ಡಿಎಸ್ ಮ್ಯಾಕ್ಸ್   ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಣೆ

ಡಿಎಸ್ ಮ್ಯಾಕ್ಸ್   ಆವರಣದಲ್ಲಿ  ಕನ್ನಡ ರಾಜ್ಯೋತ್ಸವ ಆಚರಣೆ

ಬೆಂಗಳೂರು, ನ, 1; ವಸತಿ ನಿರ್ಮಾಣ ಸಂಸ್ಥೆ ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್ ಆವರಣದಲ್ಲಿ 68 ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಚಿತ್ರನಟ ದೊಡ್ಡಣ್ಣ ಧ್ವಜಾರೋಹಣ ನೆರವೇರಿಸಿದರು. ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್  ಸಂಸ್ಥಾಪಕರಾದ ಕೆ.ವಿ. ಸತೀಸ್, ನಿರ್ದೇಶಕರಾದ ಎಸ್.ಪಿ. ದಯಾನಂದ್‌, ಹಿರಿಯ ವಕೀಲರಾದ ಎಂ.ಎ ರೇವಣ ಸಿದ್ದಯ್ಯ  ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ  330 ಅಡಿ ಉದ್ದ, 10 ಅಡಿ ಅಗಲದ ಕನ್ನಡ ಧ್ವಜದ ಮೆರವಣಿಗೆಯು ಬೆಂಗಳೂರು ಹೊರವರ್ತುಲ ರಸ್ತೆಯಲ್ಲಿ ನಡೆಯಿತು.

ಎಸ್. ಪಿ. ದಯಾನಂದ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಅನ್ಯ ಭಾಷಿಕರು ಕನ್ನಡ ಮಾತನಾಡಬೇಕು. ಕನ್ನಡಿಗರು ಪ್ರೀತಿಯಿಂದ ಕನ್ನಡ ಕಲಿಸಲು ಮುಂದಾಗಬೇಕು. ಕನ್ನಡಿಗರಾಗಿರುವುದಕ್ಕೆ ಹೆಮ್ಮೆಪಡೋಣ. ಕನ್ನಡದ ಬಗ್ಗೆ ಕೀಳರಿಮೆ ಬೇಡ. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ, ಅನ್ನದ ಭಾಷೆ ಎಂದು ಅವರು ಹೇಳಿದರು.

City Today News
9341997936

Leave a comment

This site uses Akismet to reduce spam. Learn how your comment data is processed.