
ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘವು ರಾಜ್ಯ ಮಟ್ಟದಲ್ಲಿ 2022-23 ನೇ ಸಾಲಿನಲ್ಲಿ SSLC ಮತ್ತು ದ್ವಿತೀಯ PUC ವಿಭಾಗದಲ್ಲಿ ತೇರ್ಗಡೆಯಾದ ಗಂಗಾಮತ, ಕೋಲಿ, ಕಬ್ಬಲಿಗ, ಸುಣಗಾರ, ಅಂಬಿಗ, ಮೊಗವೀರ, ಹಾಗೂ ಪರ್ಯಾಯ ಪಂಗಡಗಳಿಗೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು MBBS/BE/BSc.ag/KAS.IAS ಆಕಾಂಕ್ಷಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಕಾರ್ಯಕ್ರಮವನ್ನು ದಿನಾಂಕ:26.11.2023 ಭಾನುವಾರ 11.00 ಗಂಟೆಗೆ ನಡೆಯಲಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಉದ್ಘಾಟಿಸುವ ನಿರೀಕ್ಷೆಯಿದ್ದು, ಮಾನ್ಯ ಮೀನುಗಾರಿಕೆ ಸಚಿವರಾದ ಮಂಕಾಳ ಎಸ್. ವೈದ್ಯ ಮತ್ತು ಶಾಸಕರುಗಳು ಭಾಗವಹಿಸಲಿದ್ದಾರೆ. ಇದಲ್ಲದೇ ಸಂಘದ ಸರ್ವಸದಸ್ಯರ ವಿಶೇಷ ಮಹಾಸಭೆಯನ್ನು ಮಧ್ಯಾಹ್ನ 3.00 ಗಂಟೆಗೆ ಬಾಗಲಕೋಟೆ ನವನಗರದಲ್ಲಿರುವ ಕಲಾ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಎಂ. ಶ್ರೀನಿವಾಸ್-ಅಧ್ಯಕ್ಷರು, ಉದಯ ಅಂಬಿಗೇರ-ಉಪಾಧ್ಯಕ್ಶರು ಮತ್ತು ಎ. ಹಾಲೇಶಪ್ಪ-ಪ್ರಧಾನ ಕಾರ್ಯಧರ್ಶಿಗಳು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕ ಘೋಷ್ಠಿಯಲ್ಲಿ ತಿಳಿಸಿದರು.
City Today News 9341997936
