ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಕೆ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿನ ವಿವರ:

1. ರಾಜ್ಯದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ 2ವರ್ಷಗಳಿಂದ ಖಾಲಿ ಇದ್ದು ಅವರುಗಳು ಕೇಂದ್ರದ ಕರ್ತವ್ಯಗಳನ್ನು ಮಾಡಲು ತುಂಬಾ ತೊಂದರೆಯಾಗುತ್ತಿದೆ ಆದ ಕಾರಣ ತಾವುಗಳು ತಕ್ಷಣವೇ ಖಾಲಿ ಹುದ್ದೆಯನ್ನು ಭರ್ತಿಮಾಡಬೇಕಾಗಿ ಕೇಳಿಕೊಳ್ಳುತ್ತೇವೆ.

2. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆ & ಸಹಾಯಕಿಯರಿಗೆ ಕನಿಷ್ಠ ವೇತನ ಕೊಡಬೇಕಾಗಿ ಕೇಳಿಕೊಳ್ಳುತ್ತೇವೆ ಮತ್ತು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ 6ನೇ ವೇತನವನ್ನು ಜಾರಿಮಾಡಿಸಿಕೊಡಬೇಕು.

3. ಅಂಗನವಾಡಿ ಕಾರ್ಯಕರ್ತೆಯರ & ಸಹಾಕಿಯರ ಮುಂಬಡ್ತಿಯ ಸ್ಥಾನ ಪಲ್ಲಟ (ವರ್ಗಾವಣೆ) ಇವುಗಳಿಗೆ ಸರ್ಕಾರದ ಮಾನದಂಡ 3ಕಿ.ಮಿ. ವ್ಯಾಪ್ತಿ ಇದ್ದು ಆದರೆ ತಾಲ್ಲೂಕ್‌ಗಳಲ್ಲಿ ಇವುಗಳ ಸಮಸ್ಯೆಯನ್ನು ಹೇಳುತ್ತಾರೆ ಆದಕಾರಣ ಯೋಜನೆಯ ವ್ಯಾಪ್ತಿ ಒಳಗೆ 3 ಕಿ.ಮೀ. ಎಂದು ಆದೇಶವನ್ನು ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.

4. ಸರ್ಕಾರ ವಿತರಿಸಿರುವ ಮೊಬೈಲ್‌ಗಳ ಕರೆನ್ಸಿ ಮುಗಿದಿದ್ದು ತಾಲ್ಲೂಕ್‌ಗಳಲ್ಲಿ ಸ್ವಂತ ಕರೆನ್ಸಿಯಲ್ಲಿ ಕರ್ತವ್ಯ ನಿರ್ವಹಿಸಲು ಒತ್ತಾಯಸುತ್ತಾರೆ ಇದು ನಮಗೆ ಸಾದ್ಯವಾಗುವುದಿಲ್ಲ

5. ರಾಜ್ಯದಲ್ಲಿ ನಿವೃತ್ತಿ ಆದ ಕಾರ್ಯಕರ್ತೆ & ಸಹಾಯಕಿಯರಿಗೆ ಎನ್.ಪಿ.ಎಸ್. ಹಣವನ್ನು 2-3 ತಿಂಗಳಲ್ಲಿ ಅವರ ಖಾತೆಗೆ ಹಣವನ್ನು ಕೊಡಿಸುವ ವ್ಯವಸ್ಥೆ ಮಾಡಿಕೊಡಬೇಕು ನಿವೃತ್ತಿ ಆದವರಿಗೆ ಹಣಬರುವುದು ತುಂಬ ತಡವಾಗುತ್ತಿದೆ ಈ ಅವಧಿಯಲ್ಲಿ ಕೆಲವು ಕಾರ್ಯಕರ್ತೆಯರು ಮತ್ತು ಸಹಯಾಕಿಯರು ಕಾಯಿಲೆಗಳಿಂದ ಮರಣ ಹೊಂದಿದ್ದಾರೆ. ಅವರುಗಳಿಗೆ ಹಣವಿಲ್ಲದೇ ತುಂಬ ತೊಂದರೆ ಆಗುತ್ತದೆ.

6. ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು ಅಲ್ಲಿಯವರೆಗೆ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಭರಿಸಬೇಕು.

7. ರಾಜ್ಯದಲ್ಲಿ ಬಿಸಿಊಟ ತಯಾರಿಸಲು ಕೊಡುವ ಗ್ಯಾಸ್‌ ಸಿಲಿಂಡರನ್ನು ಏಕರೂಪದಲ್ಲಿ ಇಲಾಖೆಯವರೇ ತುಂಬಿಸಿಕೊಡಬೇಕು.

8. ರಾಜ್ಯದ ಕೆಲವು ಜಿಲ್ಲೆ ತಾಲ್ಲೂಕ್‌ಗಳಲ್ಲಿ 10 ತಿಂಗಳಿಂದ ಬಾಡಿಗೆ ಹಣ, ಮೊಟ್ಟೆ ಹಣ ವಿದ್ಯುತ್ ಬಿಲ್ ಸಿಲಿಂಡರ್ ತುಂಬಿಸಲು ಹಣ ಸಾದಿಲ್‌ವಾರು 2 ವರ್ಷಗಳಿಂದ ಕೊಟ್ಟಿರುವುದಿಲ್ಲ. ಇದರಿಂದ ಕಾರ್ಯಕರ್ತೆಯರಿಗೆ ಕರ್ತವ್ಯ ನಿರ್ವಹಿಸಲು ತುಂಬಾ ತೊಂದರೆ ಆಗುತ್ತದೆ ಆದ ಕಾರಣ ತಾವುಗಳು ಇದನ್ನು ಸರಿಪಡಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.

9. ರಾಜ್ಯದ ಕೆಲವು ತಾಲ್ಲುಕಿನಲ್ಲಿ ಅಂಗನವಾಡಿ ಕೇಂದ್ರಗಳ ಸ್ವಚ್ಛತೆಗೆ ಕೊಡುವ ಸಾದಿಲ್‌ವಾರು 83 ರೂ.ಗಳನ್ನು ಆದೇಶ ಇಲ್ಲದ ಕಾರಣ ಕಡಿತಗೊಳಿಸಿದ್ದಾರೆ ಇದನ್ನು ಸರಿಪಡಿಸಿಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಮೇಲ್ಖಂಡ ವಿಷಯಗಳನ್ನೊಲಗೊಂಡ ಮನವಿ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಸಂಘದ ವತಿಯಿಂದ ಬಿ.ಪ್ರೇಮ್ -ರಾಜ್ಯಾಧ್ಯಕ್ಷರು, ಜಯಲಕ್ಷ್ಮಿ ಬಿ.ಆರ್.-ಗೌರವ ಅಧ್ಯಕ್ಷರು, ಉಮಾಮಣಿ-ರಾಜ್ಯ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಸ್ವತಂತ್ರ ಸಂಘಟನೆ, ವಿಶಾಲಾಕ್ಷಿ-ರಾಜ್ಯ ಖಜಾಂಚಿ, ನಿರ್ಮಲ ಬಿ.ಎಸ್.-ರಾಜ್ಯ ಉಪಾಧ್ಯಕ್ಷರು, ಶಾಂತ-ರಾಜ್ಯ ಸಹ ಕಾರ್ಯದರ್ಶಿ ಮತ್ತು ಭಾರತಿ ಎನ್.ಪಿ.-ರಾಜ್ಯ ಸಲಹೆಗಾರರು ಗಳ ಉಪಸ್ತಿತಿಯಲ್ಲಿ ನೀಡಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.