
ಬೆಂಗಳೂರು, ಅಕ್ಟೋಬರ್ 06, 2023: ಏಷ್ಯಾದ ಅತ್ಯಂತ ದೊಡ್ಡ ಆರ್ಕಿಟೆಕ್ಚರ್, ಒಳಾಂಗಣ, ವಿನ್ಯಾಸ ಮತ್ತು ಕಟ್ಟಡ ವಸ್ತುಗಳ ಪ್ರದರ್ಶನ ಏಸ್ ಟೆಕ್(ACETECH) ಬೆಂಗಳೂರಿಗೆ ಮರಳಿ ಬಂದಿದೆ ಮತ್ತು ಅಕ್ಟೋಬರ್ 6ರಿಂದ 8, 2023ರವರೆಗೆ ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ)ಯಲ್ಲಿ ಪ್ರಾರಂಭವಾಗಿದೆ.
ಕರ್ನಾಟಕ ಸರ್ಕಾರದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಜಮೀರ್ ಅಹ್ಮದ್ ಹಾಗೂ ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಈ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ವರ್ಷದ ಕಾರ್ಯಕ್ರಮವು ಹಿಂದೆಂದಿಗಿಂತಲೂ ದೊಡ್ಡದು ಹಾಗೂ ಉತ್ತಮಗೊಂಡಿದ್ದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ ಗಳ 350ಕ್ಕೂ ಹೆಚ್ಚು ತಮ್ಮ ಆವಿಷ್ಕಾರಕ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದ್ದಾರೆ.
ಏಸ್ ಟೆಕ್ ವಿಸ್ತಾರವಾದ ಸಂಬಂಧಿತ ಕಾರ್ಯಕ್ರಮಗಳು ಮತ್ತು ಜ್ಞಾನ-ಹಂಚಿಕೆಯ ವಿಚಾರ ಸಂಕಿರಣಗಳನ್ನು ಆಯೋಜಿಸಲು ಖ್ಯಾತಿ ಪಡೆದಿದ್ದು ಆರ್ಕಿಟೆಕ್ಚರ್, ಕಟ್ಟಡ ನಿರ್ಮಾಣ ಮತ್ತು ವಿನ್ಯಾಸ ಕ್ಷೇತ್ರದಲ್ಲಿನ ವೃತ್ತಿಪರರಿಗೆ ಕಡ್ಡಾಯವಾಗಿ ಭೇಟಿ ನೀಡಬೇಕಾದ ತಾಣವಾಗಿದೆ. ಈ ಮೂರು ದಿನಗಳ ಉತ್ಸವದಲ್ಲಿ:
ವಾಸ್ತುಶಿಲ್ಪದ ಅನುಸ್ಥಾಪನೆಗಳು: ಅತ್ಯಾಧುನಿಕ ವಾಸ್ತುಶಿಲ್ಪೀಯ ಅನುಸ್ಥಾಪನೆಗಳು ಸೃಜನಶೀಲತೆ ಮತ್ತು ವಿನ್ಯಾಸದ ಗಡಿಗಳನ್ನು ವಿಸ್ತರಿಸುತ್ತವೆ.
ಡಿಸೈನ್ ವಾಲ್: ಡಿಸೈನ್ ವಾಲ್ ವಿನ್ಯಾಸ ಮತ್ತು ಬಳಕೆಯ ರೂಢಿಗಳ ಬದಲಾಗುತ್ತಿರುವ ವಿಶ್ವದಲ್ಲಿ ಆವಿಷ್ಕಾರಕ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಎತ್ತಿ ತೋರಿಸುತ್ತದೆ. ಇದರಲ್ಲಿ ಪ್ರಮುಖ ವಾಸ್ತುಶಿಲ್ಪಿಗಳು, ವಿನ್ಯಾಸಕರು ಮತ್ತು ಡೆವಲಪರ್ ಗಳನ್ನು ಒಳಗೊಂಡ ಖ್ಯಾತ ತೀರ್ಪುಗಾರರಿಂದ ಕಠಿಣ ನಾಮ ನಿರ್ದೇಶನಗಳನ್ನು ಒಳಗೊಂಡಿರುತ್ತದೆ. ತೀರ್ಪುಗಾರರೊಂದಿಗೆ ನೇರವಾಗಿ ಪ್ರಸ್ತುತಪಡಿಸುವ ಅವಕಾಶವನ್ನೂ ಪಡೆಯುತ್ತಾರೆ.
