ಹಳೇ ಮೊಬೈಲ್‌ ವಾಪಸ್ಸು ಮತ್ತು ಹೆಚ್ಚಳವಾಗಿರುವ ಗೌರವಧನದ ಪಾವತಿಗಾಗಿ ಅಂಗನವಾಡಿ ನೌಕರರ ಹೋರಾಟ

ಹಳೇ ಮೊಬೈಲ್‌ ವಾಪಸ್ಸು ಮತ್ತು ಹೆಚ್ಚಳವಾಗಿರುವ ಗೌರವಧನದ ಪಾವತಿಗಾಗಿಜುಲೈ 10, 2023 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಂಗನವಾಡಿ ನೌಕರರ ಹೋರಾಟ.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ 1975 ರಿಂದಲೂ ICDS ಯೋಜನೆ ಕೆಲಸ ಮಾಡುತ್ತಿದೆ. ಈ ಯೋಜನೆಗೆ ಬೇಕಾದ ಅನುದಾನವನ್ನು ಕಡಿತಗೊಳಿಸುವ ಮುಖಾಂತರ ಅಂಗನವಾಡಿ ಕೇಂದ್ರಗಳನ್ನು ಬಲಹೀನಗೊಳಿಸಲಾಗುತ್ತಿದೆ. ಮತ್ತೊಂದು ಕಡೆ ಡಿಜಿಟಲ್ ಇಂಡಿಯಾ’ ಎಂಬ ಹೆಸರಿನಲ್ಲಿ “ಅಂಗನವಾಡಿ ಕೇಂದ್ರಗಳನ್ನು” ಮೇಲ್ದರ್ಜೆಗೇರಿಸುವ ಯೋಜನೆಯ ಭಾಗವಾಗಿ National Nutrision Mision ನ ಪೋಷಣೆ ಅಭಿಯಾನ ಅಡಿಯಲ್ಲಿ 2018 ರಲ್ಲಿ 80/20 ಅನುಪಾತದ ಆಧಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನು ಹಂಚಿಕೆ ಮಾಡಿಕೊಂಡು ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಸ್ಯಾಮ್‌ಸಂಗ್ ಮತ್ತು LG ಕಂಪನಿಗಳ 6331 ಮೋಬೈಲ್ ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಿದ್ದರು.

ಈ ಮೊಬೈಲ್ ಗಳಲ್ಲಿ ಪೋಷಣ್ ಟ್ರಾಕ್ಟರ್ ಆಪ್ ಮುಖಾಂತರ ಪ್ರತಿನಿತ್ಯದ ಅಂಗನವಾಡಿ ಚಟುವಟಿಕೆಗಳಾದ ಮಕ್ಕಳ ಮತ್ತು ಫಲಾನುಭವಿಗಳ ಹಾಜರಾತಿ, ಶಾಲಾಪೂರ್ವ ಶಿಕ್ಷಣ, ಆಹಾರ ಪದಾರ್ಥಗಳ ಹಂಚಿಕೆ , ಊಟ ತಿನ್ನಿಸುವುದು, ಬಡಿಸುವುದು ರಾಷ್ಟ್ರೀಯ ಹಬ್ಬಗಳ ಆಚರಣೆ, “ಮಗು ಹುಟ್ಟಿದ 1000 ದಿನಗಳು”, ಸೀಮಂತ ಅನ್ನಪ್ರಾಶನ ಕಾರ್ಯಕ್ರಮಗಳು, ಮಕ್ಕಳ ಮತ್ತು ಮಹಿಳೆಯರ ದಿನಾಚರಣೆ, ಗರ್ಭೀಣಿ ಮತ್ತು ಬಾಣಂತಿ ಮಹಿಳೆಯರಿಗೆ ತಿಳುವಳಿಕೆ ಕೊಡುವ ಹಾಗೂ ಮಕ್ಕಳನ್ನು ತೂಕ ಹಾಕಿಸುವ ಎಲ್ಲಾ ಕಾರ್ಯಕ್ರಮಗಳನ್ನು ದಾಖಲು ಮಾಡಿ ಕಳುಹಿಸಬೇಕು. ಮಾತ್ರವಲ್ಲದೇ ಹೆಚ್ಚುವರಿಯಾಗಿ ಈ ಸರ್ವೇ ಇತರೆ ಸರ್ವೇಗಳು, ಚುನಾವಣಾ ಕೆಲಸಗಳು ಎಲ್ಲವೂ ಮಾಡಬೇಕಾಗಿದೆ.

