ಜ. 8 ರಂದು ವಿಶ್ವೇಶ್ವರಪುರಂನಲ್ಲಿ ಬೃಹತ್ ಉಚಿತ ಅಂಗಾಂಗ ಜೋಡಣಾ ಶಿಬಿರ.  

ನಾರಾಯಣ್ ಸೇವಾ ಸಂಸ್ತಾನ್  ಕುಟುಂಬ ಮತ್ತು ಜನರಲ್ ಮೋಟಾರ್ಸ್ ಟೆಕ್ನಿಕಲ್ ಸೆಂಟರ್ ನಿಂದ ಜ. 8 ರಂದು ವಿಶ್ವೇಶ್ವರಪುರಂನಲ್ಲಿ ಬೃಹತ್ ಉಚಿತ ಅಂಗಾಂಗ ಜೋಡಣಾ ಶಿಬಿರ.   

ಬೆಂಗಳೂರು: ವಿಶ್ವೇಶ್ವರಪುರಂನಲ್ಲಿ ಜ. 8 ರಂದು ಉದಯಪುರದ ನಾರಾಯಣ್‌ ಸೇವಾ ಸಂಸ್ತಾನ್ ಕುಟುಂಬ ಮತ್ತು ಜನರಲ್ ಮೋಟಾರ್ಸ್ ಟೆಕ್ನಿಕಲ್ ಸೆಂಟರ್ ಇಂಡಿಯಾದಿಂದ ಉಚಿತವಾಗಿ ಅತ್ಯಾಧುನಿಕ ಬೃಹತ್ ಅಂಗಾಂಗ ಜೋಡಣಾ ಶಿಬಿರ ಆಯೋಜಿಸಲಾಗಿದೆ.

ಅಪಘಾತ ಮತ್ತಿತರ ಕಾರಣಗಳಿಗಾಗಿ ಅಂಗಾಂಗಳನ್ನು ಕಳೆದುಕೊಂಡಿರುವ ಹಾಗೂ ಜನ್ಮತಃ ಸಮಸ್ಯೆಯುಳ್ಳ ದಿವ್ಯಾಂಗರಿಗಾಗಿ ಬೃಹತ್‌ ಸಮಾವೇಶ ಆಯೋಜಿಸಿದ್ದು, ಅಗತ್ಯವಿರುವವರು ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ನಾರಾಯಣ್ ಸೇವಾ ಸಂಸ್ತಾನ್ ಕುಟುಂಬದ ಮುಖ್ಯಸ್ಥ ಕುಂಬಿಲಾಲ್ ಮೆನೇರಿಯಾ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವೇಶ್ವರ ಪುರಂನ ಮಿನರ್ವಾ ಸರ್ಕಲ್‌ ಬಳಿ ಇರುವ ಬಿ. ಅರಸೋಜಿ ರಾವ್ ಕಲ್ಯಾಣ ಮಂಟಪದಲ್ಲಿ ಬೃಹತ್ ಶಿಬಿರವನ್ನು ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಉದ್ಘಾಟಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಹುಟ್ಟಿನಿಂದಲೇ ಸಮಸ್ಯೆ ಇರುವವರನ್ನು ಪತ್ತೆ ಮಾಡಿ ರಾಜಸ್ಥಾನದ ಉದಯಪುರದಲ್ಲಿ ಶಸ್ತ್ರ ಚಿಕತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಶಸ್ತ್ರಚಿಕಿತ್ಸೆ ಸಂಪೂರ್ಣ ಉಚಿತವಾಗಿರಲಿದೆ ಹೆಚ್ಚಿನ ಮಾಹಿತಿಗೆ : – 9341200200

ಚಿಕಿತ್ಸೆಗೆ ಬರುವವರು ಆಧಾರ್, ದಿವ್ಯಾಂಗ ಪುಮಾಣ ಪತ್ರದ ಎರಡು ನಕಲು ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ಹೇಳಿದರು. –

City Today News – 9341997936

Leave a comment

This site uses Akismet to reduce spam. Learn how your comment data is processed.