ಸ್ಟಾಪ್ ಅಂಡ್ ಶಾಪ್: ಈ ಉಪಕ್ರಮದ ಭಾಗವಾಗಿ ನಾವು 100 ಪ್ರಮುಖ ಆರ್ಕಿಟೆಕ್ಟ್ ಮತ್ತು ಡೆವಲಪರ್ ಗಳನ್ನು ತರುವುದು ಮಾತ್ರವಲ್ಲದೆ ಇಡೀ ವಿನ್ಯಾಸ, ವಾಸ್ತುಶಿಲ್ಪೀಯ ಮತ್ತು ಖರೀದಿಯ ತಂಡಗಳನ್ನು ಈ ಪ್ರದರ್ಶನಕ್ಕೆ ತರುತ್ತೇವೆ. ಇದು ಜ್ಞಾನ ಆಧರಿತ ಚಟುವಟಿಕೆಯಾಗಿದ್ದು ಇದರಲ್ಲಿ ತಂಡಗಳು ಈ ಶೋನಲ್ಲಿ ಪ್ರದರ್ಶಿಸಲಾದ ಅತ್ಯಾಧುನಿಕ ಪ್ರವೃತ್ತಿಗಳು, ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಕಂಡುಕೊಳ್ಳಬಹುದು.
ಏಸ್ ಕನೆಕ್ಟ್: ವಸತಿ, ವಾಣಿಜ್ಯ, ಆತಿಥ್ಯ, ಲೈಟಿಂಗ್ ಕನ್ಸಲ್ಟೆಂಟ್ ಗಳು ಮತ್ತು ವಿನ್ಯಾಸಕರು, ಆರೋಗ್ಯಸೇವೆ, ರೀಟೇಲ್ ಮತ್ತು ಮೂಲಸೌಕರ್ಯದ ಖರೀದಿ ತಂಡಗಳು ಇರುತ್ತವೆ. ಬಿ2ಬಿಯನ್ನು ಡೆವಲಪರ್ ಗಳು, ಹೋಟೆಲಿಯರ್ ಗಳು, ಎಂಇಪಿ ಕನ್ಸಲ್ಟೆಂಟ್ ಮತ್ತು ಸ್ಪೆಸಿಫೈಯರ್ ಗಳನ್ನು ಭೇಟಿ ಮಾಡಲು ವಿಶೇಷ ವೇದಿಕೆ ಒದಗಿಸುವ ಮೂಲಕ ಹೊಸ ಎತ್ತರಕ್ಕೆ ಕೊಂಡೊಯ್ಯಲಾಗುತ್ತದೆ. ಈ ಕಾರ್ಯಕ್ರಮವು ಒನ್ ಆನ್ ಒನ್ ಭೇಟಿಯಿಂದ ಸಂಪೂರ್ಣ ರಿಯಾಲಿಟಿ ಉದ್ಯಮದ ವ್ಯಾಪ್ತಿಯ ಭರವಸೆ ನೀಡುತ್ತದೆ.
ಗ್ರಾಂಡ್ ಸ್ಟಾಂಡ್ ಪುರಸ್ಕಾರಗಳು: ಈ ಪ್ರತಿಷ್ಠಿತ ಪ್ರಶಸ್ತಿಗಳ ಮೂಲಕ ಆರ್ಕಿಟೆಕ್ಚರ್ ಮತ್ತು ವಿನ್ಯಾಸದಲ್ಲಿ ಶ್ರೇಷ್ಠತೆಯನ್ನು ಗುರುತಿಸಿ ಮತ್ತು ಸಂಭ್ರಮಿಸಿ. ಆರ್ಕಿಟೆಕ್ಟ್ ಗಳ ತೀರ್ಪಗಾರರಿಂದ ಬೆಸ್ಟ್ ಬೂತ್ ಪುರಸ್ಕಾರ ನೀಡಲಾಗುತ್ತದೆ.
ಈ ಕಾರ್ಯಕ್ರಮವು ಅದ್ಧೂರಿ ಉದ್ಘಾಟನಾ ಕಾರ್ಯಕ್ರಮದಿಂದ ಪ್ರಾರಂಭವಾಯಿತು ಮತ್ತು ಗೌರವಾನ್ವಿತ ಗಣ್ಯರು ಮತ್ತು ಉದ್ಯಮದ ನಾಯಕರು ಅವರೊಂದಿಗೆ ಉದ್ಘಾಟನೆಯಲ್ಲಿ ಪರಿಣಿತರ ಚರ್ಚೆ ಆಯೋಜಿಸಲಾಗಿತ್ತು.
ಗಣ್ಯ ಅತಿಥಿಗಳ ಪಟ್ಟಿಯಲ್ಲಿ ಖ್ಯಾತನಾಮರಿದ್ದಾರೆ ಮತ್ತು ಮುಂಚೂಣಿಯ ಆರ್ಕಿಟೆಕ್ಟ್ ಗಳು ಮತ್ತು ಬಿಲ್ಡರ್ ಗಳ ಬೆಂಬಲಿಸುವ ಸಂಸ್ಥೆಗಳಿವೆ. ಈ ಕಾರ್ಯಕ್ರಮವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಉದ್ಘಾಟಿಸಲಾಗಿದ್ದು ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಭವ್ಯವಾದ ವೇದಿಕೆ ಒದಗಿಸಿದೆ.
