ಕರ್ನಾಟಕದಲ್ಲಿ ಜಾತಿ ಗಣತಿಯನ್ನು ಹೆಚ್ಚು ರಾಜಕೀಯಗೊಳಿಸಲಾಗಿದೆ

ಬಿಹಾರದ ನಿತೀಶ್ ಕುಮಾರ್ ಅತೀ ಕಡಿಮೆ ಅವಧಿಯಲ್ಲಿ ಜಾತಿ ಗಣತಿಯ ದತ್ತಾಂಶವನ್ನು ಪ್ರಕಟಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಜಾತಿ ಗಣತಿಯನ್ನು ಹೆಚ್ಚು ರಾಜಕೀಯಗೊಳಿಸಲಾಗಿದೆ. ಹಾಗಾಗಿ ಜಾತಿ ಗಣತಿಯ ಕುರಿತಂತೆ ನಮ್ಮ ಪಕ್ಷದ ಅಭಿಪ್ರಾಯವನ್ನು ನಾವು ಪ್ರಕಟಿಸುತ್ತಿದ್ದೇವೆ.

1.ಕರ್ನಾಟಕದಲ್ಲಿ ಜಾತಿ ಗಣತಿಯಾದ ದಿನಾಂಕಕ್ಕೂ ಈಗಿನ ದಿನಾಂಕಕ್ಕೂ 7-8 ವರ್ಷಗಳ ಅಂತರವಿದ್ದು, ಈ 7-8 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

2. ಹಿಂದುಳಿದ ವರ್ಗದ ಮೀಸಲಾತಿಯಲ್ಲಿ 5 ಪ್ರವರ್ಗಗಳಿವೆ: Cat-I, Cat-2A, Cat-2B, Cat-ZA, Cat-3B. ಆದರೆ ಎಚ್. ಕಾಂತರಾಜು ರವರ ಹಿಂದುಳಿದ ವರ್ಗದ ಆಯೋಗದ ರಚನೆಯಲ್ಲಿ ಅಧ್ಯಕ್ಷರು ಸೇರಿದಂತೆ ಐವರು ಸದಸ್ಯರು ಕೇವಲ ಎರಡು ಪ್ರವರ್ಗಗಳಿಗೆ ಮಾತ್ರ ಸೀಮಿತವಾಗಿದೆ. ಇನ್ನೂ 3 ಪ್ರವರ್ಗಗಳಿಗೆ ಆಯೋಗದಲ್ಲಿ ಪ್ರಾತಿನಿದ್ಯವನ್ನು ನೀಡಿರುವುದಿಲ್ಲ. ಎಚ್ ಕಾಂತರಾಜುರವರ ಹಿಂದುಳಿದ ವರ್ಗದ ಆಯೋಗದ ರಚನೆ ಸ್ಟೇಚ್ಛಾಚಾರದಿಂದ ಮತ್ತು ಪಕ್ಷ ಪಾತದಿಂದ ಕೂಡಿದೆ. ಕೇವಲ ಎರಡು ಪ್ರವರ್ಗಗಳಿಗೆ ಸೇರಿದವರು ಇಡೀ ಕರ್ನಾಟಕದ ಜಾತಿ ಗಣತಿಯನ್ನು ಮಾಡಿದ್ದಾರೆ.

3. ಹಿಂದುಳಿದ ವರ್ಗಗಳ ಆಯೋಗ, ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಾಗಿರಬೇಕೆ ವಿನಃ ಇಡೀ ಕರ್ನಾಟಕದ ಜಾತಿ ಗಣತಿಯಂತಹ ಸೂಕ್ಷ್ಮವಾದ ಮತ್ತು ಪ್ರಮುಖವಾದ ವಿಷಯಕ್ಕೆ ಹೋಗಬಾರದಿತ್ತು.

4. ಸರ್ಕಾರ ಎಲ್ಲಾ ಜಾತಿಗಳನ್ನೊಳಗೊಂಡ ಸಮನ್ವಯ ಸಮಿತಿಯ ಮೂಲಕ ಜಾತಿ ಗಣತಿಯನ್ನು ಮಾಡಿಸಬೇಕಾಗಿತ್ತು.

