
ಬಿಜೆಪಿ ಸರ್ಕಾರ 2020ರಲ್ಲಿ ಕೃಷಿ ಕಾಯ್ದೆ ಜಾರಿಗೆ ತಂದಾಗ ನಮ್ಮ ಜೊತೆ ಸೇರಿ ವಿರೋಧಿಸಿದ ಇವರು ಈಗ ಯಾವುದೇ ಒಂದು ಗ್ಯಾರಂಟಿಗೆ ಕೂಡಿಸಿದ ಹಾಗೆ ಸಾವಿರ ಕೋಟಿ ಕೂಡಿಸ ಬೇಕಾಗಿಲ್ಲ (ಹಣದ ಖರ್ಚುಇಲ್ಲದೆ) ಜಾರಿಮಾಡಬಹುದಾದ ಕೆಲಸ ಇವರು ಮಾಡಿಲ್ಲ. ಇದು ಚುನಾವಣ ಪುಣಾಳಿಕೆಯಲ್ಲಿ ಕೂಡ ಹೇಳಿಕೊಂಡಿದ್ದಾರೆ. ಇನ್ನೂ ಕೃಷಿಕಾಯ್ಕೆ ವಾಪಸ್ ಪಡೆದಿಲ್ಲ.
MSPಗೆ ಸಂಬಂಧಪಟ್ಟಂತೆ ನೀತಿರೂಪಿಸಿ ಶಾಸನ ಬದ್ಧಗೊಳಿಸದಿದ್ದರೆ ರೈತರಿಗೆ ಉಳಿಗಾಲವಿಲ್ಲ.
ಉದಾ: ತೆಂಗಿನ ಕೊಬ್ಬರಿಗೆ MSP 11,750/- ರೂ ಇದೆ. ಸಿದ್ದರಾಮಯ್ಯ ಸರ್ಕಾರ 1,250/- ರೂ ಸಹಾಯ ಘೋಷಣೆ ಮಾಡಿದರು. ಈ ಸಹಾಯ ಹಣ ರಾಜ್ಯದಲ್ಲಿ ಒಂದು ಸಾವಿರ ರೈತರಿಗೆ ಮುಟ್ಟಿದಿದ್ದರು ಏಕೆ? ಹೇಗೆ? ಇದರ ಪುಯೋಜನ ತಲುಪದಿದ್ದರೆ ಏನೂ ಪುಯೋಜನ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಂಚೆ ಪಕ್ಷದ ಅಧ್ಯಕ್ಷ DK ಶಿವಕುಮಾರ್ ತಂಗುವುದೇಶದ ರೈತರಿಗೆ ಐದು ಗ್ಯಾರಂಟಿ ಜೊತೆಗೆ ರೈತರಿಗೆ 6ನೇ ಗ್ಯಾರಂಟಿ. ನಾವು ಅಧಿಕಾರಕ್ಕೆ ತಕ್ಷಣ 15,000/- ಸಾವಿರಕ್ಕೆ ಖರೀದಿ ಪ್ರಾರಂಭಿಸುತ್ತೇವೆ ಎಂದು ಮಾತುಕೊಟ್ಟರು, ಉಪಯೋಗಕ್ಕೆ ಬರಲಿಲ್ಲ.
MSP (ಕನಿಷ್ಠ ಬೆಂಬಲ ಬೆಲೆ) ತೋರಿಕೆಗೆ ಮಾತ್ರವೇ ಏರಿತ್ತು.ಇದರಿಂದ ಏನು ಪ್ರಯೋಜನವಿಲ್ಲ.ಶ್ರೀ ಸಿದ್ದರಾಮಯ್ಯ ಕಳೆದ ಸರ್ಕಾರದಲ್ಲಿ 18,000/-ರೂಗೆ ಮಾರಿದ ರೈತರು ಈಗ 8,000/- ರೂ.ಗೆ ಮಾರಿದರೆ ಏನು ಲಾಭ ಸರ್ಕಾರಕ್ಕೆ MSP ಶಾಸನಬದ್ಧಗೊಳ್ಳದಿದ್ದರೆ ತೊರಿಕ ಕಾರ್ಯ ಕ್ರಮವಾಗಿ ಉಳಿಯುತ್ತದೆ.
