ಅಡುಗೆ ಮಾಡುವ ಪ್ರೆಜರ್ ಕುಕ್ಕರ್‌ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರು ಮಾಡಿ ದೇಶ-ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯ ಬಂಧನ.

ಸುಮಾರು 1 10 ಕೋಟಿ ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಗೆ ಬಳಸುತ್ತಿದ್ದ ರಾಸಾಯನಿಕ ಮತ್ತು ರಾಸಾಯನಿಕ ಆಮ್ಲ (ಕೆಮಿಕಲ್‌ಗಳು) ಮತ್ತು ಇತರೆ ಉಪಕರಣಗಳ ವಶ.

ಬೆಂಗಳೂರು ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಿದೇಶಿ ಮೂಲದ ವ್ಯಕ್ತಿ ನಿಷೇದಿತ ಮಾದಕ ವಸ್ತು/ಮನೋಪರಿಣಾಮಕ ವಸ್ತುವಾದ ಎಂ.ಡಿ.ಎಂ.ಎ ತಯಾರು ಮಾಡುತ್ತಿರುವುದಾಗಿ, ಈ ನಿಷೇಧಿತ ಮಾದಕ ವಸ್ತು/ಮನೋಪರಿಣಾಮಕ ವಸ್ತುಗಳನ್ನು ಬೆಂಗಳೂರು ಸೇರಿದಂತೆ ಇತರೆ ರಾಜ್ಯ ಹಾಗೂ ದೇಶ-ವಿದೇಶಗಳಲ್ಲಿ ಇರುವ ಗಿರಾಕಿಗಳಿಗೆ ಹಾಗೂ ಸಬ್‌ ಪಡ್ತರ್‌ಗಳಿಗೆ ಮಾರಾಟ/ಸರಬರಾಜು ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ (ಸಿ.ಸಿ.ಬಿ) ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ದಿನಾಂಕ: 05.11.2023 ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮಾದಕವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನ ವಿಚಾರಣೆ ವೇಳೆ ನೀಡಿದ ಹೇಳಿಕೆ ಮೇರೆಗೆ ಆವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಆತನ ಮನೆಯಲ್ಲಿದ್ದ ಸುಮಾರು ಕೆ 10 ಕೋಟಿ ಮೌಲ್ಯದ 5 Kg MDMA ಮಾದಕವಸ್ತು, MDMA ತಯಾರು ಮಾಡಲು ಬೇಕಾದ ಕಚ್ಚಾ ಪದಾರ್ಥಗಳಾದ Methylsulfonylmethane (MSM) 12 Kg 450 grams, Sodium Hydroxide Crystals 5 Kg, Hydrocloric acid-5 Liter. Acetone 2.5 Liter, MDMA ತಯಾರಿಕೆಗೆ ಬಳಸುತ್ತಿದ್ದ ಪ್ರೈಡ್ ಕಂಪನಿಯ 5 ಲೀಟರ್ ಕುಕ್ಕರ್, ಸೂರ್ಯ ಕಂಪನಿಯ ಸೈವ್, ! ಗ್ಯಾಸ್ ಸಿಲಿಂಡರ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 01 ಮೊಬೈಲ್ ಫೋನು ಸೇರಿದಂತೆ 2 ಡಿಜಿಟಲ್ ತೂಕದ ಯಂತ್ರ, ಒಂದು ಎನ್‌ಟ್ರಾಕ್ ದ್ವಿಚಕ್ರ ವಾಹನವನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಸಂಬಂಧ ಆರೋಪಿತನ ವಿರುದ್ದ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾ ಮತ್ತು 14 ಫಾರೀನರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ದಿನಾಂಕ: 09-II-2023 ರಂದು ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ದಿನಾಂಕ: 20-II-2023ರ ವರೆಗೆ ಪೊಲೀಸ್ ಬಂಧನಕ್ಕೆ ಪಡೆಯಲಾಗಿದೆ, ಈಗ ಪೊಲೀಸ್ ವಶದಲ್ಲಿ ಆರೋಪಿಯನ್ನು ವಿಚಾರಣೆ ಮಾಡಲಾಗುತ್ತಿದೆ.

ಈ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರು (ಪಶ್ಚಿಮ) ರವರಾದ ಎನ್. ಸತೀಶ್ ಕುಮಾರ್, ಐಪಿಎಸ್‌ ಮತ್ತು ಉಪ ಪೊಲೀಸ್‌ ಆಯುಕ್ತರು. ಅಪರಾಧ-2 ಶ್ರೀನಿವಾಸ್ ಗೌಡ, ಐಪಿಎಸ್‌ ರವರ ಮಾರ್ಗದರ್ಶನದಲ್ಲಿ ಬೆಂಗಳೂರು ನಗರದ ಸಿಸಿಬಿ ಘಟಕದ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಕೈಗೊಂಡಿರುತ್ತದೆ.

City Today News 9341997936

Leave a comment

This site uses Akismet to reduce spam. Learn how your comment data is processed.