
ಈ ವರ್ಷ ಸೆಪ್ಟೆಂಬರ್ 19ರ ಚತುರ್ಥಿಯಿಂದ ಸೆಪ್ಟೆಂಬರ್ 28ರ ಚತುರ್ದಶಿಯವರೆಗೆ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಮಹತ್ವ ಹೊಂದಿದೆ. ರಾಷ್ಟ್ರೀಯ ಏಕತೆ, ಸಾಮಾಜಿಕ ಸಾಮರಸ್ಯ, ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯ ಭಾಗವಾಗಿ ಉತ್ಸವ ಆದರಿಸಲ್ಪಡುತ್ತಿದೆ.
ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ಕಳೆದ 9 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಧ್ಯೆ ಕಾರ್ಯನಿರ್ವಹಿಸುತ್ತಿದ್ದು, ಗಣೇಶ ಉತ್ಸವ ಸಮಿತಿಗಳನ್ನು ಒಗ್ಗೂಡಿಸಿ ಗಣೇಶೋತ್ಸವ ಆಚರಣೆಗಳ ಧೈಯೋದ್ದೇಶಗಳಾದ ಧರ್ಮ, ಸಂಸ್ಕೃತಿ, ದೇಶಭಕ್ತಿ, ಸಾಮಾಜಿಕ ಜಾಗೃತಿ ಮತ್ತು ಸೇವಾಕಾರ್ಯಗಳ ಅರಿವನ್ನು ಸಮಿತಿಗಳಲ್ಲಿ ಮೂಡಿಸಲಾಗುತ್ತಿದ್ದು, ಸಾವಿರಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸುತ್ತಿವೆ. 2022ರಲ್ಲಿ 26 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮೂಹಿಕ ಗಣೇಶ ಉತ್ಸವಮೂರ್ತಿಗಳ ಶೋಭಾಯಾತ್ರೆಗಳು ನಡೆದಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಎಲ್ಲಾ ಗಣೇಶೋತ್ಸವ ಸಮಿತಿಗಳಲ್ಲಿ ಈ ವರ್ಷ “ವಿಶ್ವಶಾಂತಿಗಾಗಿ ಹಿಂದೂ ಧರ್ಮ” ಈ ಧೈಯ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದೆ
ಧಾರ್ಮಿಕ ಆಚರಣೆ, ನಂಬಿಕೆ ಮತ್ತು ತಮಗೆ ಇಷ್ಟವಾಗುವ ಮೂರ್ತಿಯನ್ನು ಪೂಜಿಸುವ ಹಕ್ಕು ಪ್ರತಿಯೊಬ್ಬ ಭಕ್ತನಿಗೆ ಇದೆ, ಕಳೆದ ಮೂರು ವರ್ಷಗಳಿಂದ ಪರಿಸರ ಹೆಸರಿನಲ್ಲಿ ಎತ್ತರ, ಬಣ್ಣ, ಪಿಒಪಿ ಮೂರ್ತಿಗಳ ಮೇಲೆ ನಿಷೇಧವನ್ನು ಹೇರುವ ಪ್ರಯತ್ನ ನಿರಂತರವಾಗಿದೆ. ಪರಿಸರಕ್ಕೂ ಹಾನಿಯಾಗಿದೆ, ಭಕ್ತರ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗದಂತೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು BMGUS ಆಗ್ರಹ ಮಾಡುತ್ತ ಬಂದಿದೆ.
ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ಆದೇಶದಲ್ಲಿ ಪಿಒಪಿ ಮೂರ್ತಿ, ವಿಗ್ರಹದ ಎತ್ತರ, ಧಾರ್ಮಿಕ ಆಚರಣೆಗೆ ಬಗ್ಗೆ ಕೆಲವು ನಿರ್ಬಂಧಗಳನ್ನು ವಿಧಿಸಿ ಗಣೇಶ ಮೂರ್ತಿಗಳನ್ನು ಭಕ್ತರಿಗೆ ಸಿಗದಂತೆ ಸ್ಥಾನೀಯ ಆಡಳಿತವು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಐತಿಹಾಸಿಕ ಹಿನ್ನೆಲೆ ಇರುವ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸಲು ಅಡ್ಡಪಡಿಸಲಾಗಿದ್ದು, ಈ ಧೋರಣೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಇದನ್ನು BMGUS ತೀವ್ರವಾಗಿ ವಿರೋಧಿಸುತ್ತಿದ್ದು, ಇದು ಹೀಗೆ ಮುಂದುವರೆದಲ್ಲಿ ರಾಜ್ಯಾದಂತ ಧಾರ್ಮಿಕ ಸಂಘಟನೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ರಸ್ತೆಗಿಳಿದು ಹೋರಾಟ ನಡೆಸಲಿದ್ದಾರೆ.
