ಕ್ಯಾಪ್ ಜೆಮಿನಿ DCX ಫೌಂಡ್ರಿ : ಗ್ರಾಹಕರ ತಲ್ಲೀನಗೊಳಿಸುವ ಅನುಭವಕ್ಕಾಗಿ ಮುಡಿಪು

ಕ್ಯಾಪ್ ಜೆಮಿನಿ DCX ಫೌಂಡ್ರಿ ತನ್ನ ಗ್ರಾಹಕರಿಗೆ ಸಂಸ್ಥೆಯು ಪರಿಕಲ್ಪನೆ, ನಾವೀನ್ಯತೆಯಲ್ಲಿ ಅತ್ಯುತ್ಕೃಷ್ಟವಾದ ಗ್ರಾಹಕ ಅನುಭವ ಹೆಚ್ಚಿಸುವ ನಿಟ್ಟಿನಲ್ಲಿ ಪಾಲುದಾರರೊಂದಿಗೆ ಪಾಲುದಾರಿಕೆಯನ್ನು ಬೆಳೆಸುವತ್ತ ಸಹಕಾರ ಮತ್ತು ಕ್ರಿಯಾತ್ಮಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

ತಂತ್ರಜ್ಞಾನದ ವಿಕಾಸವನ್ನು ಆಧರಿಸಿ ಅದರಂತೆ ಕಟ್ಟ ಕಡೆಯ ಗ್ರಾಹಕರವರೆಗೂ ಹೆಚ್ಚುತ್ತಿರುವ ನಿರೀಕ್ಷೆಗಳನ್ನು ನಿರಂತರವಾಗಿ ಮರುರೂಪಿಸುತ್ತಾ ಬರಲಾಗುತ್ತಿದೆ. ಮಾರುಕಟ್ಟೆಯಲ್ಲಿರುವ ಸ್ಪರ್ಧಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು ಉದ್ಯಮಗಳು ಇಂತಹ ಅನುಭವಗಳನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ DCX ಫೌಂಡ್ರಿ ಸಂಸ್ಥೆಯು ಉದ್ಯಮಗಳು ಸ್ಪರ್ಧಾತ್ಮಕ ಮತ್ತು ಸಮರ್ಥನೀಯವಾಗಿ ಕಾರ್ಯ ನಿರ್ವಹಣೆ ಮಾಡಲು ಅನುವು ಮಾಡಿಕೊಡುವ ಸಂದರ್ಭದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ವಿಕಸನಗೊಳಿಸುವಾಗ ಎದುರಾಗುವ ಸಂದಿಗ್ಧತೆಗಳು ಅಥವಾ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

DCX ಫೌಂಡ್ರಿಯ ಆದ್ಯತೆಯಾಗಿ ಗ್ರಾಹಕರ ಅನುಭವಗಳನ್ನು ಗುಣಮಟ್ಟದಲ್ಲಿ ಉನ್ನತೀಕರಿಸಲು ಮತ್ತು ಈ ಅನುಭವಗಳನ್ನು ಮುಂದಿನ ಪೀಳಿಗೆವರೆಗೆ ಮುಂದುವರಿಸಲು ಪೂರಕವಾದ ಅನುಭವ – ಆಧಾರಿತ ವಿನ್ಯಾಸಗಳನ್ನು ರಚಿಸುವತ್ತ ತನ್ನ ಚಿತ್ತವನ್ನು ಹರಿಸಿದೆ.

DCX ಫೌಂಡ್ರಿಯು ತನ್ನ ಗ್ರಾಹಕರಿಗೆ ಒಂದು ಅತ್ಯುತ್ತಮವಾದ ಕಾರ್ಯತಂತ್ರದ ಪಾಲುದಾರ ಸಂಸ್ಥೆಯಾಗಿ ಮತ್ತು ಪರಿಣತ ಕಾರ್ಯನಿರ್ವಾಹಕ ಸಂಸ್ಥೆಯಾಗಿ ಸೇವೆ ಸಲ್ಲಿಸುವುದರೊಂದಿಗೆ ಉತ್ತಮ ಮೌಲ್ಯವನ್ನು ತಂದುಕೊಡುತ್ತಿದೆ. ಇದು ಸಮಗ್ರವಾಗಿ ಎಂಡ್-ಟು-ಎಂಡ್ ಮೌಲ್ಯವನ್ನು ಒದಗಿಸುತ್ತದೆ. ಉದ್ಯಮಕ್ಕೆ ಅನುಗುಣವಾಗಿ ಕಾರ್ಯತಂತ್ರಗಳನ್ನು ರೂಪಿಸಿ: ಗ್ರಾಹಕ ಪ್ರಯಾಣ ಕೇಂದ್ರಿತ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ಯಾಪ್ ಜೆಮಿನಿ ಪ್ರತಿ ಗ್ರಾಹಕರ ಅನುಭವವನ್ನು ಅವರ ಅನನ್ಯ ವ್ಯಾಪಾರ ಅಗತ್ಯಗಳೊಂದಿಗೆ ಹೊಂದಾಣಿಕೆ ಮಾಡಲು ಕಸ್ಟಮೈಸ್ ಮಾಡುತ್ತದೆ. ಇದರೊಂದಿಗೆ ತಂತ್ರಜ್ಞಾನ -ಕೇಂದ್ರಿತ ಪರಿಹಾರಗಳನ್ನು ಮೀರಿದ ಸೇವೆಗಳನ್ನ ನೀಡುತ್ತದೆ.

