ವಿಧಾನ ಸಭಾ 2023ರ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯಿಂದ ಆಕಾಂಕ್ಷಿ ಅಭ್ಯರ್ಥಿಯಾಗಿ ಆರ್.ವಿ. ಭೂತಪ್ಪ ಅರ್ಜಿ

ವಿಧಾನ ಸಭಾ 2023ರ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯಿಂದ ಆಕಾಂಕ್ಷಿ ಅಭ್ಯರ್ಥಿಯಾಗಿ ಆರ್.ವಿ. ಭೂತಪ್ಪ ಅರ್ಜಿ (ಮಾಲೂರು ವಿಧಾನ ಸಭಾ ಕ್ಷೇತ್ರ-149 ಕೋಲಾರ ಜಿಲ್ಲೆ ಕರ್ನಾಟಕ ರಾಜ್ಯ)

ಉಲ್ಲೇಖ: ಸದಸ್ಯತ್ವ ಸಂಖ್ಯೆ: 3055721210, ಮಾಡಿರುವ ನಾನು ಆಕಾಂಕ್ಷಿತ ಅಭ್ಯರ್ಥಿಯಾಗಿ ಭಾರತೀಯ ಜನತಾ ಪಾರ್ಟಿಯಿಂದ ವಿಧಾನ ಸಭೆಗೆ ಪರಿಗಣಿಸಲು ನನ್ನ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ, ಈ ಸಂಬಂಧವಾಗಿ ತಮ್ಮ ಸಹಾನುಭೂತಿಯ ಪರಿಗಣನೆಗಾಗಿ ಸ್ವ-ವಿವರದ ಅಂಶಗಳನ್ನು ಈ ಮೂಲಕ ತರಬಯಸುತ್ತೇನೆ. ರಾಜೇನಹಳ್ಳಿ ಗ್ರಾಮ, ಮಾಸ್ತಿ ಹೋಬಳಿ, ತಾಲ್ಲೂಕು, ಕೋಲಾರ ಜಿಲ್ಲೆ, ಕರ್ನಾಟಕ ರಾಜ್ಯದವನಾಗಿದ್ದು, ಇದು ನನ್ನ ಹುಟ್ಟೂರು ಆಗಿರುತ್ತದೆ. ನಾನು ಗಂಗಮಾತಸ್ಯ / ಬೆಸ್ತರು ಸಮುದಾಯಕ್ಕೆ ಸೇರಿದ್ದು, ಇದು ಹಿಂದುಳಿದ ವರ್ಗಕ್ಕೆ ಸೇರಿರುತ್ತದೆ.

ಮಾಲೂರು: ವಿಧಾನ ಸಭಾ ಕ್ಷೇತ್ರದಲ್ಲಿ ಗಂಗಮಾತಸ್ಥ | ಬೆಸ್ತರು ಸಮುದಾಯದಲ್ಲಿ 15 ಸಾವಿರ ಮತದಾರರಿದ್ದು, ರಾಜ್ಯದಲ್ಲಿ ಒಟ್ಟು 50ಲಕ್ಷ ಮತದಾರರು ಈ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ (ಈ ಪ್ರವರ್ಗಕ್ಕೆ ಕೋಳಿ, ಜನಾಂಗ, ಅಂಬಿಗ, ಮೊಗವೀರ, ಕಬ್ಬಳಿಗೆ ಮತ್ತು ಬರೆಕಾರ ಸಮುದಾಯಗಳು ಒಳಗೊಂಡಿರುತ್ತವೆ). ಸಮಾಜದ ನಾಗರೀಕ ಪ್ರಜೆಯಾಗಿ ನಾನು ಅನೇಕ ಸಂಘ ಸಂಸ್ಥೆಗಳಿಗೆ, ಬಡ ಕುಟುಂಬದವರಿಗೆ ವೈದ್ಯಕೀಯ ಸೌಲಭ್ಯ, ಹಣಕಾಸು ನೆರವು ಮತ್ತು ಮೂಲಭೂತ ಸೌಲಭ್ಯಗಳನ್ನು ಅವಶ್ಯಕತೆಗೆ ಅನುಗುಣವಾಗಿ ಒದಗಿಸುತ್ತಿದ್ದೇನೆ, ಇದಲ್ಲದೇ, ವೈಯಕ್ತಿಕ ಸದಸ್ಯರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ.

ಮೇಲಿನ ಸೌಲಭ್ಯಗಳಲ್ಲದೇ ಕನ್ನಡ ಸಂಘಗಳಿಗೆ ಇತರೆ ಸಂಘ ಸಂಸ್ಥೆಗಳಿಗೆ ಬಡ ಕುಟುಂಬದ ಸುದಾರಣೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ವೆಚ್ಚ / ಸೌಲಭ್ಯಗಳನ್ನು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆಯಲ್ಲಿ ಒದಗಿಸಲಾಗುತ್ತಿದ್ದೆ.

ನಾನು ಎಂ.ಕಾಂ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು, ರಾಜ್ಯದ ನಿಗಮಗಳಾದ ಕರ್ನಾಟಕ ಸಹಕಾರಿ ಹಾಲು ಒಕ್ಕೂಟ ಮಹಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಒಟ್ಟು 36 ವರ್ಷಗಳ ಸರ್ಕಾರದ ಸೇವೆಯನ್ನು ಮಾಡಿ ದಿನಾಂಕ 30.09.2022ರಂದು ಉಪ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿರುತ್ತೇನೆ.

ಮೇಲಿನ ಹಿನ್ನಲೆಯನ್ನು ಪರಿಗಣಿಸಿ ಮಾಲೂರು ವಿಧಾನ ಸಭಾ ಕ್ಷೇತ್ರಕ್ಕೆ ನನ್ನನ್ನು ಭಾರತಿಯ ಜನತಾ ಪಾರ್ಟಿಯಿಂದ ಅಭ್ಯರ್ಥಿಯನ್ನಾಗಿ 2023ರ ಚುನಾವಣೆಗೆ ಪರಿಗಣಿಸಲು ತಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಂದು ಆರ್.ವಿ. ಭೂತಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

Leave a comment

This site uses Akismet to reduce spam. Learn how your comment data is processed.