ಸಂಕಷ್ಟದಲ್ಲಿ ಇರುವ ಕೋಳಿ ಸಾಗಾಣಿಕೆದಾರ ರೈತರಿಗೆ ಕೂಡಲೇ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ರೀತಿಯಲ್ಲಿ ಪ್ರತಿ ಮಾಂಸದ ಕೋಳಿಗೆ ಪ್ರೋತ್ಸಾಹ ಧನವಾಗಿ 5 ರೂ. ಗಳನ್ನು ನೀಡಬೇಕು.

ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನ ರೂ. 5 ರೀತಿಯಲ್ಲಿಯೆ ಪ್ರತಿ ಮಾಂಸದ ಕೋಳಿಗೆ ಪ್ರೋತ್ಸಾಹ ಧನವಾಗಿ 5 ರೂ. ಗಳನ್ನು ಕೋಳಿ ಸಾಕಾಣಿಕೆದಾರ ರೈತರಿಗೆ ನೀಡಬೇಕು, ಹಲವು ರಾಜ್ಯ ಸರ್ಕಾರಗಳು, ನಮ್ಮ ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಘೋಷಣೆ ಮಾಡಿರುವ ರೀತಿಯಲ್ಲಿ ‘ಕೋಳಿ ಸಾಕಾಣಿಕೆ’ಯನ್ನು, ‘ಕೃಷಿ’ ಎಂದು ಘೋಷಣೆ ಮಾಡಬೇಕು ಮತ್ತು ಕೃಷಿ, ರೇಷ್ಮೆ ಬೆಳೆಗಾರರಿಗೆ ನೀಡುತ್ತಿರುವ ಹಲವಾರು ಸೌಲಭ್ಯಗಳನ್ನು ಕೋಳಿ ಸಾಕಾಣಿಕೆದಾರ ರೈತರಿಗೂ ವಿಸ್ತರಿಸಬೇಕು, ಸುಮಾರು 10,000 ಕೋಳಿ ಸಾಕಾಣಿಕೆ ರೈತರು, ಹತ್ತಾರು ಕಂಪನಿಗಳು, ಹತ್ತಾರು ಸಾವಿರ ಸಗಟು, ಚಿಲ್ಲರೆ ವ್ಯಾಪಾರಸ್ಥರು, ಅಸಂಖ್ಯಾತ ಕೃಷಿ ಕೂಲಿಕಾರರು ಮತ್ತು ದೊಡ್ಡ ಪ್ರಮಾಣದ ಕೋಳಿ ಮಾಂಸ ತಿನ್ನುವ ಗ್ರಾಹಕರ ಹಿತಗಳನ್ನು ರಕ್ಷಿಸಲು ಮತ್ತು ಕುಕ್ಕುಟ್ಟ ಕ್ಷೇತ್ರವನ್ನು, ಹೈನುಗಾರಿಕೆಯ ಕ್ಷೇತ್ರಕ್ಕಿಂತ ಬಲಿಷ್ಠವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ‘ಸಮಗ್ರ ಕಾನೂನು’ನ್ನು ಈ ಮುಂಬರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಆಗ್ರಹಿಸುತ್ತದೆ.