ದೇಶಾದ್ಯಂತ ಗಣೇಶ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲು ಕಂಡುಕೊಂಡಿರುವ ಪರ್ಯಾಯ ಮಾರ್ಗಗಳಂತೆ ನಮ್ಮ ರಾಜ್ಯದಲ್ಲೂ ಪರಿಸರಕ್ಕೆ ಧಕ್ಕೆಯಾಗದಂತೆ ಕಂಡುಕೊಳ್ಳಲು ಸಾಧ್ಯವಿದೆ.
ಪರ್ಯಾಯ ಮಾರ್ಗಗಳು:-
ಪಿಒಪಿಗಳಿಂದ ನೀರು ಮತ್ತು ಪರಿಸರಕ್ಕೆ ಹಾನಿಯಾಗದಂತೆ ನಿಗದಿ ಪಡಿಸಿರುವ ಕಲ್ಯಾಣಿಗಳಲ್ಲಿ ಮಾತ್ರ ವಿಸರ್ಜನೆ ಮಾಡಿಸುವುದು ಮತ್ತು ಪಿಒಪಿ ಮೂರ್ತಿಗಳನ್ನು ಅಲಂಕಾರಕ್ಕೆ ಮಾತ್ರ ಬಳಸಿ ಮುಂದಿನ ವರ್ಷವು ಇದೇ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಎಲ್ಲಾ ಸಮಿತಿಗಳಿಗೂ ಅರಿವು ಮೂಡಿಸುತ್ತೇವೆ. ಅದರಂತೆ ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಯಾವುದೇ ಅಡಚಣೆ ಆಗದಂತೆ ತಾವು ನಿರ್ದೇಶನ ನೀಡಬೇಕೆಂದು ವಿನಂತಿಸುತ್ತೇವೆ.
ಉತ್ಸವ ಮೂರ್ತಿ ಬಿಡುವ ಕೆರೆ, ಕಲ್ಯಾಣಿ ಸ್ಥಳದಲ್ಲಿ ಅಗತ್ಯ ವ್ಯವಸ್ಥೆಗಳಾದ ಬೆಳಕು, ರಕ್ಷಣೆ, ಸಹಾಯಕ ಸಿಬ್ಬಂದಿಗಳು, ಕುಡಿಯುವ ನೀರು, ಶೌಚಾಲಯ, ಸಾಲಾಗಿ ಬರಲು ಬ್ಯಾರಿಕೇಡ್ ವ್ಯವಸ್ಥೆ, ರಸ್ತೆ ಸಂಚಾರ ನಿಯಂತ್ರಣ, ಸೂಚನೆಗಳನ್ನು ನೀಡಲು ಧ್ವನಿವರ್ಧಕ ವ್ಯವಸ್ಥೆ, ಅಂಬುಲೆನ್ಸ್ ಮತ್ತು ಪ್ರಥಮ ಚಿಕಿತ್ಸೆ, ದೊಡ್ಡ ಗಣಪತಿಗಳನ್ನು ವಿಸರ್ಜಿಸಲು ಕೆರೆಯ ಕಲ್ಯಾಣಿಗಳಲ್ಲಿ ನೀರಿನ ವ್ಯವಸ್ಥೆ, ಬೃಹತ್ ಕ್ರೇನ್‌ಗಳು, ಕಾಲ ಕಾಲಕ್ಕೆ ಕಲ್ಯಾಣಿಗಳ ಸ್ವಚ್ಛತೆಗಾಗಿ ಜೆಸಿಬಿಗಳು, ತುರ್ತು ನಿರ್ವಹಣೆ ಸುರಕ್ಷಾ ಪಡೆಗಳ ವ್ಯವಸ್ಥೆ ಮಾಡಿಸಬೇಕು. ಅನೇಕ ವರ್ಷಗಳಿಂದ ಆಚರಣೆ ಮಾಡುತ್ತಿರುವ ಸಮಿತಿಗಳಿಗೆ ಕನಿಷ್ಠ ಐದು ವರ್ಷಗಳ ಪರವಾನಿಗೆಯನ್ನು ಒಮ್ಮೆಲೆ ನೀಡಬೇಕು.