ವಿದ್ಯುತ್, ಗಾಮೀಣ ವುದೇಶದ ವಿದ್ಯುತ್ ಕನಿಷದಲ್ಲಿ ಅನಿಷ್ಠವಾಗಿದ್ದ ಸರ್ಕಾರ ಚುನಾವಣೆ ಪೂರ್ವದಲ್ಲಿ ಹಳ್ಳಿಗಳಿಗೆ ನಿರಂತರ ವಿದ್ಯುತ್ ಹಾಗೂ ಪಂಪ್‌ಸೆಟ್‌ಗೆ ನಿರಂತರ 8 ಗಂಟೆ ಕೊಡುವುದಾಗಿ ಘೋಷಣೆ ಮಾಡಿದ್ದೀರಿ ಜೊತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ ಆದರೆ 8 ಗಂಟೆ ವಿದ್ಯುತ್ ಕೊಡುವವರೆಗೆ ಹೋರಾಟ ಮುಂದುವರೆಯಲಿದೆ.
ಬರಗಾಲ ನಮ್ಮ ರೈತ ಕನ್ಮದಲ್ಲಿ ಇರುವಾಗ ಸಹಾಯಕ್ಕೆ ಬರುವುದಿಲ್ಲ, ಪೂರ್ಣ ಬರಿದಾದ ಮೇಲೆ ನೂರರಷ್ಟು ನಷ್ಟವಾಗಿದ್ದರೆ ಇವರು 25 ರೂ ಕೊಡುವುದಿಲ್ಲ. ಇವರು ಕೊಡೋದು ನಾಲ್ಕಣಿ ಅಂದ 25 ಪ್ರಸೆ ಅಷ್ಟೇ
ಇವರು 70ರ ದಶಕದಲ್ಲಿ ಇದ್ದ ರಾಷ್ಟ್ರೀಯ ವಿಪತ್ತು ನೀತಿ ನಿಯಮಗಳನ್ನು ಮಾತ್ರ ಮಾತನಾಡುತ್ತಿದ್ದಾರೆ. ಈ ನೀತಿ ಬದಲು ಮಾಡದೇ ವೈಜ್ಞಾನಿಕ ಮಾನದಂಡ ಇಲ್ಲದೇ ಇರುವ ಈ ನೀತಿ ಕೈ ಬಿಟ್ಟು, 2023ರ ನೀತಿ ರೂಪಿಸಿ ವಿಪತ್ತು ಪರಿಹಾರ ಜಾರಿಗೆ ತನ್ನಿ, ಅದೇ ಕಾರ್ಪೋಟ ಕಂಪನಿಗೆ ಇವರೇ ಕರೆದು ಸಾವಿರ ಕೋಟಿ ಕೊಡಿಸಿ ಇವರೇ ಮನ್ನಾ ಕೂಡ ಮಾಡಿಸುತ್ತಾರೆ.
ಸರಕಾರವು ತೆಗೆದುಕೊಂಡ ತೀರ್ಮಾನದಂತೆ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಲ್ಲಿಯ ವ್ಯಾಪಾರಿಗಳಿಗೆ ನೀಡಿದ ಪರವಾನಿಗೆಯನ್ನು ರದ್ದು ಪಡಿಸಲು ಸರ್ಕಾರ ನೋಟಿಸ್ ಜಾರಿ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ನೀವು ಕೃಷಿಕರನ್ನು ನಾಶಪಡಿಸುವ ಉದ್ದೇಶವೇ ಇದಾಗಿದೆ, ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಈ ಸ್ಥಿತಿಯಲ್ಲಿ ಸರ್ಕಾರ ತಕ್ಷಣವೇ ಈ ಕಾಯ್ದೆಯನ್ನು ವಾಪಾಸ್ ಪಡೆಯುವ ತುರ್ತು ಕೆಲಸ ಮಾಡಬೇಕಾಗಿದೆ. ಇಲ್ಲವಾದಲ್ಲಿ ಈ ನಾಡಿನ ರೈತರು ಸರ್ಕಾರ ವಿರುದ್ಧ “ರೈತ ವಿರೋಧಿ ಸರ್ಕಾರ” ಎಂದು ಪುತಿಭಟನೆಗೆ ಕರೆ ನೀಡಲು ಸಂಘವು ತೀರ್ಮಾನಿಸಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್- ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.
ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಭಕ್ತರಹಳ್ಳಿ, ಬೈರೇಗೌಡರು-ಪ್ರಧಾನ ಕಾರ್ಯದರ್ಶಿಗಳು, ವೀರಭದ್ರಸ್ವಾಮಿ-ಕಾರ್ಯದರ್ಶಿ, ಹುಸ್ಕೂರು ಸುರೇಶ-ಕಾರ್ಯದರ್ಶಿ ಮತ್ತು ರವಿಚಂದ್ರ ರವರು ಉಪಸ್ತಿತಿಯಿದ್ದರು
City Today News 9341997936