5. ಎಚ್ ಕಾಂತರಾಜುರವರ ಆಯೋಗ ಜಾತಿ ಗಣತಿಯ ಮಾಹಿತಿಯನ್ನು ಮೌಖಿಕವಾಗಿ ಕಲೆಹಾಕಿದೆ ಹಾಗು ಆಧಾರರಹಿತ, ದಾಖಲೆರಹಿತ ಮತ್ತು ನಿಖರತೆಯಿಲ್ಲದ ಜಾತಿ ಗಣತಿಯಾಗಿದೆ.

6.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಕ್ಕೂ ಮೊದಲು ಜಾತಿ ಗಣತಿಯ ಜಪ ಮಾಡುತ್ತಿದ್ದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರವೂ ಜಾತಿ ಗಣತಿಯ ಜಪ ಮಾಡುತ್ತಿದ್ದರು ಮತ್ತು ಜಾತಿ ಗಣತಿಗೆ ಅಧಿಸೂಚನೆಯನ್ನು ಹೊರಡಿಸಿದರು.

ಸಿದ್ದರಾಮಯ್ಯನವರು ಜಾತಿ ಗಣತಿಯ ಅಂಕಿ ಅಂಶಗಳು ಗೊತ್ತಾದ ತಕ್ಷಣ ಜಾತಿ ಗಣತಿಯ ಮಾಹಿತಿಯನ್ನು ಉಗ್ರಾಣದಲ್ಲಿ ಬಿಸಾಕುವುದರ ಮೂಲಕ ತಮ್ಮ ರಹಸ್ಯ ಕಾರ್ಯಸೂಚಿಯನ್ನು (Hidden Agenda) ಕಾರ್ಯಗತಗೊಳಿಸಿದರು.

ಸಿದ್ದರಾಮಯ್ಯನವರು 2018 ರಿಂದ 2023 ರವರೆಗೆ, ಜಾತಿ ಗಣತಿಯ ಅನುಷ್ಠಾನಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸುವುದಿಲ್ಲ.

ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಮತ್ತೆ ಜಾತಿ ಗಣತಿಯ ಜಪ ಶುರು ಮಾಡಿದ್ದಾರೆ.

ಒಟ್ಟಾರೆ ದ್ವಂದ್ವ ನಿಲುವುಗಳು ಮತ್ತು ರಹಸ್ಯ ಕಾರ್ಯಸೂಚಿಯನ್ನು (Hidden Agenda) ಹೊಂದಿರುವ ಸಿದ್ದರಾಮಯ್ಯನವರು ಜಾತಿ ಗಣತಿಯ ಅನುಷ್ಠಾನಕ್ಕೆ ತೊಡರುಗಾಲಾಗಿದ್ದಾರೆ ಮತ್ತು ಜಾತಿ ಗಣತಿಯ ಪ್ರಥಮ ವಿರೋಧಿಯಾಗಿದ್ದಾರೆ.

• ಸಿದ್ದರಾಮಯ್ಯನವರು ಜಾತಿ ಗಣತಿಯ ವಿಷಯವನ್ನು ಜೀವಂತವಾಗಿರಿಸಿ ತಮ್ಮ ರಾಜಕೀಯ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುತ್ತಿದ್ದಾರೆ.

7. ಎಚ್ ಕಾಂತರಾಜು ರವರು ಹೇಳಿ ಕೇಳಿ ಸಿದ್ದರಾಮಯ್ಯನವರ ಕಟ್ಟಾ ಅನುಯಾಯಿ ಮತ್ತು ಖಾಸಗಿ ವಕೀಲರು, ಎಚ್ ಕಾಂತರಾಜುರವರು ಸಿದ್ದರಾಮಯ್ಯನವರ ಅಣತಿಯಂತೆ 2018ರ ವಿಧಾನಸಭೆ ಚುನಾವಣೆಗಳು ನಡೆಯುವವರೆಗೆ ಜಾತಿ ಗಣತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಿಲ್ಲ. ಎಚ್ ಕಾಂತರಾಜುರವರಿಗೆ ಸಿದ್ದರಾಮಯ್ಯನವರ ಅಣತಿಯೇ ಮುಖ್ಯವಾಗುತ್ತದೆಯೇ ವಿನಃ ರಾಜ್ಯದ ಹಿತ ಮುಖ್ಯವಾಗುವುದಿಲ್ಲ.

