
ಪರಂಪರಾ ಕಲ್ಚರಲ್ ಫೌಂಡೇಶನ್, 30.10.2023 ರಂದು ಸೋಮವಾರ ಅಪರಾಹ್ನ 2 ರಿಂದ 3.30 ರವರೆಗೆ ಬಿಟಿಎಂ ಬಡಾವಣೆಯ ಶ್ರೀ ವಿದ್ಯಾಜ್ಯೋತಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗಾಗಿ ಕತೆ ಹೇಳುವೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ‘ಕತೆ ಹೇಳುವೆ’ ಸರಣಿಯ 13ನೇ ಕಾರ್ಯಕ್ರಮವಾಗಿದೆ.

ಶ್ರೀ ವಿದ್ಯಾಜ್ಯೋತಿ ಶಾಲೆಯ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡಪರ ಚಿಂತಕಿ, ಉಪನ್ಯಾಸಕಿ ಸಿ.ಅರ್.ಕಮಲಾಕ್ಷಿ ಮಕ್ಕಳಿಗೆ ಕತೆ ಹೇಳಲಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರಾದ ಜೆ.ಎಚ್.ವರುಣದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಉದ್ಯಮಿ ಡಾ.ನಂದಿ ಸುಬ್ರಮಣಿ, ಆಧ್ಯಾತ್ಮ ಚಿಂತಕ ಬಿ.ಕೆ.ಪಾರ್ಥಸಾರಥಿ ಮತ್ತು ಹಿರಿಯ ಪತ್ರಕರ್ತ ಡಿ.ಶರತ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪರಂಪರಾ ಅಧ್ಯಕ್ಷರಾದ ಜಿ.ಪಿ.ರಾಮಣ್ಣ ಕಾರ್ಯಕ್ರಮ ದಲ್ಲಿ ಉಪಸ್ಥಿತರಿರುವರು ಎಂದು ಪರಂಪರಾ ಕಾರ್ಯದರ್ಶಿ ಪಾರ್ವತಿ ಅಂಗಡಿ ತಿಳಿಸಿದ್ದಾರೆ.
City Today News 9341997936
