10 ಕೆ.ಜಿ. ಅಕ್ಕಿ ಪ್ರತಿ ಚೀಟಿದಾರರಿಗೆ ನೀಡಬೇಕೆಂದು ಮನವಿ

ಕರ್ನಾಟಕ ರಾಜ್ಯದಲ್ಲಿ ಪಡಿತರ ವಿತರಕರ ಸಮಸ್ಯೆಗಳ ಬಗ್ಗೆ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದು ಎನೆಂದರೆ, ರಾಜ್ಯದಲ್ಲಿ ತಮ್ಮ ಸರ್ಕಾರ ಬಂದ ಮೇಲೆ, 10 ಕೆ.ಜಿ. ಅಕ್ಕಿ ಕೊಡುವುದಾಗಿ ಭರವಸೆ ನೀಡಿರುವುದು ಸರಿ ಅಷ್ಟೇ, ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ತಾವು ಅಧಿಕಾರಕ್ಕೆ ಬಂದ ನಂತರ, ಜೂನ್ ತಿಂಗಳಲ್ಲಿ ಆಹಾರ ಸಚಿವರಾದ ಮಾನ್ಯ ಶ್ರೀ K.H. ಮುನಿಯಪ್ಪ ಅವರನ್ನು ಭೇಟಿ ಮಾಡಿ, ನಮ್ಮ ಸಮಸ್ಯೆಗಳ ಬಗ್ಗೆ, ಸವಿವರವಾಗಿ ತಿಳಿಸಲಾಗಿತ್ತು. ಅದರಲ್ಲಿ ಬಹಳ ಮುಖ್ಯವಾಗಿ ಪ್ರತಿ ಚೀಟಿದಾರರಿಗೆ 10 ಕೆ.ಜಿ. ಅಕ್ಕಿ ನೀಡಬೇಕೆಂದು ಮನವಿ ಮಾಡಿದ್ದೆವು ಮತ್ತು ನಾವು ಕಳೆದ ನಾಲ್ಕು ವರ್ಷಗಳಿಂದ ಈ ಕೆ.ವೈ.ಸಿ. ಮಾಡಿರುವ ಹಣವನ್ನು ಬಿಡುಗಡೆ ಮಾಡಲು ಕೋರಿರುತ್ತೇವೆ. ಆದರೆ, ಐದು ತಿಂಗಳಾದರೂ ನಮ್ಮ ಸಮಸ್ಯೆಗಳು ಯಾವುದೇ ರೀತಿ ಪರಿಹಾರ ಆಗಿರುವುದಿಲ್ಲ, ಇಲಾಖೆ ಅಧೀನ ಕಾರ್ಯದರ್ಶಿಯವರು ಆಗಸ್ಟ್ 18 ರಂದು ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದ ನೀಡುವ ಆಹಾರ ಧಾನ್ಯಗಳ ಬಗ್ಗೆ ರಸೀದಿ ನೀಡಲು ಎಲ್ಲಾ ನ್ಯಾಯ ಬೆಲೆ ಅಂಗಡಿ ವಿತರಕರು ಪ್ರಿಂಟರನ್ನು ಖರೀದಿ ಮಾಡಬೇಕೆಂದು ಆದೇಶ ಮಾಡಿರುತ್ತಾರೆ. ಆದರೆ ನಾವು ಖರೀದಿ ಮಾಡಲು ಬಹಳ ಕಷ್ಟಕರವಾಗಿದೆ.

ಆದ್ದರಿಂದ, ಸರ್ಕಾರದಿಂದ ಪ್ರಿಂಟರನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಅದರ ಜೊತೆಗೆ ಸರ್ಕಾರದಲ್ಲಿ ಕಳೆದ ಮಾಹೆಯಿಂದ ಗೋಣಿ ಚೀಲದ ಬದಲು ಪ್ಲಾಸ್ಟಿಕ್ ಚೀಲವನ್ನು ನೀಡುತ್ತಿದ್ದೀರ ಇದರಿಂದ ವಿತರಕರಿಗೆ ಇನ್ನಷ್ಟು ತೊಂದರೆಯಾಗಿದೆ ಒಂದು ಕಡೆ ಅಕ್ಕಿಯನ್ನು ಕಡಿಮೆ ಮಾಡಿ ನಮಗೆ ಲಾಭಾಂಶ ಕಡಿಮೆಯಾಗಿದೆ ಮತ್ತೊಂದು ಕಡೆ ಗೋಣಿ ಚೀಲದಿಂದ ನಮಗೆ ನಷ್ಟವಾಗುತ್ತಿದೆ, ಅದ್ದರಿಂದ ತಾವುಗಳು ನಮ್ಮ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ, ನಾವು ಮಾಡಿರುವ ಇ.ಕೆ.ವೈ.ಸಿ ಹಣವನ್ನು ನೀಡಬೇಕು, ನಮಗೆ ಬರಬೇಕಾದ ಕಮೀಶನ್ ಹಣ ಪ್ರತಿ ತಿಂಗಳು ಬರಬೇಕು. ಮತ್ತು ಪ್ಲಾಸ್ಟಿಕ್ ಚೀಲವನ್ನು ರದ್ದುಗೊಳಿಸಬೇಕು ಮತ್ತು ನಮಗೆ ಪ್ರತಿ ಕ್ವಿಂಟಾಲ್‌ಗೆ 250 ರೂಪಾಯಿ ಕಮೀಷನ್ ನೀಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.