8. 2018ಕ್ಕೆ ಮೊದಲೇ ಜಾತಿ ಗಣತಿಯ ದತ್ತಾಂಶ ಸೋರಿಕೆಯಾಗಿ ಮಾಧ್ಯಮಗಳಲ್ಲಿ ರಾರಾಜಿಸಿತು. ಜಾತಿ ಗಣತಿಯ ದತ್ತಾಂಶಗಳಲ್ಲಿ MLA ಕ್ಷೇತ್ರವಾರು ವಿವಿಧ ಜಾತಿಗಳ ಅಂಕಿ ಅಂಶಗಳಿದ್ದವು. ಈ ಅಂಕಿ ಅಂಶಗಳನ್ನು 2018ರ ಚುನಾವಣೆಗಳಿಂದ ಹಿಡಿದು ಇತ್ತೀಚಿನವರೆಗೆ ಚುನಾವಣೆಗಳಲ್ಲಿ ರಾಜಕೀಯ ಲೆಕ್ಕಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.

9. ಜಾತಿ ಗಣತಿಯ ದತ್ತಾಂಶಗಳು ಎಚ್ ಕಾಂತರಾಜುರವರ ಆಯೋಗದಿಂದಲೇ ಸೋರಿಕೆಯಾಗಿವೆ. ನನ್ನ ಬಳಿಯೂ 18 MLA ಕ್ಷೇತ್ರಗಳ ಜಾತಿಗಣತಿಯ ದತ್ತಾಂಶ ಇದೆ. ಅದನ್ನು ಈಗ ನಾನು ಮಾಧ್ಯಮದ ಬಂಧುಗಳ ಮೂಲಕ ಸಾರ್ವಜನಿಕರಿಗೆ ಅರ್ಪಿಸುತ್ತಿದ್ದೇನೆ.

1.ವಿಜಯನಗರ 2.ಗೋವಿಂದರಾಜನಗರ 3.ಬಸವನಗುಡಿ 4.ಬೊಮ್ಮನಹಳ್ಳಿ 5.ಬಿಟಿಎಂ ಲೇಔಟ್ 6. ಪದ್ಮನಾಭನಗರ 7.ಜಯನಗರ 8.ಚಿಕ್ಕಪೇಟೆ 9.ಚಿಂತಾಮಣಿ 10.ಶಿಡ್ಲಘಟ್ಟ 11.ಬಾಗೇಪಲ್ಲಿ 12. ಗೌರಿಬಿದನೂರು 13. ಚಿಕ್ಕಬಳ್ಳಾಪುರ 14. ದೇವನಹಳ್ಳಿ 15. ಹೊಸಕೋಟೆ 16, ದೊಡ್ಡಬಳ್ಳಾಪುರ 17. ನೆಲಮಂಗಲ 18. ಯಲಹಂಕ

ಒಟ್ಟಾರೆ ಜಾತಿ ಗಣತಿಯ ದತ್ತಾಂಶಗಳು ದುರುಪಯೋಗವಾಗಿವೆ. ಜಾತಿ ಗಣತಿ ಮಲಿನವಾಗಿದೆ. ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ.

ಮೇಲೆ ಹೇಳಿರುವ ಕಾರಣಗಳಿಂದ ಕರ್ನಾಟಕ ಉದಾರವಾದಿಗಳ ಪಕ್ಷವು ಎಚ್ ಕಾಂತರಾಜುರವರ ಜಾತಿ ಗಣತಿಯನ್ನು ಪ್ರಬಲವಾಗಿ ವಿರೋಧಿಸುತ್ತದೆ.

ಎಲ್ಲಾ ಜಾತಿಗಳನ್ನೊಳಗೊಂಡ ಹೊಸ ಆಯೋಗದ ಮೂಲಕ ದಾಖಲೆ ಸಹಿತ ಮತ್ತು ಆಧಾರ ಸಹಿತವಾದ ಜಾತಿ ಗಣತಿಯನ್ನು ಕರ್ನಾಟಕ ಉದಾರವಾದಿಗಳ ಪಕ್ಷವು ಬಯಸುತ್ತದೆ ಎಂದು ಡಾ. ಎನ್ ಲಕ್ಷಣ ಸ್ವಾಮಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.

City Today News 9341997935

Leave a comment

This site uses Akismet to reduce spam. Learn how your comment data is processed.