
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು ಪರಿಷ್ಕರಣಿಯಾಗಿ 13 ವರ್ಷಗಳೇ ಕಳೆದಿದ್ದು, ಸದರಿ ವೃಂದ ಮತ್ತು ನೇಮಕಾತಿ ನಿಯಮಗಳು(ಸಿ&ಆರ್) ಯಾವುದೇ ಬದಲಾವಣೆಗೆ ಒಳಪಡದೆ ಇದ್ದರೂ ಕೂಡ 2016ರಲ್ಲಿ ನೇಮಕವಾದ SDA, FDA, ವಾರ್ಡನ್ ಗಳಿಗೆ 2011ರ ವೃಂದ ಮತ್ತು ನೇಮಕಾತಿಯ ಅಧೀನದಲ್ಲಿ ಮುಂಬಡ್ತಿ ಆದೇಶ ನೀಡಲಾಗಿದೆ.
ಅಲ್ಲದೆ ಜಿಲ್ಲಾ ಅಧಿಕಾರಿಗಳ ಹುದ್ದೆಗಳಿಗೆ ಕಾರ್ಯಕಾರಿ ಸಮಿತಿ ಆದೇಶದ ಮೂಲಕ ಸಿ&ಆ ನಿಯಮಗಳಿಗೆ ಒಳಪಡಿಸದೆ ‘ಎ’ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ.
ಮತ್ತೇ. ಈಗ DOB:22-9-2023 ರಂದು ಮೆಟ್ರಿಕ್ ನಂತರ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯಗಳ ನಿಲಯಪಾಲಕರ ಹುದ್ದೆಗಳ ಮುಂಬಡ್ತಿಗೆ ಆದೇಶ ಇಲಾಖೆಯಿಂದ ಆದೇಶ ಹೋರ ಬಿದ್ದಿದೆ.
ಅಲ್ಲದೆ 62 ಉನ್ನತೀಕರಿಸಿದ ಶಾಲೆಯಲ್ಲಿಯ ‘ಎ’ವೃಂದದ ಪ್ರಾಂಶುಪಾಲರ ಹುದ್ದೆಗಳನ್ನು – ಹೊಸದಾಗಿ ಸೃಜಿಸಿ ಮುಂಬಡ್ತಿಗೆ ಅವಕಾಶ ನೀಡಿದರೆ ‘ಬಿ’ವೃಂದದ ಪ್ರಾಂಶುಪಾಲರು ‘ಎ’ವೃಂದಕ್ಕೆ ಮುಂಬಡ್ತಿ ಹೊಂದುವ ಮೂಲಕ ಶಿಕ್ಷಕರಿಗೆ ಮುಂಬಡ್ತಿಗೆ ಅವಕಾಶ ದೊರೆಯುತ್ತದೆ. ಆದರೆ ಪದೋನ್ನತಿ(Upgradation)ಮೂಲಕ ‘ಬಿ’ವೃಂದದ ಪ್ರಾಂಶುಪಾಲರು ‘ಎ’ವೃಂದಕ್ಕೆ ಮುಂಬಡ್ತಿ ಪ್ರಯತ್ನಿಸುತ್ತಿರುವುದು ಶಿಕ್ಷಕರಿಗೆ ದ್ರೋಹ ವೇಸಗಿದಂತಾಗುತ್ತದೆ. ಪಡೆಯಲು ತೆರೆಮರೆಯಲ್ಲಿ 12 ಉನ್ನತೀಕರಿಸಿದ ಶಾಲೆಯಲ್ಲಿಯ ‘ಎ’ವೃಂದದ ಪ್ರಾಂಶುಪಾಲರ ಹುದ್ದೆಗಳಿಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ & ‘ಬಿ’ ವೃಂದ ಪ್ರಾಂಶುಪಾಲರಿಗೆ ‘ಎ’ವೃಂದದ ಪ್ರಾಂಶುಪಾಲರ ಹುದ್ದೆಗೆ ಮುಂಬಡ್ತಿಗೆ ಅವಕಾಶ ಮಾಡಿಕೊಡಬೇಕು. ಆದರೆ ಪದೋನ್ನತಿ ಮೂಲಕ ಮುಂಬಡ್ತಿ ನೀಡಿದರೆ ಇಲಾಖೆಯು ಶಿಕ್ಷಕರಿಗೆ ಮುಂಬಡ್ತಿಯಲ್ಲಿ ಅನ್ಯಾಯ ಮಾಡಿದಂತಾಗುತ್ತದೆ.