ಆದರೆ ಈ ಮೊಬೈಲ್ ಗಳು 4 ವರ್ಷದಿಂದ ಬಳಕೆಯಾಗಿ ಅದರ ಸಾಮರ್ಥ್ಯ ಕುಗ್ಗಿದೆ. ಆದ್ದರಿಂದ ಈ ಮೊಬೈಲ್ ಗಳಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದರೆ ಇಲಾಖೆಯ ಅಧಿಕಾರಿಗಳು ಅಂಗನವಾಡಿ ನೌಕರರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. (ಮೊಬೈಲ್ ಕೆಟ್ಟು ಹೋದರು ರಿಪೇರಿ ಖರ್ಚು, ಮೊಬೈಲ್ ಕಳೆದು ಹೊದರೆ ಅದರ ಜವಾಬ್ದಾರಿಯನ್ನು ಕಾರ್ಯಕರ್ತೆಯರು ಹೊರಬೇಕಿದೆ. ಮಾತ್ರವಲ್ಲದೇ, ನಮ್ಮದಲ್ಲದ ಕೆಲಸಗಳನ್ನು ಬಲವಂತದಿಂದ ಹೇರುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಧೋರಣೆಗಳನ್ನು ಖಂಡಿಸುತ್ತಿದ್ದೆವೆ,

ಚುನಾವಣಾ ಪೂರ್ವ ಏಪ್ರೀಲ್‌ನಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ನೌಕರರಿಗೆ 1000ರೂ ಗಳ ಗೌರವಧನ ಹೆಚ್ಚಳ ಘೋಷಿಸಲಾಯಿತ್ತು. ಆದರೆ ಅಂದಿನ BJP ಸರ್ಕಾರ ಅನುದಾನವನ್ನು ತೆಗೆದಿಡಲಿಲ್ಲ. ಮತ್ತು ಆದೇಶವನ್ನು ಮಾಡಿಲಿಲ್ಲ. ಈಗ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಆದೇಶ ಆಗದಿರುವುದರಿಂದ ಈ ಹಣ ತಪ್ಪಿ (Lapse) ಹೋಗಿದೆ ಎನ್ನುತ್ತಿದ್ದಾರೆ. ಈಗ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಈ ಹಣ ಕೊಡಬಹುದು ಎಂದು ವಿಶ್ವಾಸವನ್ನಿಡಲಾಗಿತ್ತು. ಈ ಗೌರವಧನ ಹೆಚ್ಚಳ ಘೋಷಣೆ ಮಾಡಲಿಲ್ಲ. ಬದಲಾಗಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅಂಗನವಾಡಿಯವರಿಗೆ 2000 ರೂ ಪಡೆಯಬಹುದು ಎಂಬ ಹೇಳಿಕೆ ಬಜೆಟ್ ನಲ್ಲಿ ನೀಡಲಾಗಿದೆ. ಇದು ಸರಿಯಲ್ಲ. ಅಂಗನವಾಡಿ ನೌಕರರು ತಮ್ಮ ಶ್ರಮಕ್ಕೆ ಫಲದ ಭಾಗವಾಗಿ ಹೆಚ್ಚಳ ಕೇಳುತ್ತಿರುವುದು.

ವೇತನ ಹೆಚ್ಚಳ ಮತ್ತು ಉಚಿತ ಕೊಡುಗೆ ಎರಡು ಒಂದೆ ಅಲ್ಲ ಎಂಬುವುದನ್ನು ಈ ಮೂಲಕ ಹೇಳಲು ಇಚ್ಚಿಸುತ್ತವೆ.

ಮೇಲ್ಕಂಡ ಬೇಡಿಕೆಗಳಿಗಾಗಿ ರಾಜ್ಯದಲ್ಲಿ ಅಂಗನವಾಡಿ ನೌಕರರ ಎಲ್ಲಾ ಸಂಘಗಳು ಜಂಟಿಯಾಗಿ ಜುಲೈ 10 ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ(CDPO) ಕಛೇರಿಗಳ ಮುಂದೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಮಾತುಕತೆಯ ಮುಖಾಂತರ ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಈ ಮೂಲಕ ವಿನಂತಿಸುತ್ತೆವೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಲಾಯಿತು.

ಎಸ್‌.ವರಲಕ್ಷ್ಮಿ – ಅಧ್ಯಕ್ಷರು, ರಾಜ್ಯ (CITU)ಜಿ.ಆರ್.ಶಿವಶಂಕರ್-ಅಧ್ಯಕ್ಷರು(TUCC) ಅಮ್ಜದ್. ಬಿ- ಅಧ್ಯಕ್ಷರು(AITUC), ಹೆಚ್.ಎಸ್.ಸುನಂದ- ಪ್ರಧಾನ ಕಾರ್ಯದರ್ಶಿCITU), ಎಮ್.ಜಯಮ್ಮ-ಪ್ರಧಾನ ಕಾರ್ಯದರ್ಶಿ(AITUC), ನಾಗರತ್ನ- ಪ್ರಧಾನ ಕಾರ್ಯದರ್ಶಿ(TUCC) ಗಿರಿಜಾ-ಜಿಲ್ಲಾಧ್ಯಕ್ಷರು(AITUC),ಪ್ರೇಮಾ-ಅಧ್ಯಕ್ಷರು(ಸ್ವತಂತ್ರ ಸಂಘಟನೆ) ಮತ್ತು ಉಮಾಮಣಿ-ಪ್ರಧಾನ ಕಾರ್ಯದರ್ಶಿ(ಸ್ವತಂತ್ರ ಸಂಘಟನೆ) ಪತ್ರಿಕಾ ಗೋಷ್ಥಿಯಲ್ಲಿ ಹಾಜರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.