DCX ಫೌಂಡ್ರಿ ಮಾರ್ಕೆಟಿಂಗ್, ಮಾರಾಟ, ಸೇವೆ ಮತ್ತು ವಾಣಿಜ್ಯದಂತಹ ವಿವಿಧ ಡೊಮೇನ್ ಗಳನ್ನು ಒಳಗೊಂಡಿರುವ ವೈವಿಧ್ಯಮಯ ಸ್ವತ್ತುಗಳು, ಪರಿಹಾರಗಳು ಮತ್ತು ವೇಗವರ್ಧಕಗಳನ್ನು ಒದಗಿಸುತ್ತದೆ. DCX ಫೌಂಡ್ರಿಯಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾದ ಡೆಮೋಗಳು ಡೇಟಾ-ಚಾಲಿತ ಗ್ರಾಹಕರ ಅನುಭವಗಳು, ಮಾರ್ಕೆಟಿಂಗ್ ಪ್ರಚಾರಗಳಿಗಾಗಿ ನಾವೀನ್ಯತೆಯ ಜನರೇಟಿವ್ Al, ಆಕರ್ಷಕವಾದ VR-ಚಾಲಿತ ತರಬೇತಿ, ತನದ AI ಬೆಂಬಲಿತವಾದ ಸೇವಾ ಚಾಣಾಕ್ಷ್ಯತ ಪರಿಹಾರಗಳು ಮತ್ತು ರಿವರ್ಸ್ ಲಾಜಿಸ್ಟಿಕ್ಸ್ ಪರಿಹಾರಗಳೊಂದಿಗೆ ಸಮರ್ಥವಾದ ವಿಧಾನವನ್ನು ಒಳಗೊಂಡಿರುತ್ತದೆ.

ಬೆಂಗಳೂರಿನಲ್ಲಿ DCX ಫೌಂಡ್ರಿ ವೈವಿಧ್ಯಮಯ ಗ್ರಾಹಕ ಮೂಲಗಳಿಗೆ ಪ್ರಸಕ್ತ ಮತ್ತು ಭವಿಷ್ಯದ ವ್ಯಾಪಾರ ಅಗತ್ಯತೆಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ DCX ಫೌಂಡ್ರೆ ಜಾಗತಿಕ ವಿತರಣಾ ಇನ್ ಕ್ಯುಬೇಶನ್ ಹಬ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಬೆಂಗಳೂರಿನಲ್ಲಿ DCX ಫೌಂಡ್ರಿ ಸ್ಥಾಪನೆಯು ಹಲವಾರು ಅಂಶಗಳಿಂದಾಗಿ ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿದ್ದು, ಬೆಂಗಳೂರಿನ ಜಾಗತಿಕ ಖ್ಯಾತಿಯ ಜೊತೆಯಲ್ಲಿ ದೃಢವಾದ ಸಂಪರ್ಕ ಮತ್ತು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಗ್ರಾಹಕರಿಗೆ ಅಚ್ಚುಮೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಬೆಂಗಳೂರಿನಲ್ಲಿರುವ DCX ಫೌಂಡ್ರಿ ತಂಡದ ಅತ್ಯುತ್ತಮ ಪ್ರತಿಭೆಯಿಂದಾಗಿ ಬದ್ಧತೆಯನ್ನು ಹೆಚ್ಚಿಸಿಕೊಂಡಿದೆ.

