ದಿನಾಂಕ 22-11-2023 ರಂದು ಬೆಳಿಗ್ಗೆ 11:00ಗೆ ಕರ್ನಾಟಕದ ಪ್ರಜ್ಞಾವಂತರ ಅನುಭವ ಮಂಟಪ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ

ದಿನಾಂಕ 02.11.2023 ರಂದು ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಯದಲ್ಲಿ ಶಿವಧ್ವಜಾರೋಹಣ ಮಾಡಿ ತಮ್ಮ ಆಶೀರ್ವಚನ ನೀಡಿದ ಸಾಣೇಹಳ್ಳಿ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು “ವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣೇಶನನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ, ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು” ಎಂದು ಕರೆಕೊಟ್ಟಿದ್ದರು. ಮುಂದುವರಿದು “ಗಣಪತಿಯನ್ನು ಸ್ತುತಿಸುವುದು ಮೌಡ್ಯದ ಆಚರಣೆ, ವಚನಗಳನ್ನು ಪ್ರಸ್ತುತಪಡಿಸುವುದು ನಿಜವಾದ ಪ್ರಾರ್ಥನೆ. ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನೂ ಹಾಡಬಹುದು ಎಂದು ತೋರಿಸಿದವರು ಶಿವಕುಮಾರ ಸ್ವಾಮೀಜಿ” ಎಂದು ತಿಳಿಸಿದ್ದರು. ಅಲ್ಲದೆ, “ಶರಣರ ಪ್ರಕಾರ ಸ್ವಸಾಮರ್ಥ್ಯ. ಉತ್ತಮ ನಡವಳಿಕೆ ಹೊಂದಿದವರೇ ನಿಜವಾದ ದೇವರು. ನಮ್ಮನ್ನು ನಾವು ನಂಬಬೇಕು. ಶರಣರ ಆಶಯಗಳಂತೆ ಬದುಕಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯ” ಎಂದು ಬಸವಾನುಯಾಯಿಗಳಿಗೆ ಮತ್ತು ಲಿಂಗಾಯತ ಧರ್ಮೀಯರಿಗೆ ಅರಿವು ಮೂಡಿಸುವ ಮತ್ತು ಶರಣರ ಹಾಗೂ ಅವರು ರಚಿಸಿದ ವಚನ ಸಾಹಿತ್ಯದ ಆಶೋತ್ತರಗಳನ್ನು ಪಾಲಿಸಲು ಕರೆಕೊಟ್ಟಿದ್ದರು.

ಶ್ರೀಗಳು ಶರಣ ಸಮೂಹಕ್ಕೆ ಕೊಟ್ಟ ಕರೆಯನ್ನು ತಪ್ಪಾಗಿ ಅರ್ಥೈಸಿ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ಮಾನ್ಯ ವಿಶ್ವೇಶ್ವರ ಭಟ್ಟರು “ಉಪದ್ಯಾಪಿ, ಅನರ್ಥಕಾರೀ ಹೇಳಿಕೆ, ದೇವರ ಗೊಡವೆಗೆ ಹೋಗಬೇಡಿ, ಎಡಬಿಡಂಗಿ ಹೇಳಿಕೆ, ಚಲಾವಣೆಗೆ ಬರಲು ಈ ತರಹದ ಹೇಳಿಕೆ, ನಾಟಕ ಮಾಡಿಕೊಂಡಿರಿ ಇಂತಹ ಅಸಭ್ಯ ಮತ್ತು ಕೀಳು ಅಭಿರುಚಿಯ ಶಬ್ದಗಳನ್ನು ಉಪಯೋಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ತಾವು ಸಂಪಾದಿಸುವ ವಿಶ್ವವಾಣಿ ದಿನಪತ್ರಿಕೆಯಲ್ಲಿ ಬರಹಗಳನ್ನು ಪ್ರಕಟಿಸುವುದರ ಜೊತೆಗೆ ಮತ್ತೊಬ್ಬ ತಾನೇ ಅಪ್ಪಟ ಹಿಂದೂ ಕಾರ್ಯಕರ್ತನೆಂದು ಹೇಳಿಕೊಳ್ಳುವ ಶ್ರೀ ಪ್ರಶಾಂತ ಸಂಬರ್ಗಿ ಎನ್ನುವವರು ಸ್ವಾಮಿಗಳ ವಿರುದ್ಧ ಅನಗತ್ಯ ಪೋಲಿಸ್ ದೂರು ದಾಖಲಿಸಿ ಸಾಣೆ ಹಳ್ಳಿ ಶ್ರೀಗಳಿಗೆ ಜೀವ ಭಯವನ್ನುಂಟುಮಾಡುವ ಉದ್ಧಟತನವನ್ನು ಮಾಡಿರುತ್ತಾನೆ. ಈ ಇಬ್ಬರೂ ಮಹನೀಯರಿಗೆ ಲಿಂಗಾಯತ ಧರ್ಮದ ತತ್ವಾದರ್ಶಗಳ ಅರಿವು ಇದ್ದಂತಿಲ್ಲ. ಲಿಂಗಾಯತರ ಶಿವನಿಗೂ ಹಿಂದೂ ಧರ್ಮದಲ್ಲಿನ ಶಿವನಿಗೂ ಇರುವ ಮೂಲ ವ್ಯತ್ಯಾಸವೇ ತಿಳಿದಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನೂ ಮಾಡದೆ ತಮಗೆ ತಿಳಿದಂತ ಹಾಗೂ ಮನಬಂದಂತೆ ಹೇಳಿಕೆ, ಅಂಕಣ ಬರಹ ಮತ್ತು ದೂರದರ್ಶನದಲ್ಲಿ ಹೇಳಿಕೆ ಕೊಡುವುದರ ಮೂಲಕ ಬಸವತತ್ವಾಧಾರಿತ ಲಿಂಗಾಯತ ಧರ್ಮದ ಗುರುಗಳಾದ ಹಾಗೂ ತಮ್ಮ ಧರ್ಮ ಪ್ರಸಾರದಲ್ಲಿ ತೊಡಗಿದ್ದ ಸಾಣೆಹಳ್ಳಿ ಮಠದ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಘನತೆಗೆ ಕುಂದುಂಟು ಮಾಡಿದ್ದು, ಸಾರ್ವಜನಿಕವಾಗಿ ಅಪಮಾನಿಸಿದ್ದು ಅವರು

