
ಹನುಮಂತನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ತ್ಯಾಗರಾಜನಗರದ ಟೀ ವ್ಯಾಪರಿಯೊಬ್ಬನನ್ನು ಕಿಡ್ರಾಫ್ ಮಾಡಿ, ಹೆದರಿಸಿ, ಹಲ್ಲೆ ಮಾಡಿ, ಒಂದು ದಿನ ರೂಮ್ ನಲ್ಲಿ ಕೂಡಿ ಹಾಕಿ, ಆತನಿಂದ ಆರೋಪಿಗಳು ತಮ್ಮ ಖಾತೆಗಳಿಗೆ 15 ಲಕ್ಷ ರೂ ಹಣ ವರ್ಗಾವಣೆ ಮಾಡಿಕೊಂಡು, ಹಣವನ್ನು ಸುಲಿಗೆ ಮಾಡಿದ್ದ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಹನುಮಂತನಗರ ಪೊಲೀಸರು ದಿನಾಂಕ: 16-08-2023 ರಂದು ದಸ್ತಗಿರಿ ಮಾಡಿ 8 ಜನ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 11 ಲಕ್ಷ ರೂ ನಗದು, ಹಾಗೂ ಕೃತ್ಯಕ್ಕೆ ಬಳಸಿದ ಒಂದು ರೆನಾಲ್ಡ್ ಕಂಪನಿಯ ಕಾರು, ಒಂದು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ, 08 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಕೃಷ್ಣಕಾಂತ ಮಾರ್ಗದರ್ಶನದಲ್ಲಿ ಉಪ ವಿಭಾಗದ ಸಹಾಯಕ ಪೊಲೀಸ್ ರವರ ಆಯುಕ್ತರಾದ ಶ್ರೀ.ನಾಗರಾಜ.ಜಿ ರವರ ಉಸ್ತುವಾರಿಯಲ್ಲಿ, ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ಇಸ್ಪೆಕ್ಟರ್ ಶ್ರೀ.ವಿನೋದ್ ಭಟ್ ಹಾಗು ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.
City Today News 9341997936
