
ಕಾಂಗ್ರೆಸ್ ನ ಪ್ರಭಾವಿ ರಾಜಕಾರಿಣಿಯಾದ ಆರ್.ಪ್ರಭಾಕರ್ ರೆಡ್ಡಿಯವರು ಪ್ರೇಮಲತ ಎಂಬ ಅಮಾಯಕ ಮಹಿಳೆಯ ಸುಮಾರು 4 ಎಕರೆ ಜಮೀನು ದೌರ್ಜನ್ಯದಿಂದ ಲಪಟಾಯಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವಾಗಿ ಮಾರಾಟ ಮಾಡಿರುವುದರ ಬಗ್ಗೆ ಒಬ್ಬ I.P.S. ದರ್ಜೆಯ ಅಧಿಕಾರಿಯನ್ನು ನೇಮಿಸಿ ಸೂಕ್ತ ತನಿಖೆ ನಡೆಸಿ ನೊಂದ ಮಹಿಳೆಯಾದ ಪ್ರೇಮಲತ ಎಂಬುವವರಿಗೆ ನ್ಯಾಯ ದೊರಕಿಸಿ ಕೊಡುವ ಬಗ್ಗೆ.
ಈ ಮೂಲಕ ತಮ್ಮಲ್ಲಿ ತಿಳಿಯಪಡಿಸುವುದೆನೆಂದರೆ ಹುಲ್ಲಹಳ್ಳಿ ಗ್ರಾಮ, ಜಿಗಣಿ ಹೋಬಳಿ, ಆನೇಕಲ್ ತಾಲ್ಲೂಕು, ಸರ್ವೆ.ನಂ. 219/2, 1 ಎಕರೆ 32 ಗುಂಟೆ, ಸರ್ವೆ.ನಂ. 219/1, 33 ಗುಂಟೆ ಸರ್ವೆ.ನಂ. 219/2, 1 ಎಕರೆ 3 ಗುಂಟೆ ಸರ್ವೆ.ನಂ. 217/2, 1 ಎಕರೆ 2 ಗುಂಟೆ ಜಮೀನು ಪ್ರೇಮಲತ ರವರ ಪತಿಯಾದ ದಿವಂಗತ ಕುಶಾಲ್ ರಾಜ್ ರವರು ಖರೀದಿಸಿ ಖಾತೆ ಕಂದಾಯ ಪಾವತಿ ಮಾಡಿ ಸ್ವಾಧೀನದಲ್ಲಿದ್ದರು.
21014 ರಂದು ಕುಶಾಲ್ ರಾಜ್ ರವರು ನಿಧನಹೊಂದಿದ ನಂತರ ಸದರಿ ಜಮೀನುಗಳ ಪಕ್ಕದ ಜಮೀನಿನ ಮಾಲೀಕರಾದ ಆರ್.ಪ್ರಭಾಕರ್ ರೆಡ್ಡಿ ಯವರು ತನ್ನ ರಾಜಕೀಯ, ಮತ್ತು ರೌಡಿಸಂ ಪ್ರಭಾವ ಬಳಸಿ ಪ್ರೇಮಲತ ಎಂಬುವವರಿಗೆ ಸೇರಿದ ಜಮೀನುಗಳನ್ನು ದೌರ್ಜನ್ಯವಾಗಿ ಅತಿಕ್ರಮಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸುಮಾರು 100 ಜನರಿಗೆ ಸೈಟುಗಳಾಗಿ ವಿಂಗಡಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಮಾಡಿರುತ್ತಾರೆ.
ಈ ವಿಚಾರವಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಆರ್.ಪ್ರಭಾಕರ್ ರೆಡ್ಡಿ ಯವರ ಮೇಲೆ ಮೋಸ ಅತಿಕ್ರಮ ಪ್ರವೇಶ ಕೇಸು CR.NO.135/2023, U/S 420, 447, 465, ದಾಖಲಾಗಿರುತ್ತದೆ. ಆದರೆ ಪ್ರಭಾಕರ್ ರೆಡ್ಡಿ ಯವರ ರಾಜಕೀಯ ಮತ್ತು ಆತನ ರೌಡಿಸಂ ಪ್ರಭಾವದಿಂದ ಇದುವರೆವಿಗೂ ಆತನ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಿರುವುದಿಲ್ಲ. ಹಾಗೂ ಸದರಿ ಪ್ರಭಾಕರ್ ರೆಡ್ಡಿಯವರ ಮೇಲೆ ಸುಮಾರು ಭೂ ಅಕ್ರಮ, ಮೋಸದ ಕೇಸುಗಳು ದಾಖಲಾಗಿರುತ್ತವೆ.
ಆರ್.ಪ್ರಭಾಕರ್ ರೆಡ್ಡಿಯವರು ಪ್ರಬಲ ರಾಜಕೀಯ ವ್ಯಕ್ತಿ ಮತ್ತು ಸುಮಾರು ರೌಡಿಗಳ ಸಂಪರ್ಕ ಹೊಂದಿದ್ದು, ಹಣದ ಪ್ರಾಬಲ್ಯವಿರುವುದರಿಂದ ಈ ಪ್ರಕರಣವನ್ನು ಒಬ್ಬ ಹಿರಿಯ I.P.S. ಅಧಿಕಾರಿಯನ್ನು ನೇಮಿಸಿ ತನಿಖೆ ನಡಿಸಿ ಆರ್.ಪ್ರಭಾಕರ್ ರೆಡ್ಡಿ ಯವರ ಮೇಲೆ ಕ್ರಮ ಜರುಗಿಸಿ ಪ್ರೇಮಲತ ಎಂಬ ನೊಂದ ಮಹಿಳೆಗೆ ನ್ಯಾಯದೊರಕಿಸಿ ರಕ್ಷಣೆ ನೀಡಬೇಕೆಂದು ನಮ್ಮ ಸಂಘಟನೆಯ ವತಿಯಿಂದ ಕೋರಿಕೊಳ್ಳುತ್ತೇವೆ ಎಂದು
ನಜೀಬ್ ಎಂ.ಎ, ರಾಜ್ಯಾ-ಕಾರ್ಯಾದ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.
City Today New
9341997936