ಬೇಡಿಕೆಗಳು

1. ಪ್ರತಿ ಕ್ವಿಂಟಾಲಿಗೆ 250 ರೂಪಾಯಿ ಕಮೀಶನ್ ನೀಡಬೇಕು.

2 ತಾಂಡವಾಡುತ್ತಿರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕು.

3. ಪಡಿತರ ವಿತರಕರಿಗೆ ಪ್ರತಿ ತಿಂಗಳು ಕಮೀಶನ್ ಬರುವಂತೆ ಆದೇಶ ಮಾಡಬೇಕು.

.4. 65 ವರ್ಷ ಮೇಲ್ಪಟ್ಟ ವಿತರಕರು ಮರಣ ಹೊಂದಿದರೆ, ಅವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಅಂಗಡಿ ಮಂಜೂರು ಮಾಡಿ ಪ್ರಾಧಿಕಾರ ನೀಡಬೇಕು.

5. 4 ವರ್ಷಗಳಿಂದ ಮಾಡಿರುವ ಇ.ಕೈ.ವೈ.ಸಿ ಹಣವನ್ನು ಅತಿ ಜರೂರಾಗಿ ಬಿಡುಗಡೆ ಮಾಡಬೇಕು.

6. ಪ್ಲಾಸ್ಟಿಕ್ ಚೀಲ ರದ್ದು ಮಾಡಿ ಗೋಣಿ ಚೀಲದಲ್ಲಿ ಅಕ್ಕಿಯನ್ನು ನೀಡಬೇಕು.

7. ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಮಾಡಿದ ರಶೀದಿ ನೀಡಲು ಸರ್ಕಾರದಿಂದ ಪ್ರಿಂಟರ್ ನೀಡಬೇಕು,

8. ಜಿ.ಎಸ್.ಸಿ. ಕಾರ್ಯವನ್ನು ಕರ್ನಾಟಕ ಒನ್, ಗ್ರಾಮ ಒನ್ ಗೆ ಸರ್ಕಾರ ಅಧಿಕಾರ ನೀಡಿದೆ, ಅದರ ಬದಲಾಗಿ ನ್ಯಾಯಬೆಲೆ ಅಂಗಡಿಗಳಿಗೆ ನೀಡಬೇಕು ಎಂದು ಸಂಘದ ವತಿಯಿಂದ ತಿಳಿಸಲಾಯಿತು.

ಡಿ. ಎಂ. ಹಾಲಸ್ಞಾಮಿ-ಗೌರವಾಧ್ಯಕ್ಷರು, ಕೃಷ್ಣ ಡಿ. ನಾಯ್ಕ-ಅಧ್ಯಕ್ಷರು, ಜೆ. ಬಿ. ಕುಮಾರ್-ಬೆಂಗಳೂರು ನಗರ ಅಧ್ಯಕ್ಷರು, ಡಿ. ಜಿ. ಶಿವಾನಂದಪ್ಪ-ಕೋಶಾಧ್ಯಕ್ಷರು, ಎಂ. ಕೆ. ರಾಮಚಂದ್ರ-ಪ್ರಧಾನ ಕಾರ್ಯದರ್ಶಿ, ರಾಮಯ್ಯ-ಸಂಘಟನಾ ಕಾರ್ಯಧರ್ಶಿ,ಮತ್ತು ಎಹ್. ಬಿ. ಬಸೆಟ್ಟಪ್ಪ-ನಿರ್ಧೇಶಕರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಉಪಸ್ತಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.