ಬೆಂಗಳೂರಿನಲ್ಲಿರುವ DCX ಫೌಂಡ್ರಿಯು ಗ್ರಾಹಕರ ಅನುಭವಗಳ ಭವಿಷ್ಯವನ್ನು ಪ್ರದರ್ಶಿಸಲು ಹಾಗೂ ಮುಂದಿನ ಪೀಳಿಗೆಯ ಕಲ್ಪನೆಗಳನ್ನು ಅನ್ವೇಷಣೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದು Cx ಆರ್ಕಿಟೆಕ್ಟ್ ಗಳು, ಡೊಮೇನ್ ತಜ್ಞರು ಮತ್ತು ಟೆಕ್’ ಎಸ್‌ಎಂಇಗಳ ಸಂಯೋಜಿತ ಪ್ರಯತ್ನವಾಗಿದೆ. ಇದು ಜೀವನಕ್ಕೆ ಉತ್ತಮ ಮಟ್ಟದ ಪರಿಹಾರಗಳನ್ನು ಒದಗಿಸುತ್ತದೆ. ಫೌಂಡ್ರಿಯ ವಿಶಿಷ್ಟ ಪ್ರಯೋಜನವು ಗ್ರಾಹಕರಿಗೆ ಅದರ ತ್ವರಿತ ಪರಿಹಾರ ಸೂತ್ರೀಕರಣವನ್ನು ಹೊಂದಿದೆ. ತ್ವರಿತ ಪರಿಹಾರಗಳನ್ನು ಚಿಂತನಾ ಕಾರ್ಯಾಗಾರಗಳು ಮತ್ತು ಕ್ಷಿಪ್ರ ಮಾದರಿಯಲ್ಲಿ ವಿನ್ಯಾಸ ಮಾಡುವ ಮೂಲಕ ಸಕ್ರಿಯಗೊಳಿಸಲಾಗುತ್ತದೆ. ಇದು ತಕ್ಷಣಕ್ಕೆ ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತದೆಯಷ್ಟೇ ಅಲ್ಲ, ಅವರ ದೀರ್ಘಾವಧಿಯ ಕಾರ್ಯತಂತ್ರದ ದೃಷ್ಟಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತಿರುತ್ತದೆ.

DCX ನೊಳಗೆ ಅಸೆಟ್ ಸ್ಕೋರ್ 700 ಕ್ಕೂ ಹೆಚ್ಚು ಅಸೆಟ್ ಗಳನ್ನು ಹೊಂದಿದೆ. ಇದರ ಜೊತೆಗೆ ಇತರ ಪರಿಹಾರಗಳು ಮತ್ತು ವೇಗವರ್ಧಕಗಳನ್ನೂ ಹೊಂದಿದೆ. ಈ ಪೈಕಿ ಕೆಲವು ಪ್ರಮುಖಾಂಶಗಳು ಇಂತಿವೆ:

• ಕಸ್ಟಮರ್ ಜರ್ನಿ ಮ್ಯಾನೇಜೆಂಟ್: ಪರ್ಸನಲೈಸ್, ಸಂಬಂಧಿತ ಮತ್ತು ಸಂದರ್ಭೋಚಿತವಾದ ಅನುಭವಗಳನ್ನು ನೀಡುವ ನಿಟ್ಟಿನಲ್ಲಿ ಕಸ್ಟಮರ್ ಜರ್ನಿಯನ್ನು ಅರ್ಥ ಮಾಡಿಕೊಳ್ಳುವುದು, ವಿಶ್ಲೇಷಣೆ ಮಾಡುವುದು ಮತ್ತು ಸಂಘಟನೆ ಮಾಡುವುದು.

• ಗ್ರಾಹಕರ ಅನುಭವಕ್ಕಾಗಿ ಜನರೇಟಿವ್ AI: ಮಾರ್ಕೆಟಿಂಗ್ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಪ್ರದರ್ಶಿಸಲಾಗಿರುವ ಜನರೇಟಿವ್ AI ಯನ್ನು ಬಳಸಿಕೊಂಡು ಮಟ್ಟ, ಸ್ಥಿರತೆ ಮತ್ತು ಲಾಭದಾಯಕತೆಯೊಂದಿಗೆ ವಿತರಣೆ ಮಾಡಲಾದ ಕ್ಯುರೇಟೆಡ್ ಅನುಭವಗಳನ್ನು ಸಕ್ರಿಯಗೊಳಿಸುವುದು

ತಲ್ಲೀನಗೊಳಿಸುವ ಅನುಭವಗಳು: ವರ್ಚುವಲ್ ರೀಟೇಲ್ ಔಟ್ ಲೆಟ್ ಗಳು, VR ಸಕ್ರಿಯಗೊಳಿಸಿದ ತರಬೇತಿ ಮತ್ತು VR ಉತ್ಪನ್ನ ಕಾನ್ಸಿಗರೇಟರ್ ಅನ್ನು ಬಳಸಿಕೊಂಡು ಗ್ರಾಹಕರು ಮತ್ತು ಉದ್ಯೋಗಿಗಳಿಗೆ ತೊಡಗಿಸಿಕೊಳ್ಳುವ ಅನುಭವಗಳನ್ನು ರಚನೆ ಮಾಡುವುದು.

