ಕಳೆದ ನೂರಾರು ವರ್ಷಗಳಿಂದ ಕರ್ನಾಟಕ ರಾಜ್ಯಾದ್ಯಾಂತ ಬೀದಿಬದಿ ವ್ಯಾಪಾರಸ್ಥರ ಸಮುದಾಯವು ಮತ್ತು ಮಾದಿಗ ಸಮುದಾಯದ ಚರ್ಮಕುಶಲ ಕರ್ಮಿಗಳು ಕೇವಲ ಬೀದಿಬದಿ/ರಸ್ತೆಬದಿಯನ್ನೆ ಅವಲಂಬಿಸಿ ಸಣ್ಣಮಟ್ಟ ವ್ಯಾಪಾರ ಮಾಡಿಕೊಂಡು ಅದರಿಂದ ಬರುವ ಆದಾಯದಿಂದಲೇ ಕುಟುಂಬ ನಿರ್ವಹಣೆ, ಆಯಾ ಹೊತ್ತಿನ ಊಟ, ಮಕ್ಕಳ ವಿದ್ಯಾಭ್ಯಾಸ ಇನ್ನತ್ಯಾದಿಗಳು ಸೇರಿದಂತೆ ಸಮಾಜದಲ್ಲಿ ಅವರೂ ಸಹಾ ಸ್ವಾವಲಂಭಿಗಳಾಗಿ ಜೀವನ ನಡೆಸಲು ತಮ್ಮ ಬಡತನದ ಬದುಕಿನ ಹೋರಾಟದ ಜೀವನವನ್ನು ನಡೆಸಿಕೊಂಡು ಬದುಕುತ್ತಿರುತ್ತಾರೆ.

ಇದನ್ನು ಮನಗಂಡ ಘನ ಕೇಂದ್ರ ಸರ್ಕಾರವು 2014ನೇ ಸಾಲಿನಲ್ಲಿ ನಗರ ಬೀದಿಬದಿ/ರಸ್ತೆಬದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸಲು ಕಾಯ್ದೆಯನ್ನು ಸಹ ರಚಿಸಿ ಬೀದಿಬದಿ/ರಸ್ತೆಬದಿ ವ್ಯಾಪಾರಸ್ಥರಿಗೆ ಪಟ್ಟಣ/ನಗರ ಪ್ರದೇಶಗಳಲ್ಲಿ ಬೀದಿಬದಿ/ರಸ್ತೆಬದಿ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ವ್ಯಾಪಾರ ಸ್ಥಳದ ಗುರುತಿನ ಚೀಟಿಯನ್ನು ವಿತರಿಸಿ ಆರ್ಥಿಕವಾಗಿ ಸಧೃಡರಾಗಲು ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಗಳನ್ನು ಸಹ ನೀಡಿ ಉತ್ತೇಜಸಲಾಗುತ್ತಿದೆ. ಅದರಂತೆಯೇ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ ಸಮುದಾಯದ ಚರ್ಮಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಲಿಡ್ಕರ್ ನಿಗಮದಿಂದ ಬೀದಿಬದಿ/ರಸ್ತೆಬದಿಯ ಚರ್ಮಕುಟೀರವನ್ನು ವಿತರಿಸಿ ಸದರಿ ಕುಟೀರಗಳಿಗೆ ಪಾಲಿಕೆ ವತಿಯಿಂದ ಪರವಾನಗೆಯನ್ನು ನೀಡಿ ಇವರು ಸಹ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಧೃಡರಾಗಲು ನೆರವು ನೀಡುತ್ತಿರುವುದು ಸರಿಯಷ್ಟೆ.
ಆದರೆ ಅಭಿವೃದ್ಧಿಯ ನೆಪವನ್ನು ನೀಡಿ ಹಲವು ಬಾರಿ ಬೀದಿಬದಿ/ರಸ್ತೆಬದಿ ಸಮುದಾಯವನ್ನು ಗುರಿಯಾಗಿಸಿಕೊಂಡು ಯಾವುದೇ ಮುನ್ಸೂಚನೆ/ನೋಟಿಸ್ ನೀಡದೆ ಇದ್ದಕಿದ್ದ ಹಾಗೆ ಬಂದು ಬೀದಿಬದಿ/ರಸ್ತೆಬದಿ ವ್ಯಾಪಾರ ಸಾಮಾಗ್ರಿ ಹಾಗೂ ಸಲಕರಣೆಗಳನ್ನು ಜಪ್ತಿ ಮಾಡಿ, ಮಾದಿಗ ಸಮುದಾಯದ ಅಧಿಕೃತವಾಗಿ ಸರ್ಕಾರವೇ ಕೊಟ್ಟ ಪರವಾನಗೆ ಹೊಂದಿರುವ ಚರ್ಮಕುಟೀರಗಳನ್ನು ಜೆ.ಸಿ.ಬಿ.ಯಿಂದ ಜಕ್ಕಂಗೊಳಿಸಿ ತೆರವುಗೊಳಿಸಿ ಅವರ ಬಡತನದ ಜೀವನವನ್ನು ಬೀದಿ ಪಾಲಾಗುವಂತೆ ಮಾಡಿರುತ್ತಾರೆ.