ಧ್ವನಿವರ್ಧಕ, ಡಿಜೆ ಬಳಕೆಗೆ ಯಾವುದೇ ನಿರ್ಬಂಧ ವಿಧಿಸದೆ ಅವಕಾಶವನ್ನು ಕಲ್ಪಿಸಿಕೊಡಬೇಕು. ಮಂಡಳಿಗಳಿಗೆ ಪೊಲೀಸರ ಪೊಲೀಸರ ಕಿರುಕುಳ, ಕೇಸ್ ದಾಖಲು ಮಾಡದಂತೆ ರಕ್ಷಣೆಯನ್ನು ನಿಡಬೇಕು. ಮೆರವಣಿಗೆಯ ಸಮಯ, ಮಾರ್ಗಕ್ಕೆ ಅಡೆತಡೆ ಮಾಡದಂತೆ, ಮೆರವಣಿಗೆ ಮಾರ್ಗದಲ್ಲಿ ಸಂಚಾರಕ್ಕೆ ಎಲ್ಲಾ ವ್ಯವಸ್ಥೆಯನ್ನು ಮಾಡಬೇಕು.
ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಎಲ್ಲಾ ವ್ಯವಸ್ಥೆಗಳನ್ನು ರೂಪಿಸಿ ಮೂರ್ತಿಗಳ ವಿಸರ್ಜನೆಗೆ ಸಮಯದ ನಿಬಂಧನೆ ಮಾಡದೆ ಧಾರ್ಮಿಕ ವಿಧಿವಿಧಾನದಂತೆ ವಿಸರ್ಜಿಸಲು ವ್ಯವಸ್ಥೆ ರೂಪಿಸುವುದು.
ದೇಶದ ವಿವಿಧ ನಗರಗಳಲ್ಲಿ ಈಗಾಗಲೇ ಮೂರ್ತಿಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಮರುಬಳಕೆ ವಸ್ತುವಾಗಿ ಪರಿವರ್ತಿಸುವ ತಂತ್ರಜ್ಞಾನ ಬಳಸುತ್ತಿರುವ ನಗರ (ಪೂಣೆ) ಪಾಲಿಕೆಗಳನ್ನು ಸಂಪರ್ಕಿಸಿ, ತಂತ್ರಜ್ಞಾನದ ಅಧ್ಯಯನ ಮತ್ತು ಅದೇ ರೀತಿಯಲ್ಲಿ ಇಲ್ಲಿಯೂ ಕ್ರಮ ಕೈಗೊಳ್ಳಲು ನಿಶ್ಚಿಯಿಸುವುದು,
ರಾಜ್ಯಾದ್ಯಂತ ಕಳೆದ 3 ವರ್ಷಗಳಿಂದ ಈ ರೀತಿಯ ಬೇಡಿಕೆಗಳನ್ನು ರಾಜ್ಯ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಿದ್ದು, ಸೂಕ್ತ ಕ್ರಮಗಳಿಗಾಗಿ ಹೋರಾಟವನ್ನು ನಡೆಸಿದ್ದರೂ ಸಹಾ ಇಲ್ಲಿಯವರೆಗೂ ಯಾವುದೇ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳದೆ, ಏಕಾಏಕಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಖಂಡನೀಯ.
ಹಬ್ಬಕ್ಕೆ ಕೆಲವೇ ದಿನಗಳು ಇದ್ದು, ತಕ್ಷಣ ಸರ್ಕಾರ ಮಧ್ಯ ಪ್ರವೇಶಿಸಿ ಮುಕ್ತವಾಗಿ ಗಣೇಶೋತ್ಸವ ಆಚರಿಸಲು ಅನುಕೂಲವಾಗುವ ವಾತಾವರಣವನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಬೇಕೆಂದು ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೊಷ್ಠಿಯಲ್ಲಿ ಈ.ಅಶ್ವತ್ಥನಾರಾಯಣ ಅಧ್ಯಕ್ಷರು ಮತ್ತು ರಾಜಣ್ಣ ಹೊನ್ನೇನಹಳ್ಳಿ ಸಂಯೋಜಕರು ಸರ್ಕಾರವನ್ನು ಆಗ್ರಹಿಸಿದರು.
City Today News 9341997936
