
ಚಿತ್ರದುರ್ಗ ಜಿಲ್ಲೆಯ ಕೊಳಹಾಳ್ (ಭರಮಸಾಗರ, ಚಿತ್ರದುರ್ಗ ಜಿಲ್ಲೆ) ದಲ್ಲಿ ಸುಮಾರು ಐದು ವರ್ಷಗಳಿಂದ ವಾಸವಾಗಿದ್ದು, ಜೀವನ ನಿರ್ವಹಣೆಗಾಗಿ ಹೈನುಗಾರಿಕೆ ಮಾಡಿಕೊಂಡಿದ್ದು, 45
ಮೇಕೆ 05 ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದರು. ದಿನಾಂಕ:26-10-2023 ರಂದು
ಸುಮಾರು ಹತ್ತು ಲಕ್ಷ ರೂಪಾಯಿ ಬೆಳೆಬಾಳುವ ಮೇಕೆ ಮತ್ತು ಕುರಿಗಳ ಕಳ್ಳತನವಾಗಿದ್ದು,
ಭರಮಸಾಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಿದಾನದ ಗತಿಯಲ್ಲಿ ತನಿಖೆ ನಡೆಸುತ್ತಿರುವ ಕಾರಣಕ್ಕೆ ಈ ವಿಷಯವನ್ನು ದಿನಾಂಕ: 30-10-2023 ರಂದು ಚಿತ್ರದುರ್ಗ ಜಿಲ್ಲಾ ಎಸ್.ಪಿ ಯವರ ಗಮನಕ್ಕೆ ತಂದು ನಾವು ಲಿಖಿತವಾಗಿ ಪತ್ರವನ್ನೂ ಸಲ್ಲಿಸಿದ್ದೇವೆ. ಆ ನಂತರವೂ ಪೊಲೀಸ್ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದು ಪೊಲೀಸರ ಮೇಲಿನ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ಇದು ