
“ಸನಾತನ ಧರ್ಮ’ವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿ ಬೇಜವಾಬ್ದಾರಿ ಹೇಳಿಕೆ ನೀಡಿ ಅದರ ನಿರ್ಮೂಲನೆಗೆ ಕರೆ ನೀಡಿದ್ದಾರೆ. ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಏಕಂ ಸನಾತನ ಭಾರತ ದಳವು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದೇವೆ “ಸನಾತನ ಧರ್ಮ”ವನ್ನು ಎಚ್‌ಐವಿ(ಏಡ್ಸ್) ಮತ್ತು ಕುಷ್ಠರೋಗಕ್ಕೆ ಹೋಲಿಸಿದ ಎ.ರಾಜಾ (ಡಿಎಂಕೆಗೆ ಪ್ರಧಾನ ಕಾರ್ಯದರ್ಶಿ ) ಅವರ ಕಾಮೆಂಟ್‌ಗಳನ್ನು ನಾವು ಸಮಾನವಾಗಿ ಖಂಡಿಸುತ್ತೇವೆ.
ಕಾಂಗ್ರೆಸ್ ಪಕ್ಷದಿಂದ ಪ್ರಿಯಾಂಕ್ ಖರ್ಗೆ (ಪಂಚಾಯತ್ ರಾಜ್ ಮತ್ತು ಐಟಿ ಸಚಿವರು) ಮತ್ತು ಜಿ. ಪರಮೇಶ್ವರ (ಗೃಹ ಸಚಿವರು) ಬೇಜವಾಬ್ದಾರಿ ಹೇಳಿಕೆಗಳು ಮತ್ತು ಸನಾತನ ಧರ್ಮದ ಬಗ್ಗೆ ಅವರ ಅಜ್ಞಾನವನ್ನು ನಾವು ಖಂಡಿಸುತ್ತೇವೆ.
ಐಪಿಸಿ ಸೆಕ್ಷನ್ 295ಎ ಮತ್ತು ಐಪಿಸಿ ಸೆಕ್ಷನ್ 153ಎ ರ ಅಡಿಯಲ್ಲಿ ಉದಯನಿಧಿ ಸ್ಟಾಲಿನ್ ಮತ್ತು ಎ. ರಾಜಾ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದರೆ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ತಕ್ಷಣವೇ ಕ್ರಮಕೈಗೊಳ್ಳಬೇಕು ಮತ್ತು ಎನ್ಎಸ್ಎ ಅಡಿಯಲ್ಲಿ ತಪ್ಪದೆ ಕಾನೂನು ಕ್ರಮ ಕೈಗೊಳ್ಳಬೇಕು.
ಈ ಮುಂಬರುವ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಮತ್ತು 2024 ರ ಪ್ರಣಾಳಿಕೆಯಲ್ಲಿ ಸನಾತನ ಧರ್ಮ ಮತ್ತು ಅದರ ಅನುಯಾಯಿಗಳನ್ನು ಬಲಪಡಿಸಲು ಹೊಸ ಮಸೂದೆಗಳು ಮತ್ತು ಕಾನೂನುಗಳನ್ನು ಅಂಗೀಕರಿಸುವಂತೆ ನಾವು ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇವೆ.
ಬಿಜೆಪಿ ತನ್ನ ಅಧಿಕಾರದ ಹಂಬಲವನ್ನು ಬಿಟ್ಟು ತಮಗೆ ಮತ ಹಾಕಿದ ಬಹುಸಂಖ್ಯಾತ ಹಿಂದೂಗಳ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ರಾಜ್ಯಾಧ್ಯಕ್ಷರು ಅಗ್ರಹಿಸಿದರು.
City Today News 9341997936