• ಲೈವ್ ಕಾಮರ್ಸ್: ಬ್ಯಾಂಡ್ ಗಳು ಪ್ರಭಾವಶಾಲಿ ಮಾರ್ಕೆಟಿಂಗ್ ನಲ್ಲಿ ಟ್ಯಾಪ್ ಮಾಡಲು ಸಹಾಯ ಮಾಡುವುದು ಮತ್ತು ತಮ್ಮ ಪೋರ್ಟಲ್ ಗಳಲ್ಲಿ ನೈಜ ಸಮಯದಲ್ಲಿ ವಾಣಿಜ್ಯವನ್ನು ಸಕ್ರಿಯಗೊಳಿಸುವ ಮೂಲಕ ಖರೀದಿ ವೃತ್ತವನ್ನು ಕಡಿಮೆ ಮಾಡುವುದು.

ಕಾಗ್ನಿಟಿವ್ ವರ್ಕ್ ಆರ್ಡರ್: ಒಂದು ಬಾರಿಯ ಸಂವಾದ ಅಥವಾ ಸಂಪರ್ಕದಲ್ಲಿ ಸೇವಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸಮಗ್ರ ಪರಿಕರಗಳನ್ನು ಒದಗಿಸುವ ಮೂಲಕ ಫೀಲ್ಡ್ ಸರ್ವೀಸ್ ಏಜೆಂಟ್ ಗಳಿಗೆ ಅಧಿಕಾರ ನೀಡುವ Al-ಚಾಲಿತ ಮೊಬೈಲ್ ಅಪ್ಲಿಕೇಶನ್ ಗಳನ್ನು ವಿನ್ಯಾಸಗೊಳಿಸಲಾಗಿದೆ.

• AR ಸ್ವಯಂ ಸೇವೆ: AR ಮತ್ತು AI ಸಕ್ರಿಯಗೊಳಿಸಿದ ಸ್ವಯಂ-ಸೇವಾ ಅಪ್ಲಿಕೇಶನ್ ಗಳಿಂದ ಬೆಂಬಲಿತವಾಗಿರುವ ಸೇವಾ ಸಮಸ್ಯೆಗಳನ್ನು ತಾವಾಗಿಯೇ ಪರಿಹರಿಸುವ ಅಧಿಕಾರವನ್ನು ಗ್ರಾಹಕರಿಗೆ ನೀಡುವುದು.

ಸರ್ಕ್ಯುಲರ್ ಎಕಾನಮಿ ರಿವರ್ಸ್ ಲಾಜಿಸ್ಟಿಕ್ಸ್: ಸರ್ಕ್ಯುಲರ್ ಆರ್ಥಿಕತೆಗಾಗಿ ತಡೆರಹಿತವಾದ ಮತ್ತು ವೆಚ್ಚ-ಪರಿಣಾಮಕಾರಿ ರಿವರ್ಸ್‌ ಲಾಜಿಸ್ಟಿಕ್ಸ್ ಅನ್ನು ಸಕ್ರಿಯಗೊಳಿಸುವುದು, ಮರುಬಳಕೆ, ದುರಸ್ತಿ, ನವೀಕರಣ ಮತ್ತು ಮರುಬಳಕೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುವುದು.

DCX ಫೌಂಡ್ರಿಯನ್ನು ಮುಂಬೈ ಮತ್ತು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ ಹಾಗೂ ನಮ್ಮ ಜಾಗತಿಕ ಗ್ರಾಹಕರ ಮೂಲಕ ನಮ್ಮ ಜಾಗತಿಕ ಕಚೇರಿಗಳಿಗೆ ಸಂಪರ್ಕವನ್ನು ಹೊಂದಿದೆ.

ಪ್ರಾಯೋಗಿಕ ವಿನ್ಯಾಸಗಳನ್ನು ರೂಪಿಸುವುದು ಮತ್ತು ಡೇಟಾ, AI ಯ ಶಕ್ತಿಯನ್ನು ಸಂಯೋಜನೆ ಮಾಡುವ ಮೂಲಕ ಅಸಾಧಾರಣವಾದ ಗ್ರಾಹಕ ಅನುಭವಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದೆ. ಗ್ರಾಹಕರಿಗೆ ನೀಡುವ ಅಸೆಟ್ ಗಳ ರಚನೆಯ ಮೂಲಕ ನಾವೀನ್ಯತೆಗೆ ಸಮರ್ಪಣೆಯಷ್ಟೇ ಅಲ್ಲದೇ, ಕ್ಯಾಪ್ ಜೆಮಿನಿ ಉದ್ಯಮ ಜೋಡಣೆಯ ಕಾರ್ಯತಂತ್ರಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಈ ಮೂಲಕ ಜಾಗತಿಕ ಬದಲಾವಣೆಗಳು ಮತ್ತು ಬೆಳವಣಿಗೆಗಳೊಂದಿಗೆ ತನ್ನ ವೃದ್ಧಿಯ ವೇಗವನ್ನು ಉಳಿಸಿಕೊಳ್ಳುತ್ತಾ ಬಂದಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.