ಹೇಳದ ಮತ್ತು ಹೇಳಿದ ಮಾತುಗಳನ್ನು ತಿರುಚುವುದರ ಮೂಲಕ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ, ಅಲ್ಲದೆ ಧರ್ಮಗಳ ಮಧ್ಯೆ ವೈಮನಸ್ಯ ಉಂಟಾಗುವಂತೆ ಪ್ರೇರೇಪಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲವುಗಳ ಹೊರತಾಗಿ ಸಂವಿಧಾನಿಕ ಹಕ್ಕಾಗಿರುವ ತಮ್ಮ ಧರ್ಮದ ಪ್ರಚಾರದಲ್ಲಿದ್ದ ಸ್ವಾಮೀಜಿಗಳಿಗೆ ಅಡಚಣೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಲಿಂಗಾಯತ ಧರ್ಮೀಯರು ಹಾಗೂ ಬಸವತತ್ವಾನುಯಾಯಿಗಳು ಘಾಸಿಗೊಂಡಿದ್ದಾರೆ. ಆದುದರಿಂದ ನಾವುಗಳು ಇವರ ಈ ಹೇಳಿಕೆ ಮತ್ತು ಬರಹಗಳನ್ನು ಖಂಡಿಸುವುದರ ಜೊತೆಗೆ ಶ್ರೀ ವಿಶ್ವೇಶ್ವರ ಭಟ್ಟರು ಮತ್ತು ಶ್ರೀ ಪ್ರಶಾಂತ ಸಂಬರ್ಗಿ ಅವರುಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದೇವೆ. ಅಲ್ಲದೆ, ನಮ್ಮ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದೇನೆಂದರೆ, ಒಂದು ಧರ್ಮದ ಗುರುಗಳಿಗೆ ಅವಮಾನ ಮಾಡುವುದರ ಮೂಲಕ ಇಡೀ ಲಿಂಗಾಯತ ಸಮಾಜಕ್ಕೆ ಹಾಗೂ ಬಸವತತ್ವಕ್ಕೆ ಮಾಡಿರುವ ಇವರ ಈ ನಡವಳಿಕೆಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

ವಿಶೇಷ ಸೂಚನೆ:- ಬಸವ ತತ್ವದ ಮೇಲೆ ಮುಂದುವರೆದ ದಾಳಿಯನ್ನು ವಿರೋಧಿಸಿ ದಿನಾಂಕ 22-11-2023 ರಂದು ಬೆಳಿಗ್ಗೆ 11:00ಗೆ ಕರ್ನಾಟಕದ ಪ್ರಜ್ಞಾವಂತರ ಅನುಭವ ಮಂಟಪ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರರು ಮತ್ತು ಬಸವಪರ ಸಂಘಟನೆಗಳ ಸದಸ್ಯರು ಭಾಗವಹಿಸಬೇಕಾಗಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ವಿನಂತಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.