
ಕರ್ನಾಟಕ ರಾಜ್ಯ ಅಕ್ಕಿಗಿರಣಿದಾರರ ಸಂಘದ ಸದಸ್ಯರು ದಿ:19.06.2023ರಂದು ಸಭೆ ಸೇರಿ ಈ ಕೆಳಕಂಡ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ತಮ್ಮ ಉದ್ಯಮಗಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು ಮುಂದಿನ ದಿನಗಳಲ್ಲಿ ಉದ್ಯಮಗಳನ್ನು ನಡೆಸಲು ಸಾಧ್ಯವಾಗದ ಕಾರಣ ಸರ್ಕಾರಕ್ಕೆ ಗಮನ ತರಲು ಉದ್ದೇಶಿಸಿ ಪತ್ರಿಕಾ ಗೋಷ್ಥಿ.
1. ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಣಯದಂತೆ A.P.M.C. ಕಾಯ್ದೆ ರದ್ದತಿಯನ್ನು ಸರ್ಕಾರದ ನಿಲುವಿನಂತೆ ಅಕ್ಕಿ ಗಿರಣಿದಾರರು ಕೂಡ ಕಾಯ್ದೆ ಅಡಿಯಲ್ಲಿ ಸೇರಿಸಿದ್ದಲ್ಲಿ ಅಕ್ಕಿಗಿರಣಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಮತ್ತು ಮುಂಬರುವ ದಿನಗಳಲ್ಲಿ ಪೂರ್ಣ ಸ್ಥಗಿತಗೊಳ್ಳುವ ಸಂಭವವಿರುತ್ತದೆ. ಈ ಕಾರಣದಿಂದ A.P.M.C. ಕಾಯ್ದೆಯಿಂದ ಅಕ್ಕಿ ಗಿರಣಿದಾರರನ್ನು ಸಂಪೂರ್ಣವಾಗಿ ಹೊರತುಪಡಿಸಿ ಕಾಯ್ದೆಯನ್ನು ಮಾಡತಕ್ಕದ್ದು.
2. ಇತ್ತೀಚಿನ ವಿದ್ಯುತ್ ದರಗಳ ಅತಿಹೆಚ್ಚು ಏರಿಕೆ ಅವೈಜ್ಞಾನಿಕವಾಗಿದ್ದು ಅಕ್ಕಿಗಿರಣಿ ಕಾಲೋಚಿತ ಉದ್ಯಮ (Seasonal) ಆಗಿದ್ದು ಮತ್ತು ರಾಜ್ಯದ ಅತಿದೊಡ್ಡ ಗ್ರಾಮೀಣ ಉದ್ಯಮವಾಗಿರುವುದರಿಂದ ಈ ಏರಿಕೆ ಬಹಳಷ್ಟು ಹೊರೆಯಾದ ಕಾರಣ ತಕ್ಷಣ ಏರಿಕೆಯನ್ನು ಹಿಂಪಡೆಯಬೇಕು.
3. ರಾಜ್ಯದಲ್ಲಿ ನಡೆಯುತ್ತಿರುವ Custom Milling Rate(CMR) ವ್ಯವಸ್ಥೆಯಡಿಯಲ್ಲಿ ಅಕ್ಕಿಗಿರಣಿದಾರರು ಸರ್ಕಾರದ ಅನ್ನಭಾಗ್ಯ ಯೋಜನೆಗೆ ಎಲ್ಲಾ ತರಹದ ಸಹಕಾರ ನೀಡಿದ್ದರೂ ಸಹ ಕಳೆದ ಎರಡು ವರ್ಷಗಳಿಂದ ಸರ್ಕಾರ ಮತ್ತು ಅಧಿಕಾರಿಗಳ ಅವ್ಯವಸ್ಥೆಯಿಂದ ಸಿ.ಎಂ.ಆರ್. ಪ್ರಕ್ರಿಯೆ ಸ್ಥಗಿತಗೊಂಡಿದ್ದು ಗಿರಣಿದಾರರಿಗೆ ಖರ್ಚುವೆಚ್ಚಗಳನ್ನು ಕೊಡದೆ ಮತ್ತು ಬಾಕಿ ಹಣ ಪಾವತಿಸದೆ ಗಿರಣಿದಾರರನ್ನು ಸಂಕಷ್ಟಕ್ಕೆ ಸಿಲುಕಿಸಿರುತ್ತಾರೆ.
4. CMR Mill point ವ್ಯವಸ್ಥೆಯನ್ನು ರದ್ದುಗೊಳಿಸಿರುವುದರಿಂದ ಭತ್ತ ಶೇಖರಣೆಯಾಗದೆ ರೈತರಿಗೆ ತೊಂದರೆಯಾಗಿರುತ್ತದೆ. ಇದರಿಂದ ರಾಜ್ಯದ ಭತ್ತ ಹೊರರಾಜ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹೊರಹೋಗಿರುತ್ತದೆ. ಆದ್ದರಿಂದ ಸರ್ಕಾರ, ರೈತರು ಮತ್ತು ಗಿರಣಿದಾರರಿಗೆ ಅನುಕೂಲವಾಗಿರುವ Mill point ವ್ಯವಸ್ಥೆಯನ್ನು ಮರು ಜಾರಿಗೆ ತರಬೇಕು..
ಈ ಮೇಲ್ಕಂಡ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗದಿದ್ದಲ್ಲಿ ರಾಜ್ಯಾದ್ಯಂತ ಅಕ್ಕಿಗಿರಣಿದಾರರು ಗಿರಣಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತೀರ್ಮಾನಿಸಿದ್ದೇವೆ ಎಂದು ಪರಣ್ಣ ಮುನವಳ್ಳಿ ಅಧ್ಯಕ್ಷರು ಮತ್ತು ಎಸ್. ಶಿವಕುಮಾರ್, ಕಾರ್ಯದರ್ಶಿಗಳು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು
City Today News 9341997936
