ಶ್ರೀ ದಾರಿ ಆಂಜನೇಯ ಸ್ವಾಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹನುಮೋತ್ಸವ

ದಿನಾಂಕ: 05.12.2022 ರಿಂದ 10.12. 2022 ರವರೆಗೆ
ಸ್ಥಳ: ಶ್ರೀ ದಾರಿ ಆಂಜನೇಯ ಸ್ವಾಮಿ ದೇವಸ್ಥಾನ, ಯಶವಂತಪುರ, ಬೆಂಗಳೂರು.

05.12.2022 ರಂದು ಸೋಮವಾರ ಸಂಜೆ 5.30 ಗಂಟೆಗೆ ಕರ್ನಾಟಕದ ಹೆಸರಾಂತ ಭಜನಾ ಸಾಮ್ರಾಟ್ ವೆಂಕಟಪ್ಪ ಹಾಗೂ ಗೋಪಾಲಕೃಷ್ಣ ತಂಡದಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ದಿನ ಬೆಳಿಗ್ಗೆ 6.00 ಗಂಟೆಯಿಂದ ವಿವಿಧ ಸಾಂಸ್ಕೃತಿಕ, ದೇವತಾ ಕಾರ್ಯಗಳು ಹಾಗೂ ವಿಶೇಷ ಅಭಿಷೇಕ, ಹೋಮ-ಹವನ ಹಾಗೂ ಪೂಜಾ ಕೈಂಕರ್ಯಗಳು ನಡೆಯಲಿವೆ.

ಅಧ್ಯಕ್ಷತೆ ವಹಿಸುವವರು:

ಶ್ರೀ ಸಿ.ಎನ್.ಅಶ್ವತ್ಥನಾರಾಯಣ, ಐಟಿಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ

ಶ್ರೀ ಸುರೇಶ್ ಗೌಡರು, ಸಮಾಜಸೇವಕರು ಹಾಗೂ ಬಡವರ ಹಿತಚಿಂತಕರು

ಶ್ರೀ ಜೈಪಾಲ್, ಬಿಬಿಎಂಪಿ ಮಾಜಿ ಸದಸ್ಯರು.

ದಿನಾಂಕ: 10 ಡಿಸೆಂಬರ್ 2022 ರಂದು ಸಂಜೆ 5.30 ಗಂಟೆಯಿಂದ ಸಂತೃಪ್ತಿ ಬಳಗದಿಂದ ಯಶವಂತಪುರದ ಪ್ರಮುಖ ಬೀದಿಗಳಲ್ಲಿ ಆಂಜನೇಯ ರಥಯಾತ್ರೆ ನಡೆಯಲಿದೆ.

ಭಕ್ತಾದಿಗಳು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶ್ರೀ .ಅಂಬರೀಶ್,
ಧರ್ಮದರ್ಶಿಗಳು
ಶ್ರೀ ದಾರಿ ಆಂಜನೇಯ ಸ್ವಾಮಿ ಚಾರಿಟಬಲ್ ಟ್ರಸ್ಟ್‌, (ರಿ.) ಯಶವಂತಪುರ, ಪ್ರಕಟಣೆಯಲ್ಲಿ ಕೋರಿದ್ದಾರೆ.

City Today News – 9341997936

Leave a comment

This site uses Akismet to reduce spam. Learn how your comment data is processed.