೋಡರ್‌, ಸಹಾಯಕರು, ಸ್ವಚ್ಛತಾ ಕಾರ್ಮಿಕರು, ಯುಜಿಡಿ ಕಾರ್ಮಿಕರನ್ನು ಒಳಗೊಂಡಂತೆ, ಎಲ್ಲಾ ಪೌರಕಾರ್ಮಿಕರನ್ನು ಸರ್ಕಾರವು ಖಾಯಂಗೊಳಿಸಬೇಕು.

2, ಎಲ್ಲಾ ಪೌರಕಾರ್ಮಿಕರಿಗೆ ಉಚಿತ ವಸತಿ ಒದಗಿಸಬೇಕು

  1. ಪೌರಕಾರ್ಮಿಕರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ಒದಗಿಸಬೇಕು
  2. ಎಲ್ಲಾ ಸ್ವಚ್ಛತಾ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಹಣಕಾಸಿನ ನೆರವು ನೀಡಬೇಕು
  3. ನಿವೃತ್ತಿ ಹೊಂದುವ ಎಲ್ಲಾ ಕಾರ್ಮಿಕರಿಗೆ ತಲಾ ರು. 10 ಲಕ್ಷ ಮತ್ತು ಮಾಸಿಕ್ ರು. 10,000 ಪಿಂಚಣಿ ನೀಡಬೇಕು
  4. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ರು. 10 ಲಕ್ಷ ಪರಿಹಾರ ಧನ ಮತ್ತು ಕುಟುಂಬದ ಸದಸ್ಯರಿಗೆ ಅನುಕಂಪ ಉದ್ಯೋಗ ಒದಗಿಸಬೇಕು

ಬಿಬಿಎಂಪಿ ಪೌರ ಕಾರ್ಮಿಕರ ಸಂಘ, ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘ (ಎಐಸಿಸಿಟಿಯು)

‘ಪೌರಕಾರ್ಮಿಕರ ಸಮಾವೇಶ’ | ದಿನಾಂಕ: 06-11-2022, ಸ್ಥಳ: ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರು

– AICCTU

City Today News – 9341997936

Leave a comment

This site uses Akismet to reduce spam. Learn how your comment data is processed.