ಉದಾ:04-04-2017ರಂದು ಜಯನಗರ, ರಾಜಾಜಿನಗರ, ಯಶವಂತಪುರ, ಶಿವಾಜಿನಗರ,17-02-2020ರಂದು ಎಂ.ಜಿ.ರಸ್ತೆ, ಕೋರಮಂಗಲ ಮತ್ತು ಜಯನಗರ, 05-11-2023ರಂದು ಬೊಮ್ಮನಹಳ್ಳಿ, ಮಲ್ಲೇಶ್ವರಂ, ಕಮ್ಮನಹಳ್ಳಿ, ಅದರಂತೆಯೇ ದಿನಾಂಕ:07-11-2023ರಂದು ಜಯನಗರ, ಬಿ.ಟಿ.ಎಂ.ಲೇಔಟ್, ರಾಜಾಜಿನಗರ, ಶಿವಾಜಿನಗರ ಇನ್ನಿತ್ಯಾದಿ ಕಡೆಗಳಲ್ಲಿ ಸುಮಾರು 8-30ಘಂಟೆಗೆ ಬೀದಿಬದಿ ರಸ್ತೆಬದಿಯ ನೂರೈವತ್ತಕ್ಕೂ ಹೆಚ್ಚು ವ್ಯಾಪಾರಸ್ಥರನ್ನು ಹಾಗೂ ಮಾದಿಗ ಸಮುದಾಯದ 35 ಚರ್ಮಕುಶಲಕರ್ಮಿಗಳನ್ನು ಯಾವುದೇ ಮುನ್ಸೂಚನೆ/ನೋಟಿಸ್ ನೀಡದೆ, ಚರ್ಮಕುಟೀರಗಳ ಮೇಲೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರವರ ಭಾವಚಿತ್ರ ಮತ್ತು ಡಾ| ಬಾಬೂಜಗಜೀವನ್ ರಾಮ್ ರವರ ಭಾವಚಿತ್ರವಿದ್ದರೂ ಸಹ ಏಕಾಏಕೀ ಬುಲ್ಲೋಜರ್, ಜೆ.ಸಿ.ಬಿ, ಟಾಕ್ಟರ್‌ಗಳೊಂದಿಗೆ ಒಂದು ಪರಿಶಿಷ್ಟ ಜಾತಿಯ ಮಾದಿಗ ಜನಾಂಗಕ್ಕೆ ಸೇರಿದ ಸರಿ ಸುಮಾರು 35 ಚರ್ಮಕುಟೀರಗಳನ್ನು ಜಕ್ಕಂ ಮಾಡಿ ಸದರೀ ಕುಟೀರದ ಮೇಲೆ ಲಗತ್ತಿಸಿದ್ದ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಹಸಿರು ಕ್ರಾಂತಿ ಹರಿಕಾರರಾದ ಡಾ| ಬಾಬೂ ಜಗಜೀವನ್ ರಾಮ್ ರವರ ಭಾವಚಿತ್ರವನ್ನೂ ಲೆಕ್ಕಿಸದೆ ಅವರಿಗೆ ಅಗೌರವ ತೋರಿ ಅವಮಾನ ಮಾಡಿ ಚರ್ಮಕುಟೀರಗಳನ್ನು ಕೆಳಗೆ ತಳ್ಳಿ ನಾಶಪಡಿಸಿ, ಸದರಿ 35 ಜನ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗ ಸಮುದಾಯದವರ ಸ್ವಾವಲಂಬನಾ ಜೀವನಕ್ಕೆ ಹಾನಿಮಾಡಿ 35 ಕುಟುಂಬಗಳನ್ನು ಬೀದಿ ಪಾಲು ಮಾಡಿರುತ್ತಾರೆ.