1) ಸಿ&ಆರ್ ನಿಯಮಗಳು ಇಲ್ಲದೆ ಯಾವುದೇ ವೃಂದಕ್ಕೆ ಮುಂಬಡ್ತಿಗೆ ಅವಕಾಶ ನೀಡಬಾರದು. ಹಾಗೇ ನೀಡುವುದಾದರೆ ಶಿಕ್ಷಕರ ವೃಂದಕ್ಕೂ ಕಾರ್ಯಕಾರಿ ಆದೇಶದ ಮೂಲಕ ಜೊತೆಯಲ್ಲಿಯೇ ಮುಂಬಡಿಗೆ ಅವಕಾಶ ನೀಡಬೇಕು.
2) 2018ರ ವೇತನ ಆಯೋಗದ ಒಂದು ವೇತನ (ಸ್ಟೇಪ್ ಅಪ್), ತಾರತಮ್ಯವನ್ನು ಕೂಡಲೇ ನಿವಾರಿಸಬೇಕು.
3) – ಎಲ್ಲ ಶಿಕ್ಷಕರಿಗೆ ಅನುಕೂಲವಾಗುವಂತೆ ಅಂತಿಮ ಪಟ್ಟಿ(ಗ್ರೇಡಿಯೇಷನ್ ಲಿಸ್ಟ್) ಬಿಡುಗಡೆ ಮಾಡಬೇಕು. ಸಂಯೋಜಿತ ಪದಕ್ರಮ
4) ನವೋದಯ ಮಾದರಿ ಶಾಲೆಯ ಸ್ನಾತಕೋತರ ಪದವೀಧರ ಶಿಕ್ಷಕರಿಗೆ ‘ಬಿ’ ವೃಂದವೆಂದು ಪರಿಗಣಿಸಿ ಉಪನ್ಯಾಸಕರ ವೇತನ ನೀಡಬೇಕು.
5) ದೈಹಿಕ ಶಿಕ್ಷಕರಿಗೆ ಉನ್ನತಿಕರಿಸಿದ ಶಾಲೆಗಳಲ್ಲಿ ಉಪನ್ಯಾಸಕರ ಹುದ್ದೆಗಳನ್ನು ಸೃಜಿಸಿ ಮುಂಬಡ್ತಿಗೆ ಅವಕಾಶ ನೀಡಬೇಕು.
6) ಆರ್ಟ್ & ಕ್ರಾಫ್ಟ್ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ನೀಡುವ ವೇತನಕ್ಕೆ ಸಮಾನವಾದ ವೇತನ ನೀಡಬೇಕು.
7) MOD ರದ್ದುಪಡಿಸಬೇಕು.
8) ಉನ್ನತೀಕರಿಸಿದ ಶಾಲೆಯ ಹೆಚ್ಚುವರಿ ಕಾರ್ಯಭಾರವನ್ನು ತೆರವುಗೊಳಿಸಬೇಕು.
9) ಇಲಾಖೆಯ ಎಲ್ಲಾ ವೃಂದದ ನೌಕರರಿಗೂ ಅನುಕೂಲವಾಗುವ ರೀತಿ ನೌಕರರ ಕಲ್ಯಾಣ ನಿಧಿಯನ್ನು ಸ್ಥಾಪಿಸಬೇಕು.
ಸರ್ಕಾರವು ನಮ್ಮ ಸಮಸ್ಯೆಗಳನ್ನು ಕಾಲಮಿತಿ ಒಳಗೆ ಪರಿಹರಿಸಿಬೇಕು ಎಂದು ಶಿಕ್ಷಕರೆಲ್ಲ ಸರ್ಕಾರವನ್ನು ಒತ್ತಾಯಿಸಿ ದಿನಾಂಕ:20-10-2023ರಿಂದ ‘ಬೆಂಗಳೂರು ಚಲೋ’ ಅನಿರ್ದಿಷ್ಟಾವಧಿ ಧರಣಿಯನ್ನು ಪೀಡಂ ಪಾರ್ಕ್ ಬೆಂಗಳೂರುನಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ(ರಿ) ಮತ್ತು ಉಪನ್ಯಾಸಕರ ಸಂಘ(ರಿ) ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ರಂಗಪ್ಪ. ಸಿ- ಅಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು
City Today News 9341997936
