
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಪುರೋಹಿತರಾದ ಶ್ರೀ ನಂದ ಕಿಶೋರ್ ಆಚಾರ್ಯರು ಹಾಗೂ ಕಟ್ಟಿ ರಾಘವೇಂದ್ರ ಆಚಾರ್ಯರು ಸಾಮೂಹಿಕ ಶ್ರೀ “ಸತ್ಯನಾರಾಯಣ ವ್ರತ ಪೂಜೆ” ಯನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ ಭಕ್ತಾದಿಗಳಿಂದ ಸಂಕಲ್ಪವನ್ನು ಮಾಡಿಸಿ ನಂತರ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಸಂಕಲ್ಪಿಸಿ ವ್ರತ ಪೂಜೆಯನ್ನು ನೆರವೇರಿಸಲಾಯಿತು, ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿ, ಶ್ರೀ ಸತ್ಯನಾರಾಯಣ ದೇವರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು,
City Today News 9341997936
