ಜು. 16 ರಂದು ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ

ಬೆಂಗಳೂರು; ನಾರಾಯಣ್‌ ಸೇವಾ ಸಂಸ್ಕ್ಯಾನ್ ಸೇವಾ ಸಂಸ್ಥೆ ಯಿಂದ ಜುಲೈ 16 ರಂದು ಬೆಂಗಳೂರಿನಲ್ಲಿ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರ ಆಯೋಜಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಜನರಿಗಾಗಿ ಈ ಬೃಹತ್ ಶಿಬಿರ ಏರ್ಪಡಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದಯ್‌ ಪುರನ ಪತಿಷ್ಠಿತ ರಾಷ್ಟ್ರೀಯ ಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್‌ ಪುಸಾದ್ ಗೌರ್, ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ, ಅದಮ್ಮ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ಆಚಾರ್ಯ ವಿಮಲ್‌ ಸಾಗರ್‌ ಮಹಾರಾಜ್‌ ಅವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಹೊಂದಿಕೆಯಾಗುವಂತೆ ಕೃತಕ ಅಂಗಾಂಗಗಳ ಅಳತೆ ತೆಗೆದುಕೊಂಡು ನಂತರ ಸಿದ್ಧಪಡಿಸಿ ಇನ್ನೊಂದು ತಿಂಗಳಲ್ಲಿ ನಡೆಯಲಿರುವ ಬೃಹತ್ ಶಿಬಿರದಲ್ಲಿ ಅಳವಡಿಸಲಾಗುವುದು ಎಂದರು.

ಕಳೆದ 38 ವರ್ಷಗಳಿಂದ ಅಪಘಾತ ಮತ್ತಿತರ ಅವಘಡಗಳಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಕೃತಕ ಅಂಗಾಂಗ ಜೋಡಣೆ ಮಾಡುತ್ತಿದ್ದು, ಬೆಂಗಳೂರಿನ ವಿವಿಪುರದಲ್ಲಿರುವ ಅರಸೋಜಿ ರಾವ್‌ ಕಲ್ಯಾಣ ಮಂಟಪದಲ್ಲಿ ಬೆಳಿಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿಶೇಷ ಚೇತನರಿಗೆ ಪರಿಣಿತ ವೈದ್ಯರು ಅಳವಡಿಕೆ ಮಾಡಲಿರುವ ಅಂಗಾಂಗಗಳ ಅಳತೆ ತೆಗೆದುಕೊಳ್ಳಲಿದ್ದಾರೆ. ಇದು ನಾರಾಯಣ್‌ ಸೇವಾ ಸಂಸ್ಕ್ಯಾನ್ ನ 988 ನೇ ಶಿಬಿರವಾಗಿದ್ದು, ಶೀಘ್ರದಲ್ಲೇ ಈ ಸಂಖ್ಯೆ ಸಾವಿರದ ಗಡಿ ದಾಟಲಿದೆ ಎಂದರು.

ನಾರಾಯಣ್ ಸೇವಾ ಸಂಸ್ಮಾನ್ ನ ವಕ್ತಾರ ರಜತ್‌ ಗೌರ್‌ ಮಾತನಾಡಿ, ಸಂಸ್ಥೆಯ ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ವೈದ್ಯರ ತಂಡದಿಂದ ವಿಕಲಚೇತನರಿಗಾಗಿ ಆರೈಕೆ ಜೊತೆಗೆ ಅಂಗಾಂಗ ಅಳವಡಿಸಲು ನೆರವು ನೀಡಲಾಗುವುದು. ರೋಗಿಗಳು ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಹಗುರ ಮತ್ತು ದೀರ್ಘಕಾಲ ಬಾಳಿಕೆ ಬರುವ ಕೃತಕ ಅಂಗಾಂಗಳನ್ನು ತಯಾರಿಸಿ ಅಳವಡಿಸಲಾಗುವ ಎಂದರು.

ಶಿಬಿರದ ಸಮನ್ವಯಕಾರ ರೋಹಿತ್‌ ತಿವಾರಿ ಮಾತನಾಡಿ, ಫಲಾನುಭವಿಗಳು ಶಿಬಿರಕ್ಕೆ ಆಧಾರ್ ಕಾರ್ಡ್ ವಿಕಲಚೇತನ ಇಲಾಖೆ ನೀಡಿರುವ ಪುಮಾಣ ಪತ್ರ, ತಮ್ಮ ಅಂಗಾಂಗ ನ್ಯೂನತೆ ಪುತಿಬಿಂಬಿಸುವ ಸಿಡು ಭಾವಚಿತ್ರ ತರಬೇಕು. ಶಿಬಿರದಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

City Today News 9341997936

Leave a comment

This site uses Akismet to reduce spam. Learn how your comment data is processed.