ರಾಜ್ಯದಲ್ಲಿ ಸುಮಾರು 10,000 ಕೋಳಿ ಸಾಕಾಣಿಕೆದಾರ ರೈತರು ವಿವಿಧ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಮಾಂಸದ ಕೋಳಿ (Broiler) ಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕುಕ್ಕುಟ ಕ್ಷೇತ್ರವು ಬಾರಿ ವೇಗವಾಗಿ ಬೆಳೆಯುತ್ತಿದೆ. ವಾರ್ಷಿಕ ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆಯುತ್ತಿದ್ದು, ಮತ್ತಷ್ಟು ಅಭಿವೃದ್ಧಿ ಮಾಡಲು ಉತ್ತಮ ಅವಕಾಶಗಳಿವೆ. ಆದರೆ ಸರ್ಕಾರಗಳು ಈ ಕುರಿತು ಕನಿಷ್ಠ ಗಮನವನ್ನು ಹರಿಸಿಲ್ಲ. ಇಂತಹ ಸ್ಥಿತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕೋಳಿ ಸಾಕಾಣಿಕೆದಾರ ರೈತರು, ಸಂಘಟಿತರಾಗಿ ಕಳೆದ ಹತ್ತು ವರ್ಷಗಳಿಂದ ಹತ್ತಾರು ಹೋರಾಟಗಳನ್ನು ನಡೆಸಿದ್ದಾರೆ. ಫಲವಾಗಿ ಕಳೆದ 7-8 ವರ್ಷಗಳಲ್ಲಿ ಸರ್ಕಾರದ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಬೇರೆ ರಾಜ್ಯಗಳಲ್ಲಿ ಇರುವಂತೆ ರಾಜ್ಯದಲ್ಲಿಯೂ ‘ಕೋಳಿ ಸಾಕಾಣಿಕೆ’ಯನ್ನು ‘ಕೃಷಿ’ ಎಂದು ಘೋಷಣೆ ಮಾಡಬೇಕು. ಸಾವಿರಾರು ಕೋಟಿ ರೂ.ಗಳು, ವ್ಯವಹಾರ ಮತ್ತು ಲಕ್ಷಾಂತರ ಜನರಿಗೆ ಸಂಬಂಧಪಟ್ಟ ಈ ಕ್ಷೇತ್ರದಲ್ಲಿ ‘ಸರ್ಕಾರ’ವೇ ಇಲ್ಲದ ಗಂಭೀರ ಲೋಪವನ್ನು ಸರಿಪಡಿಸಲು ಮತ್ತು ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ‘ಸಮಗ್ರ ಕಾನೂನುನು ರೂಪಿಸಬೇಕು, ರೈತರ ಸಾಕಾಣಿಕೆ ದರ ನಿಗದಿ ಇತ್ಯಾದಿ ಸಮಸ್ಯೆಗಳು ಪರಿಹಾರವಾಗಬೇಕು, ಸಂಕಷ್ಟದಲ್ಲಿ ಇರುವ ಕೋಳಿ ಸಾಗಾಣಿಕೆದಾರ ರೈತರಿಗೆ ಕೂಡಲೇ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ರೀತಿಯಲ್ಲಿ ಪ್ರತಿ ಮಾಂಸದ ಕೋಳಿಗೆ ಪ್ರೋತ್ಸಾಹ ಧನವಾಗಿ 5 ರೂ. ಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರದ ಜೊತೆಗೆ ಇತ್ತೀಚಿನ ಸಭೆಗಳಲ್ಲಿ ಒತ್ತಾಯಿಸಲಾಗಿದೆ. ನಮ್ಮ ಬೇಡಿಕೆಗಳ ಸರ್ಕಾರದ ಪರಿಶೀಲನೆಯ ಹಂತದಲ್ಲಿ ಇವೆ.

ಈ ಹಿನ್ನೆಲೆಯಲ್ಲಿ ಕೋಳಿ ಸಾಗಾಣಿಕೆದಾರ ರೈತರ ಬೇಡಿಕೆಗಳನ್ನು ಈ ಮುಂಬರುವ ಬಜೆಟಿನಲ್ಲಿ ಈಡೇರಿಸಲೇಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕೋಳಿ ಸಾಗಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಒತ್ತಾಯಿಸುತ್ತದೆ ಎಂದರು.

ಜಿ.ಸಿ. ಬಯ್ಯಾರೆಡ್ಡಿ – ಗೌರವ ಅಧ್ಯಕ್ಷರು, ಪ್ರಕಾಶ್‌ ರೆಡ್ಡಿ ರಾಜ್ಯ – ಸಹ ಕಾರ್ಯದರ್ಶಿ, ಜೆ.ಸಿ. ಮಂಜುನಾಥ -ಅಧ್ಯಕ್ಷರು, ಕೃಷ್ಣಮೂರ್ತಿ-ಅಧ್ಯಕ್ಷರು ಕೋಲಾರ ಜಿಲ್ಲೆ, ಡಿ.ಕೆ. ಮುನಿವೆಂಕಟಗೌಡ – ರಾಜ್ಯ ಉಪಾಧ್ಯಕ್ಷರು, ಶ್ರೀಧರ್ ರೆಡ್ಡಿ- ಪ್ರಧಾನ ಕಾರ್ಯದರ್ಶಿ ಕೋಲಾರ ಜಿಲ್ಲೆ ವೆಂಕಟರಮಣ ರೆಡ್ಡಿ ಮತ್ತು ಯಶ್ವಂತ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತರಿದ್ದರು

City Today News – 9341997936

Leave a comment

This site uses Akismet to reduce spam. Learn how your comment data is processed.