ರಾಜ್ಯ ಸಚಿವ ಸಂಪುಟದಲ್ಲಿ ಬಂಜಾರ ಲಂಬಾಣಿ ಜನಾಂಗದ ಶ್ರೀ ಪ್ರಕಾಶ್ ಕೆ. ರಾಠೋಡ್‌ ಇವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರಲ್ಲಿ ಒತ್ತಾಯ

ಕರ್ನಾಟಕ ರಾಜ್ಯಾದ್ಯಂತ ಬಂಜಾರಾ ಲಂಬಾಣಿ ಜನಾಂಗದವರು ಸುಮಾರು 40 ರಿಂದ 50 ಲಕ್ಷ ಜನಸಂಖ್ಯೆ ಇದ್ದು, ಈ ಜನಾಂಗದವರು ಸಮಾಜದಲ್ಲಿ ತುಂಬಾ ಹಿಂದುಳಿದವರಾಗಿರುತ್ತಾರೆ. ಪ್ರಸಕ್ತ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಹುಮತದಿಂದ ಸರ್ಕಾರ ರಚನೆ ಮಾಡಲು ಈ ಜನಾಂಗದ ಕೊಡುಗೆಯು ಅಪಾರವಾಗಿರುತ್ತದೆ. ಮುಂದುವರೆದು ಪ್ರಸ್ತುತ ಸನ್ಮಾನ್ಯ ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಠೋಡ್’ ಇವರು 2023 ನೇ ಸಾಲಿನ ಚುನಾವಣೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯನವರು ಹಾಗೂ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರ ಜೊತೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಸುಮಾರು 120 ಕ್ಷೇತ್ರಗಳಲ್ಲಿ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಶೇ. 80% ರಷ್ಟು ಬಂಜಾರ ಲಂಬಾಣಿ ಜನಾಂಗದ ಮತಗಳು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಹಾಕುವಂತೆ ಪ್ರಚಾರವನ್ನು ಮಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣೀಭೂತರಾಗಿರುತ್ತಾರೆ. ಇಷ್ಟೇ ಅಲ್ಲದೆ ಸದರಿಯವರು ಪಕ್ಷದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಪಕ್ಷದ ಸಂಘಟನೆಯಲ್ಲಿ ಶ್ರಮಿಸಿರುತ್ತಾರೆ. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅತ್ಯತ್ತಮವಾಗಿ ಆಡಳಿತ ನಡೆಸುತ್ತಿದ್ದು, ಇದು ಶ್ಲಾಘನೀಯವಾಗಿರುತ್ತದೆ. ಆದರೆ ರಾಜ್ಯ ಸರ್ಕಾರದ ಸಂಪುಟದಲ್ಲಿ ಬಂಜಾರ ಲಂಬಾಣಿ ಜನಾಂಗದವರಿಗೆ ಸೂಕ್ತ ಸ್ಥಾನ ಒದಗಿಸದೆ ಇರುವುದ ಬಂಜಾರ ಲಂಬಾಣಿ ಜನಾಂಗದ ಬೇಸರಕ್ಕೆ ಕಾರಣವಾಗಿರುತ್ತದೆ.

ಆದ್ದರಿಂದ ಬಂಜಾರ ಲಂಬಾಣಿ ಜನಾಂಗದವರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಬಂಜಾರ ಲಂಬಾಣಿ ಜನಾಂಗದವರಾದ ಮತ್ತು ಸನ್ಮಾನ್ಯ ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಠೋಡ್‌ ಇವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ಹಾಗೂ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರನ್ನು ರಾಜ್ಯದ ಎಲ್ಲಾ ಬಂಜಾರ ಲಂಬಾಣಿ ಜನಾಂಗದವರಿಗೆ 1972ರ ನತರ ಎಲ್ಲಾ ಸರ್ಕಾರಗಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌.ಲಂಬಾಣಿ ಶಾಸಕರಿಗೆ ಮಂತ್ರಿಸ್ಥಾನ ಮಾಡುತ್ತಿದ್ದರು. 2023ರಲ್ಲಿ ಕಾಂಗ್ರೆಸ್‌ ಪಕ್ಷದ ನೇತೃತ್ವ ಸರ್ಕಾರದಲ್ಲಿ ಲಂಬಾಣಿ ಜನಾಂಗಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಲಂಬಾಣಿ ಜನಾಂಗದ ಪರವಾಗಿ ಒತ್ತಾಯಿಸುತ್ತೇನೆ ಎಂದು ಮಂಡಲೀಕ ಜ. ಪವಾರ ಅಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.

ಬಂಜಾರ ಲಂಬಾಣಿ ಜನಾಂಗದ ಮುಖಂಡರುಗಳಾದ ಧರ್ಮರಾಜ. ಜಿ. ನಾಯಕ, ಹರಿದಾಸ ನಾಯಕ, ಬಿ. ಪಿ. ರಾಜು, ಅನುಸುಯಮ್ಮ, ರವಿ ರಾಠೋಡ್, ಮತ್ತು ರಾಜು ಜಾದವ್ ಜನಾಂಗದ ವತಿಯಿಂದ ಪತ್ರಿಕಾ ಗೋಷ್ಥಿಯಲ್ಲಿ ಉಪಸ್ತಿತಿಯಿದ್ದರು.

City Today News 9341997936

Tagged

Leave a comment

This site uses Akismet to reduce spam. Learn how your comment data is processed.