
“ಪುಷ್ಯಾರ್ಕ ಯೋಗ” ರಾಯರ ಮಠದಲ್ಲಿ ವಿಶೇಷ ಪಾರಾಯಣ ಶ್ರೀಹರಿ ಭಜನೆ”
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ವಿಶೇಷವಾಗಿ ಶ್ರೀ ಜಯತೀರ್ಥರ ಸೇವಾ ಸಮಿತಿ ಸಂಘದಿಂದ ಶ್ರೀ ಜಯತೀರ್ಥರ ಅಷ್ಟೋತ್ತರ ಪಾರಾಯಣ ಹಾಗೂ ಶ್ರೀ ರಾಘವೇಂದ್ರ ಅಷ್ಟೋತ್ತರ ಪಾರಾಯಣದೊಂದಿಗೆ ವಿಶೇಷವಾಗಿ ನೆರವೇರಿತು, ಹಾಗೂ ಪರಿಮಳ ಗೆಳೆಯರ ಬಳಗ ಮತ್ತು ಶ್ರೀ ಹರಿ ವಾಯು ಭಜನಾ ಮಂಡಳಿಯಿಂದ ಶ್ರೀ ಹರಿ ಭಜನೆ ಉತ್ಸವ ಹಾಗೂ ಅನ್ನ ಸಂತರ್ಪಣ ಮೊದಲಾದ ಇತ್ಯಾದಿ ಕಾರ್ಯಕ್ರಮಗಳು ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ108 ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥ ಶ್ರೀಪಾದರು ಶ್ರೀ ಜಯ ರಾಘವೇಂದ್ರಾಯ ನಮಃ ಎಂಬ ಕೋಟಿ ಲೇಖನ ಯಜ್ಞವನ್ನು ಭಕ್ತರು ಬರೆಯುವ ಮುಖಾಂತರ ಪ್ರಾರಂಭಿಸಿದರು, ಈ ಸಂದರ್ಭದಲ್ಲಿ ಪರಿಮಳ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಜಯಸಿಂಹ ರವರು ಶ್ರೀ ಹರಿವಾಯು ಭಜನಾ ಮಂಡಳಿಯ ಶ್ರೀ ಕೃಷ್ಣಮೂರ್ತಿಯವರು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವಂಶಿಕರು ಶ್ರೀಮಠದ ಶಿಷ್ಯರು ಭಕ್ತರು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು
City Today News 9341997936
