03.12.2023 ರಂದು ವಿಶೇಷ ವಿಶ್ವ ವಿಕಲ ಚೇತನರ ದಿನಚಾರಣೆಯಾಗಿದ್ದು ಮಹಾಲಕ್ಷ್ಮೀಲೇಔಟ್ ನಲ್ಲಿರುವ ಶ್ರೀ ಸಂಜೀವಿನಿ ಫೌಂಡೇಷನ್ ಹಾಗೂ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಸೇರಿ ಕಾಲ್‌ನಡಿಗೆ (Walka Thon) ಕಾರ್ಯಕ್ರಮವನ್ನು ಬೆಳಗ್ಗೆ 7.00 ಘಂಟೆಯಿಂದ 10.00 ಘಂಟೆಯವರೆಗೂ ಕಾಲ್‌ನಡಿಗೆ ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಲೇಔಟ್ (ಕಮಲಮ್ಮನ ಗುಂಡಿ) ರಾಣಿ ಅಬ್ಬಕ್ಕ ಕ್ರೀಡಾಂಗಣದಿಂದ ನಡೆದು – 1ನೇ ಬ್ಲಾಕ್ ಸರ್ವಿಸ್ ರಸ್ತೆ – ಸ್ವಾತಿ ಹೋಟೆಲ್ ರಸ್ತೆ – ಮೋದಿ ಆಸ್ಪತ್ರೆ ರಸ್ತೆ – ಶಂಕರಮಠ ರಸ್ತೆ – ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಸಮಾಗಮಾ ಮಾಡುತ್ತೇವೆ ಇದರ ಉದ್ಘಾಟಣಾ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಲಿ ಶಾಸಕರು ಮಹಾಲಕ್ಷ್ಮೀ ಲೇಔಟ್, ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಕೆ.ಗೋಪಾಲಯ್ಯ ನವರು ಉದ್ಘಾಟಿಸಲಿದ್ದಾರೆ.

“2ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಸಂಜೀವಿನಿ ವಿಕಲ ಕಲಾ ಸಂಭ್ರಮ ಕಾರ್ಯಕ್ರಮವನ್ನು ದಿನಾಂಕ:16-12-2023 ರಂದು ಬೆಳಗ್ಗೆ 8.00 ಘಂಟೆಯಿಂದ ಸಂಜೆ 5.00 ಘಂಟೆಯವರೆಗೂ ಕ್ರಿಕೆಟ್ ಆಟ ಮತ್ತು ಕೆಲವೊಂದು ಕ್ರೀಡಾ ಸ್ಪರ್ಧೆಗಳನ್ನು ವಿಕಲಚೇತನರಿಗೆ ಆಯೋಜಿಸಲಾಗಿದೆ. ದಿನಾಂಕ:17-12-2023 ರಂದು ಬೆಳಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೂ ವಿಶೇಷ ವಿಕಲಚೇತನ ಬುದ್ಧಿ ಮಾಂಧ್ಯ ಮಕ್ಕಳಿಗೆ ಕೆಲವೊಂದು ಚಿತ್ರಕಲಾ ಸ್ಪರ್ಧೆ ಮತ್ತು ದೈಹಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ದಿನಾಂಕ:17-12-2023 ರಂದು ಸಂಜೆ 4.00 ಘಂಟೆಯಿಂದ ರಾತ್ರಿ 10.00 ಘಂಟೆಯವರೆಗೂ ಕೆಲವೊಂದು ಮನರಂಜನಾ ಕಾರ್ಯಕ್ರಮಗಳನ್ನು ವಿಶೇಷ ವಿಕಲ ಚೇತನರನ್ನು ರಂಜಿಸಲು ಆಯೋಜಿಸಲಾಗಿದೆ. ಮತ್ತು ಕರ್ನಾಟಕದ್ಯಾಂತ ಎಲ್ಲಾ ರಂಗದಲ್ಲಿ ಸಾಧನೆ ಮಾಡಿರುವ ವಿಶೇಷ ಚೇತನರಿಗೆ ಮತ್ತು ಸಮಾಜದ ಏಳಿಗೆಗೆ ದುಡಿದ ಸಾಧಕರಿಗೆ ಸಂಜೀವಿನಿ ರತ್ನ ಪ್ರಶಸ್ತಿ ಎಂಬ ಹೆಸರಿನ ಪ್ರಶಸ್ತಿಯನ್ನು ಕೊಡಲಾಗುವುದು. ಮುಂದಿನ ದಿನಗಳಲ್ಲಿ ಅವರಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಲ್ಲಿ ನಮ್ಮ ಸಂಸ್ಥೆ ಸದಾ ಭಾಗಿಯಾಗಿರುತ್ತದೆ.
ಈ ಸಮಾರಂಭಕ್ಕೆ ಭಾಗವಹಿಸಲಿರುವ ಮುಖ್ಯ ಅತಿಥಿಗಳಿಂದ ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ವಿತರಿಸಲಾಗುವುದು ಹಾಗೂ ಈ ಸಮಾರಂಭಕ್ಕೆ ಆಗಮಸಲಿರುವ ಸದಾ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಗಣ್ಯರಿಗೆ ಈ ಸಮಾರಂಭಕ್ಕೆ ಅಹ್ವಾನ ಶ್ರೀ ಸಂಜೀವಿನಿ ಫೌಂಡೇಷನ್ ಅಧ್ಯಕ್ಷರು ಮತ್ತು ಪಧಾದಿಕಾರಿಗಲು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
City Today News 9341997936
