ಚಂದ್ರವಿದ್ಯಾ ಫೌಂಡೇಷನ್ (ರಿ) ಹಾಗೂ ಡ್ರೀಮ್ ಅಂಡ್ ಸಿಜಲ್ (DS3) ನೃತ್ಯ ವಿದ್ಯಾ ಸಂಸ್ಥೆಯವತಿಯಿಂದ “ವರ್ಣಂ” 2023

ನಮ್ಮ ನಾಟ್ಯ ವಿದ್ಯಾ ಸಂಸ್ಥೆ ಚಂದ್ರವಿದ್ಯಾ ಫೌಂಡೇಷನ್ (ರಿ) ಹಾಗೂ ಡ್ರೀಮ್ ಅಂಡ್ ಸಿಜಲ್ (DS3) ನೃತ್ಯ ವಿದ್ಯಾ ಸಂಸ್ಥೆಯವತಿಯಿಂದ “ವರ್ಣಂ” 2023 ಎಂಬ ಸಂಗೀತ ನೃತ್ಯ ಕಾರ್ಯಕ್ರಮವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಶನಿವಾರ ದಿನಾಂಕ 02/09/2023ರ ಸಂಜೆ ನಾಲ್ಕು, ಗಂಟೆಗೆ ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಾ|| ಉದಯ್ ಬಿ.ಗರುಡಾಚಾರ್ ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯನಗರ ವಿಧಾನಸಭೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಸಿ.ಕೆ. ರಾಮಮೂರ್ತಿ ರವರು ವಹಿಸಲಿದ್ದಾರೆ, ಕಾರ್ಯಮದ ಮುಖ್ಯ ಅತಥಿಗಳಾಗಿ ಶ್ರೀ ಭರತ್ ಭೋಪಣ ಚಲನ ಚಿತ್ರ ಕಲಾವಿದರು ಹಾಗೂ ಶ್ರೀ ವಿನಯ್ ರತ್ನಸಿದ್ಧಿ (ಚಲನ ಚಿತ್ರ ನಟರು ಹಾಗೂ ನೃತ್ಯ ಸಂಯೋಜಕರು) ಇವರು ಆಗಮಿಸಲಿದ್ದಾರೆ.

ನಮ್ಮ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದರು, ಮಕ್ಕಳು, ನುರಿತ ನೃತ್ಯ ಸಂಯೋಜಕರ ಜೊತೆಗೂಡಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಚಂದ್ರ ವಿಧ್ಯಾ ಫೌನ್ಡೇಶನಿನ ಸಂತೋಶ್ ಪ್ರಸಾದ್ ಮತ್ತು ಡ್ರೀಮ್ ಅಂಡ್ ಸಿಜಲ್ ನ ಕಿರನ್ ಕುಮಾರ್ ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.