ದಲಿತ ಸಂಘಟನೆಗಳ ಒಕ್ಕೂಟದ ನಾಯಕರನ್ನು ವಿಧಾನ ಪರಿಷತ್ತು ಮತ್ತು ನಿಗಮ ಮಂಡಳಿಗಳನ್ನು ನೇಮಕ ಮಾಡುವಲ್ಲಿ ಕಡೆಗಣನೆ

1) ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲುq ದಲಿತ ಸಂಘಟನೆಗಳ ಒಕ್ಕೂಟಗಳು ಮತ್ತು ಸಂಘಟನೆಗಳ ನಾಯಕರುಗಳು ಶ್ರಮಿಸಿದ್ದಾರೆ. ಈ ಸಂಬಂಧ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಇವಾಗ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ದಲಿತ ಸಂಘಟನೆಗಳ ಒಕ್ಕೂಟದ ನಾಯಕರನ್ನು ವಿಧಾನ ಪರಿಷತ್ತು ಮತ್ತು ನಿಗಮ ಮಂಡಳಿಗಳನ್ನು ನೇಮಕ ಮಾಡುವಲ್ಲಿ ಕಡೆಗಣನೆ ಮಾಡುತ್ತಿದೆ. ವಿಧಾನ ಪರಷತ್ತಿಗೆ ದಲಿತ ವ್ಯಕ್ತಿಗೆ ನೇಮಕ ಮಾಡುವಾಗ ದಲಿತ ಸಂಘಟನೆಗಳ ಒಕ್ಕೂಟದ ಹಿರಿಯ ದಲಿತ ಹೋರಾಟಗಾರರನ್ನು ಶಿಫಾರಸ್ಸು ಪಟ್ಟಿಯಲ್ಲಿ ಹೆಸರು ಸೇರಿಸದೆ ದಲಿತ ಹೆಸರಿನ ಅಥವಾ ಎಸ್.ಸಿ. ಸಮುದಾಯದ ಕೇಂದ್ರ ಸರ್ಕಾರದ ಉನ್ನತ ನಿವೃತ್ತ ಹಿರಿಯ ಐಆ‌ಎಸ್‌ ಅಧಿಕಾರಿ ಸುಧಾಮ ದಾಸ ಅವರ ಹೆಸರನ್ನು ಶಿಫಾರಸ್ಸು ಮಾಡಿರುವುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬೆಂಬಲ ನೀಡಿದ ದಲಿತ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳಿಗೆ ಮತ್ತು ನಾಯಕರುಗಳಿಗೆ ತುಂಬ ಬೇಜಾರಿನ ಸಂಗತಿ.

ಆದುದರಿಂದ ಈ ಕೂಡಲೇ ನಿವೃತ್ತ ಐಆರ್‌ಎಸ್ ವ್ಯಕ್ತಿಯ ಹೆಸರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡುವ ಪಟ್ಟಿಯಿಂದ ಕೈ ಬಿಟ್ಟು, ದಲಿತ ಸಂಘಟನೆಗಳ ಒಕ್ಕೂಟದ ಯಾವುದೇ ಹಿರಿಯ ನಾಯಕರ ಹೆಸರನ್ನು ಪಟ್ಟಿಗೆ ಸೇರಿಸಬೇಕು. ಎಂದು ಭೀಮ್ ಆರ್ಮಿ ಸಂಘಟನೆ ಒತ್ತಾಯ ಮಾಡುತ್ತದೆ.

2) ಎಸ್‌ಸಿಎಸ್‌ಪಿ/ಟಿಎಸ್‌ ಪಿ ಹಣವನ್ನು 7(ಡಿ) ಮೂಲಕ ಇನ್ನಿತರ ಅಥವಾ ದಲಿತೇತರ ಕಾರ್ಯಗಳಿಗೆ ಉಪಯೋಗಿಸುವುದನ್ನು ನಿಷೇಧ ಮಾಡಿರುವುದು ಭೀಮ್ ಆರ್ಮಿ ಸಂಘಟನೆ ಸ್ವಾಗತ ಕೋರುತ್ತದೆ.

ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಎಲ್ಲಿಯೂ ಎಸ್‌ಸಿಎಸ್‌ಪಿ / ಟಿಎಸ್‌ಪಿ) ಹಣವನ್ನು ಎಸ್‌ಸಿ / ಎಸ್‌ಟಿ ಜನರಿಗೆ 5 ಗ್ಯಾರಂಟಿಗಳು ಜಾರಿಗೆ ಮಾಡಲು ಉಪಯೋಗಿಸುತ್ತೇವೆ ಎಂದು ಹೇಳಿಲ್ಲ. ಆದರೆ ಇವಾಗ ಏಕಾಏಕಿ ಎಸ್‌.ಎಸ್ಸಿ/ಟಿಎಸ್‌ ಪಿ ಹಣ 11,144 ಕೋಟಿ ರೂಗಳು ಬಳಕೆ ಮಾಡಲು ತೀರ್ಮಾನ ಕೈಗೊಂಡಿರುವುದು ವಿಷಾದ.

ಸರ್ಕಾರ ಈ ಹಣವನ್ನು ಎಸ್‌ಎಸ್‌ಪಿ/ಟಿಎಸ್‌ಪಿ ಖಾತೆಗೆ 1,144 ಕೋಟಿ ರೂ.ಗಳನ್ನು ಹಿಂದಿರುಗಿಸಬೇಕು ಮತ್ತು ಸರ್ಕಾರ ಯೋಜನೆ ಪಡಿಸಿರುವ ‘ಬಡ್ಡೆಟ್’ 3.27 ಸಾವಿರ ಕೋಟಿ ಹಣದ ಅಥವಾ 5 ಗ್ಯಾರಂಟಿಗಳನ್ನು ಜಾರಿಗೆ ತರಲು ಹೆಚ್ಚುವರಿಯಾಗಿ 50 ಸಾವಿರ ಕೋಟಿ ರೂ.ಗಳಲ್ಲಿಯೇ ಬಳಕೆ ಮಾಡಬೇಕೆಂದು ಭೀಮ್ ಆರ್ಮಿ ಸಂಘಟನೆ ಒತ್ತಾಯ ಮಾಡುತ್ತದೆ.

3) ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಪಾಲಿಕೆಯ ಕಲುಷಿತ ನೀರನ್ನು ಸೇವಿಸಿ ಎಸ್‌.ಸಿ ಕಾಲೋನಿಯಲ್ಲಿ ಮೃತಪಟ್ಟ 5 ಜನರ ಕುಟುಂಬಗಳಿಗೆ ತಲಾ 25 ಲಕ್ಷ ಹಾಗೂ ಅಸ್ವಸ್ತಗೊಂಡು ಚಿಕಿತ್ಸೆ ಪಡೆಯುತ್ತಿರುವ 150 ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಕೊಡಬೇಕು ಮತ್ತು ಈ ಅಹಿತಕರ ಘಟನೆಗೆ ಕಾರಣಕರ್ತರಾದವರ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಭೀಮ್ ಆರ್ಮಿ ಸಂಘಟನೆ ಒತ್ತಾಯಿಸುತ್ತದೆ ಎಂದು ರಾಜಗೋಪಾಲ್, ಡಿ – ರಾಜ್ಯ ಅಧ್ಯಕ್ಷರು, ಭೀಮ್ ಆರ್ಮಿ ಕರ್ನಾಟಕ, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

ಪತ್ರಿಕಾ ಗೋಷ್ಥಿಯಲ್ಲಿ ಪ್ರದೀಪ್‌ ಕುಮಾರ್ -ಜಿಲ್ಲಾಧ್ಯಕ್ಷರು, ಭೀಮ್‌ ಆರ್ಮಿ ಬೆಂಗಳೂರು, ಅನಿಲ್‌ ಕುಮಾ‌ರ್ ಜಿಲ್ಲಾ ಕಾರ್ಯದರ್ಶಿಗಳು, ಭೀಮ್ ಆರ್ಮಿ ಬೆಂಗಳೂರು, ಮತ್ತು ಸೋಮಶೇಖರ್ ರಾಜವಂಶಿ ಪ್ರಗತಿಪರ ವಿಚಾರವಂತರು, ಉಪಸ್ತಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.