
ಅನ್ನಭಾಗ್ಯ ಯೋಜನೆಯಡಿ ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಒತ್ತಾಯಿಸಿ 19 ರಂದು ನ್ಯಾಯ ಬೆಲೆ ಅಂಗಡಿ ಬಂದ್
ದಿನಾಂಕ: 19.10.2023 , 11:00 ಗಂಟೆಗೆ
ಸ್ಥಳ: ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಆಯುಕ್ತರ ಕೇಂದ್ರ ಕಚೇರಿ ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು
ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿಗೆ ನೇರ ನಗದು ಸೌಲಭ್ಯ ಕಲ್ಪಿಸುವುದನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಡಿಬಿಟಿ ಮೊತ್ತಕ್ಕೆ ನಮಗೆ ಕಮೀಷನ್ ಭಾಗ್ಯ ಕೋಡಿ ಎಂದು ಆಗ್ರಹಿಸಿ ಅಕ್ಟೋಬರ್ 19 ರಂದು ನ್ಯಾಯ ಬೆಲೆ ಅಂಗಡಿಗಳನ್ನು ಒಂದು ದಿನದ ಸಾಂಕೇತಕವಾಗಿ ಬಂದ್ ಮಾಡಲು `ರಾಜ್ಯ ಪಡಿತರ ವಿತರಕರ ಸಂಘ ನಿರ್ಧರಿಸಿದೆ.
ಐದು ಕೆ.ಜಿ. ಅಕ್ಕಿ ಬದಲಿಗೆ ನಗದು ಸೌಲಭ್ಯ ಕಲ್ಪಿಸುತ್ತಿರುವುದರಿಂದ ನಮಗೆ ದೊರೆಯಬೇಕಾದ ಕಮೀಷನ್ ಹಣದಿಂದ ವಂಚಿತರಾಗುತ್ತಿದ್ದೇವೆ.
ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಆರನೇ ತಿಂಗಳಿಗೆ ಕಾಲಿಟ್ಟಿದ್ದು, ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದು, ನಮಗೆ ಅಹವಾಲಿಗೆ ಸ್ಪಂದನೆ ದೊರೆತಿಲ್ಲ. ಸೌಜನ್ಯಕ್ಕಾದರೂ ಸರ್ಕಾರ ನಮ್ಮ ಸಂಘಟನೆಗಳೊಂದಿಗೆ ಚರ್ಚಿಸಿಲ್ಲ. ಪಡಿತರ ವಿತರಕರ ಬಗ್ಗೆ ಕಾಳಜಿ ವಹಿಸದಿರುವುದು ತುಂಬಾ ನೋವು ತಂದಿದೆ ಎಂದು ಬೆಂಗಳೂರು ನಗರ ಸರ್ಕರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ವತಿಯಿಂದ ಜೆ.ಬಿ ಕುಮಾರ್ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
City Today News 9341997936