ಏಸ್ ಟೆಕ್ ಬೆಂಗಳೂರು 2023 ಉದ್ಯಮದ ನಾಯಕರು, ವೃತ್ತಿಪರರು ಮತ್ತು ಉತ್ಸಾಹಿಗಳಿಗೆ ಸಂವಹನ ನಡೆಸಲು, ಜಾಲ ನಿರ್ಮಾಣ ಮಾಡಿಕೊಳ್ಳಲು ಮತ್ತು ಆರ್ಕಿಟೆಕ್ಚರ್, ಒಳಾಂಗಣ ವಿನ್ಯಾಸ ಮತ್ತು ಕಟ್ಟಡ ನಿರ್ಮಾಣದ ವಿಶ್ವದಲ್ಲಿ ಅತ್ಯಾಧುನಿಕ ಪ್ರವೃತ್ತಿಗಳು ಮತ್ತು ಆವಿಷ್ಕಾರಗಳನ್ನು ಕಂಡುಕೊಳ್ಳಲು ವೇದಿಕೆ ಒದಗಿಸಿದೆ.
ಏಸ್ ಟೆಕ್ ಎಕ್ಸಿಬಿಷನ್ಸ್ ಸಂಸ್ಥಾಪಕ ಮತ್ತು ಸಿಇಒ ಸುಮಿತ್ ಗಾಂಧಿ,”ಈ ಕಾರ್ಯಕ್ರಮವು ವೃತ್ತಿಪರರಿಗೆ ಸಂಪರ್ಕ ಹೊಂದಲು ಮತ್ತು ಕಲಿಯಲು ವಿಶಿಷ್ಟ ಅವಕಾಶ ಕಲ್ಪಿಸಿದ್ದು ಎಲ್ಲರಿಗೂ ಇದನ್ನು ಅವಿಸ್ಮರಣೀಯ ಅನುಭವವಾಗಿಸಿದೆ” ಎಂದರು.
ಏಸ್ ಟೆಕ್ ಬ್ರಾಂಡ್ ನಿರ್ದೇಶಕ ಗೌರವ್ ಪಾಟ್ಕರ್, “ಈ ಅದ್ಧೂರಿ ಕಾರ್ಯಕ್ರಮಕ್ಕೆ ಭಾಗವಹಿಸುವವರನ್ನು ಸ್ವಾಗತಿಸಲು ನಾವು ಬಹಳ ಥ್ರಿಲ್ ಆಗಿದ್ದೇವೆ. ಏಸ್ ಟೆಕ್ ಬೆಂಗಳೂರು 2023 ಉದ್ಯಮದಲ್ಲಿ ಶ್ರೇಷ್ಠತೆಯ ಮಾನದಂಡಗಳನ್ನು ಮರು ವ್ಯಾಖ್ಯಾನಿಸಲಿದೆ” ಎಂದರು.
ಹಲವು ಕಾರ್ಯಕ್ರಮಗಳು, ಪರಿಣಿತರ ಚರ್ಚೆಗಳು, ಪುರಸ್ಕಾರಗಳು ಈ ಪ್ರದರ್ಶನದ ಜೊತೆ ಜೊತೆಯಲ್ಲೇ ನಡೆಯುವ ಏಸ್ ಟೆಕ್ ಬೆಂಗಳೂರು 2023 ಭಾಗವಹಿಸುವ ಎಲ್ಲರಿಗೂ ತಲ್ಲೀನಗೊಳಿಸುವ ಅನುಭವ ನೀಡುತ್ತದೆ. ಈ ಕಾರ್ಯಕ್ರಮವು ಆರ್ಕಿಟೆಕ್ಟ್ ಗಳು, ಒಳಾಂಗಣ ವಿನ್ಯಾಸಕರು, ಬಿಲ್ಡರ್ ಗಳು, ಡೀಲರ್ ಗಳು, ಬಿ2ಬಿ ನಿರ್ಧಾರ ಕೈಗೊಲ್ಳುವವರು, ಖರೀದಿದಾರರು ಮತ್ತು ಉದ್ಯಮದ ಉತ್ಸಾಹಿಗಳಿಗೆ ಸಕ್ರಿಯವಾಗಿರಲು ಮತ್ತು ಸಹಯೋಗ ನಿರ್ಮಿಸಲು ಅವಕಾಶಗಳನ್ನೂ ಒದಗಿಸುತ್ತದೆ.
ಏಸ್ ಟೆಕ್ ಬೆಂಗಳೂರು 2023ರ ಕುರಿತು ಪಾಸ್ ಗಳು, ವೇಳಾಪಟ್ಟಿ ಮತ್ತು ಅಪ್ಡೇಟ್ ಗಳು ಕುರಿತಾದ ಹೆಚ್ಚಿನ ಮಾಹಿತಿಗೆ ದಯವಿಟ್ಟು ಭೇಟಿ ಕೊಡಿ(ಏಸ್ ಟೆಕ್ ನ ಅಧಿಕೃತ ವೆಬ್ ಸೈಟ್ https://www.etacetech.com)
City Today News 9341997936
