ಮೊಟ್ಟಮೊದಲನೆಯದಾಗಿ ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಹೃತ್ತೂರ್ವಕ ಕೃತಜ್ಞತೆಗಳನ್ನು ಕರ್ನಾಟಕದ ಸಮಸ್ತ ವಿಶ್ವಕರ್ಮ ಬಾಂಧವರು ಹಾಗೂ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಪರವಾಗಿ ಸಲ್ಲಿಸಲು ಬಯಸುತ್ತೇನೆ.

ಮುಂದಿನ ತಿಂಗಳು ವಿಶ್ವಕರ್ಮ ಜಯಂತಿಯಂದು ದೇಶಾದ್ಯಂತ “ವಿಶ್ವಕರ್ಮ” ಎನ್ನುವ ಹೊಸ ಯೋಜನೆಯನ್ನು ಜಾರಿಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಜಿ ರವರು ಘೋಷಿಸಿರುವುದು ಐತಿಹಾಸಿಕ ಸಂಗತಿಯಾಗಿದೆ.
77ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು “ನಮ್ಮ ದೇಶದಲ್ಲಿ ಸಾಂಪ್ರದಾಯಿಕವಾಗಿ ಪರಂಪರಾಗತವಾಗಿ ನಡೆದುಕೊಂಡು ಬಂದ ಹಲವು ಕಲೆಗಳಿವೆ, ಆ ಕಲೆಗಳನ್ನು ದೇಶದ ಹಲವಾರು ಕುಟುಂಬಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿಕೊಂಡು ಇನ್ನೂ ಜೀವಂತವಾಗಿರಿಸಿವೆ, ಅಂತಹ ಕುಟುಂಬಗಳಿಗೆ ತಮ್ಮಲ್ಲಿನ ಕಲೆಯನ್ನು ಬೆಳೆಸಲು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಈ ಯೋಜನೆಯ ಆರಂಭದಲ್ಲಿ 13 ರಿಂದ 15 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ. ವಿಶ್ವಕರ್ಮ ಸಮುದಾಯದ ಪಂಚ ಕಸುಬುಗಳ ಪುನರುತ್ಥಾನಕ್ಕೆ ಮೈಲಿಗಲ್ಲಾಗುವಂತಹ ಯೋಜನೆಯನ್ನು ಘೋಷಣೆ ಮಾಡಿ, ಸಮುದಾಯದ ಬೆಂಬಲಕ್ಕೆ ನಿಂತ ಪ್ರಧಾನಿಗಳಿಗೆ ಸಮಸ್ತ ವಿಶ್ವಕರ್ಮರಿಂದ ಹೃತ್ತೂರ್ವಕ ಧನ್ಯವಾದಗಳು. ತಮ್ಮ ಬೆಂಬಲ ಇದೆ ರೀತಿ ಮುಂದುವರಿಯಲಿ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ವಿಶ್ವಕರ್ಮ ನಾಡೋಜ ಡಾ. ಬಿ. ಎಂ. ಉಮೇಶ್ ಕುಮಾರ್ ರವರು ವಿನಂತಿಸಿಕೊಳ್ಳುತ್ತೇವೆ ಅಂದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರಭಾಕರ ಐ.ಎ.ಎಸ್ (ನಿ) ವಿಶ್ವಕರ್ಮ ಸಮುದಾಯದ ಶ್ರೀ ವೇದಮೂರ್ತಿ ಕೆ.ಎ.ಎಸ್ (ನಿ), ಶಿಲ್ಪಿ ಹೊನ್ನಪ್ಪ ಆಚಾರ್, ಶ್ರೀ ಚಂದ್ರಶೇಖರ್, ಡಾ.ಬಿ.ಎಂ ಉಮೇಶ್ ಕುಮಾರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಐ.ಎ.ಎಸ್ (ನಿ) ಹಾಜರಿದ್ದರು.
City Today News 9341997936
