ಸವಿತಾ ಸಮುದಾಯ ಒಳಮೀಸಲಾತಿಗಾಗಿ ಹೋರಾಟ

ಸವಿತಾ ಸಮುದಾಯಕ್ಕೆ ಒಳಮೀಸಲಾತಿಗಾಗಿ ಸರ್ಕಾರಕ್ಕೆ ಈ ಹಿಂದೆ ಹಲವು ಬಾರಿ ಮನವಿ ಪತ್ರಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸವಿತಾ ಸಮಾಜವು ಹಿಂದಿನಿಂದಲೂ ಸಮುದಾಯದಲ್ಲಿ ಕುಲಕಸುಬು ವೃತ್ತಿಯನ್ನಾಗಿ ಮಾಡಿಕೊಂಡು ಬಂದಿರುವ ಏಕೈಕ್ಯ ಕಸುಬಾಗಿದೆ ಇತಿಹಾಸದಿಂದಲು ನಮ್ಮ ವೃತ್ತಿಯನ್ನು 2ಎ ವರ್ಗಕ್ಕೆ ಸೇರಿಸಿದ್ದರು ಸಹ ಯಾವುದೇ ಸವಲತ್ತು ನೀಡದೆ ಕೇವಲ ಕಣೋರೆಸುವ ಕೆಲಸವಾಗಿದೆ 2ಎ ವರ್ಗದಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಬಲಿಷ್ಠ ಸಮುದಾಯಗಳ ನಡುವೆ ಸರ್ಕಾರದ ಯಾವುದೆ ಸವಲತ್ತುಗಳು ನಮ್ಮ ಸಮೂದಾಯದವರೆಗೆ ತಲುಪಲು ಸಾದ್ಯಾವಗುತ್ತಿಲ್ಲ. ಇದರ ಬಗ್ಗೆ ಧ್ವನಿ ಎತ್ತಲು ಸಹ ನಮ್ಮ ಸಮಾಜದಲ್ಲಿ ಯಾವುದೇ ಪ್ರಬಲ ನಾಯಕರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿಯಾದರೂ ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಪ್ರಬಲ ಜಾತಿಗಳ ಮದ್ಯದಲ್ಲಿ ನಮ್ಮ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡಲು ಮನವಿ ಮಾಡುತ್ತೇವೆ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸದೆ ಹೋದರೆ ರಾಜ್ಯದಾದಂತ್ಯ ಉಗ್ರ ಹೋರಾಟ ನಡೆಸುತ್ತೇವೆ

ನಮ್ಮ ಸವಿತಾ ಸಮಾಜಕ್ಕೆ ಮಾರಕವಾದ ಶ್ರೀ ಸವಿತಾನಂದನಾಥ ಸ್ವಾಮೀಜಿ

ಶ್ರೀ ಸವಿತಾನಂದನಾಥ ಸ್ವಾಮೀಜಿಯವರು ನಮ್ಮ ಸವಿತಾ ಸಮಾಜದ ಪೀಠಾಧ್ಯಕ್ಷರೆಂದು ಹೇಳಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಹಿಸಿರುತ್ತಾರೆ, ಇವರ ಬಗ್ಗೆ ಆರೋಪ ಮತ್ತು ಅವ್ಯವಹಾರಗಳು ಪತ್ರಿಕಾ ವರದಿಗಳ ಮೂಲಕ ನಮಗೆ ತಿಳಿದಿರುತ್ತದೆ. ಈ ಹಿಂದೆ ಗೋಶಾಲೆ ಮಾಡಲೆಂದು ನಮ್ಮ ಸಮಾಜದ ಪ್ರತಿ ಅಂಗಡಿಯಲ್ಲಿ ಚಂದ ವಸೂಲಿ ಮಾಡಿ ನಮ್ಮ ಸಮಾಜದ ಕೆಲವು ನಾಯಕರ ಬಗ್ಗೆಯೆ ಅವಹೇಳನಕಾರಿ ಮಾತುಗಳನ್ನು ಹೇಳಿರುತ್ತಾನೆ. ಕೆಲವು ಮುಖಂಡರ ಜೊತೆ ಸೇರಿ ಇಜೆಂಟ್ ಎಂಬ ಕಂಪನಿಯ ಹೆಸರಲ್ಲಿ ಹಣ ವಸೂಲಾತಿ ಮಾಡಿರುವ ಆರೋಪವು ಕೇಳಿಬಂದಿದೆ ಮೇಲ್ಕಂಡ ಸಮಾಜದ ವತಿಯಿಂದ ತಿಲಿಸಲಾಯಿತು.

ಟಿ . ತ್ಯಾಗರಾಜ್- ರಾಜ್ಯ ಸಂಘಟನಾ ಕಾರ್ಯದರ್ಶಿ., ರವಿಕುಮಾರ್- ರಾಜ್ಯ ಯುವ ಘಟಕದ ಅಧ್ಯಕ್ಷರು, ಟಿ ಲಕ್ಷ್ಮೀಕಾಂತ್ ಹಾಗೂ ರಾಮು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು

City Today News – 9341997936

Leave a comment

This site uses Akismet to reduce spam. Learn how your comment data is processed.