ಬೆಂಗಳೂರು ಚಲೋ ಕಾರ್ಯಕ್ರಮ ದಿನಾಂಕ 22-11-2023ನೇ ಬುಧವಾರ ಬೆಳಗ್ಗೆ 10.00 ಗಂಟೆಗೆ
ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ

ಸರ್ಕಾರವು ಮಕ್ಕಳ ಮತ್ತು ತಾಯಂದಿರ ಅಭಿವೃದ್ಧಿಯಭಾಗವಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು 1975ರಲ್ಲಿ ಆರಂಭಿಸಿದ್ದು ದೇಶಾದ್ಯಂತ ಈ ಯೋಜನೆ ಅಡಿಯಲ್ಲಿ ಲಕ್ಷಾಂತರ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೆಲಸ ನಿರ್ವಯಿಸುತ್ತಿದ್ದು ರಾಜ್ಯದಲ್ಲೂ 1ಲಕ್ಷದ 32ಸಾವಿರ ಕಾರ್ಯಕರ್ತೆಯರು ದುಡಿಯುತ್ತಿದ್ದೇವೆ.
ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ವಿಶೇಷ ಮಕ್ಕಳಿಗೆ ಪೌಷ್ಠಿಕ ಆಹಾರ ಸೌಲಭ್ಯ, ಚುಚ್ಚುಮದ್ದು ಬಿ.ಎಲ್.ಓ. ಮಾಹಿತಿ ಸೇವೆ ಇತ್ತೀಚೆಗೆ ಬಂದಿರುವ ಸ್ನೇಹಾ ಆಪ್‌ನಲ್ಲಿ ಮಕ್ಕಳ ತೂಕ ಮಾಡಿ ಪ್ರತಿತಿಂಗಳು ಗುತುತಿಸುವುದು ಕೇಂದ್ರ ಸರ್ಕಾರ ಯೋಜನೆಯಾದ ಪೋಷಣ್ ಟ್ರ್ಯಾಕರ್‌ನಲ್ಲಿ ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರ ಮಾಹಿತಿಯನ್ನು ತುಂಬುವುದು ಹೀಗೆ ದಿನೇ ದಿನೇ ಕೆಲಸದ ಒತ್ತಡಮಾತ್ರ ಹೆಚ್ಚುತ್ತಲೆ ಇದೆ.
ಈಗಾಗಲೇ ರಾಜ್ಯದಲ್ಲಿ ಕೊರೋನ ವಾರಿಯರಾಗಿ ಮಾನವೀಯತೆಯಿಂದ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವಾಗ ಅನೇಕ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮರಣ ಹೊಂದಿದ್ದಾರೆ ಅನೇಕ ಕುಟುಂಬಗಳು ಬೀದಿಪಾಲಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ 1ಲಕ್ಷದ 32ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗೌರವಧನ ಎಂಬ ಹೆಸರಿನಲ್ಲಿ ಕಾರ್ಯಕರ್ತೆಯರನ್ನಾಗಿ ತೆಗೆದಕೊಂಡು ಸರ್ಕಾರ ಮಹಿಳೆಯರನ್ನು ಶೋಷಣೆಮಾಡುತ್ತಿದೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ ಈಗಿನ ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣದ ಬಗ್ಗೆ ಹೆಚ್ಚಿನ ಅಭಿವೃದ್ಧಿಗಳನ್ನು ಹಮ್ಮಿಕೊಂಡಿದ್ದು ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿಯರಿಗೆ ಒಂದು ಕನಿಷ್ಠ ವೇತನ ಜಾರಿಮಾಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾಗಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

ಬೇಡಿಕೆಗಳು
1) ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ 21000 ಕನಿಷ್ಠ ವೇತನ ನೀಡಬೇಕು.
2) ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ 6ನೇ ಗ್ಯಾರಂಟಿಯಾಗಿ ಕಾರ್ಯಕರ್ತೆಯರಿಗೆ 15000 ರೂ. ಸಹಾಕಿಯರಿಗೆ 10000 ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿದ್ದನ್ನು ತಕ್ಷಣದಿಂದ ಜಾರಿಮಾಡಬೇಕು.
3) ಎಲ್ಲಾ ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು ಅಲ್ಲಿಯವರೆಗೆ ಮುಖ್ಯಕಾರ್ಯಕರ್ತೆ ನೀಡುವ ಗೌರವಧನವನ್ನು ನೀಡಬೇಕು.
4) ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ನಿವೃತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಕಿಯರಿಗೆ ಗ್ರಾಜ್ಯುಟಿ ಹಣವನ್ನು ತಕ್ಷಣ ಜಾರಿ ಮಾಡಬೇಕು.
ಮೇಲ್ಖಂಡ ವಿಷಯಗಳನ್ನೊಲಗೊಂಡ ಪ್ರಕಟಣೆಯನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ (ರಿ.) ವತಿಯಿಂದ ಬಿ.ಪ್ರೇಮ -ರಾಜ್ಯಾಧ್ಯಕ್ಷರು, ಜಯಲಕ್ಷ್ಮಿ ಬಿ.ಆರ್.-ಗೌರವ ಅಧ್ಯಕ್ಷರು, ಉಮಾಮಣಿ-ರಾಜ್ಯ ಕಾರ್ಯದರ್ಶಿ, ವಿಶಾಲಾಕ್ಷಿ-ರಾಜ್ಯ ಖಜಾಂಚಿ, ನಿರ್ಮಲ ಬಿ.ಎಸ್.-ರಾಜ್ಯ ಉಪಾಧ್ಯಕ್ಷರು, ಶಾಂತ-ರಾಜ್ಯ ಸಹ ಕಾರ್ಯದರ್ಶಿ ಮತ್ತು ಭಾರತಿ ಎನ್.ಪಿ.-ರಾಜ್ಯ ಸಲಹೆಗಾರರು ಗಳ ಉಪಸ್ತಿತಿಯಲ್ಲಿ ಪ್ರಕಟಿಸಲಾಯಿತು.
City Today News 9341997936