ಆದಾಗಿ ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಕೂಡಲೇ ಶ್ರೀಮತಿ ವಿನೋತ್ ಪ್ರಿಯಾ.ಆರ್., ವಲಯ ಆಯುಕ್ತರು ಬಿ.ಬಿ.ಎಂ.ಪಿ(ದಕ್ಷಿಣ), ಡಾ|ಜಗದೀಶ್ ನಾಯಕ್, ಜಂಟಿ ಆಯಕ್ತರು ಬಿ.ಬಿ.ಎಂ.ಪಿ(ದಕ್ಷಿಣ), ಶ್ರೀ ಸೋಮಶೇಖರ್ ಪಾಟೀಲ್ (ಮಾರ್ಷಲ್ ಟೀಂನ ಮುಖ್ಯಸ್ಥ) ಬಿ.ಬಿ.ಎಂ.ಪಿ ಮತ್ತು ಮಂಜುನಾಥ್-ಎ.ಇ ಬಿ.ಬಿ.ಎಂ.ಪಿ ರವರುಗಳ ವಿರುದ್ಧ ಪ.ಜಾ/ ಪ.ಪಂಗಡಗಳ ದೌರ್ಜನ್ಯ ಪ.ಜಾತಿ/ಪ.ಪಂಗಡಕ್ಕೆ ಸೇರಿದ ಆಸ್ತಿ ನಾಶ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಾರತದ ಮಾಜಿ ಉಪ ಪ್ರಧಾನಿಗಳಾದ ಹಸಿರು ಕ್ರಾಂತಿಯ ಹರಿಕಾರ ಡಾ| ಬಾಬೂ ಜಗಜೀವನ್ ರಾಮ್‌ರವರುಗಳ ಭಾವಚಿತ್ರಕ್ಕೆ ಅವಮಾನ/ ಅಗೌರವ ಮಾಡಿರುವ ಪರಿಶಿಷ್ಟ ಜಾತಿಗೆ ಸೇರಿದ ಸ್ವಾವಲಂಬನಾ ಬದುಕಿಗೆ ಅಡ್ಡಿಪಡಿಸಿ ನಾಶಪಡಿಸಿ ಅವರನ್ನು ಬೀದಿಗೆ ತಳ್ಳಿದ ಪ್ರಕರಣವನ್ನು ಗಂಭೀರವೆಂದು ಪರಿಗಣಿಸಿ, ಸದರಿಯವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ, ಸದರೀ ರವರ ಮೇಲೆ ಎಫ್.ಐ.ಆರ್ ದಾಖಲಿಸಬೇಕು.
ಬೀದಿಪಾಲಾದ ಎಲ್ಲಾ ಬೀದಿಬದಿ/ರಸ್ತೆಬದಿ ವ್ಯಾಪಾರಸ್ಥರಿಗೆ ಮತ್ತು ಮಾದಿಗ ಸಮುದಾಯದ ಚರ್ಮಕುಶಲಕರ್ಮಿಗಳಿಗೆ ಪಾಲಿಕೆ ವತಿಯಿಂದಲೇ ಪುನರ್ವಸತಿ ಕಲ್ಪಿಸಿಕೊಡಬೇಕು.
ಪದೇಪದೇ ಬೀದೀಬದಿ/ರಸ್ತೆಬದಿ ವ್ಯಾಪಾರಸ್ಥರನ್ನು ಹಾಗೂ ಚರ್ಮಕುಶಲ ಕರ್ಮಿಗಳನ್ನು ಒಕ್ಕಲೆಬ್ಬಿಸದ ಹಾಗೆ ಎಲ್ಲಾ ವಲಯ ಆಯುಕ್ತರುಗಳಿಗೆ, ಜಂಟಿ ಆಯುಕ್ತರುಗಳಿಗೆ ಮತ್ತು ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಬೇಕು.
ಎಲ್ಲಾ ಚರ್ಮಕಾರ್ಮಿಕರಿಗೆ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ, ಮೆಟ್ರೋ ನಿಲ್ದಾಣಗಳಲ್ಲಿ ಕುಠೀರಗಳನ್ನು ನಿರ್ಮಿಸಿಕೊಡಬೇಕು.
ನಗರ ಬೀದಿಬದಿ/ರಸ್ತೆಬದಿ ವ್ಯಾಪಾರಿಗಳ ಕಾಯ್ದೆಯನ್ನು ಯತಾವತ್ತಾಗಿ ಜಾರಿಗೊಳಿಸಬೇಕು.
ಆದಾಗಿ ಈ ಮೇಲ್ಕಂಡ ಎಲ್ಲಾ ಹಕ್ಕೊತ್ತಾಯಗಳು ಕೂಡಲೇ ಜಾರಿಗೆ ಬರುವಂತೆ ಕ್ರಮವಹಿಸಲು ಮಾನ್ಯ ಮುಖ್ಯಮಂತ್ರಿ, ಮಾನ್ಯ ಉಪಮುಖ್ಯಮಂತ್ರಿ, ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಪಾಲಿಕೆ ಆಯುಕ್ತರನ್ನು ಈ ಸುದ್ದಿಗೋಷ್ಠಿ/ ಪತ್ರಿಕಾಗೋಷ್ಠಿ ಮೂಲಕ ಒತ್ತಾಯ ಪೂರ್ವಕವಾಗಿ ಸರ್ಕಾರವನ್ನು ಅಗ್ರಹಿಸುತ್ತೇವೆ.
ವಿಳಂಭವಾದಲ್ಲಿ ರಾಜ್ಯಾದ್ಯಂತ ಬೀದಿಬದಿ ರಸ್ತೆಬದಿ ವ್ಯಾಪಾರಸ್ತರನ್ನು ಹಾಗೂ ಮಾದಿಗ ಸಮುದಾಯದ ಚರ್ಮ ಕುಶಲಕರ್ಮಿಗಳನ್ನು ಜಾಗೃತಿ ಮೂಡಿಸಿ ಮುಂದಿನ ಹೋರಾಟ ರಾಜ್ಯಾದ್ಯಾಂತ ನಡೆಸಲಾಗುವುದು ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಸಂಘದ ವತಿಯಿಂದ ತಿಳಿಸಲಾಯಿತು.
City Today News 9341997936
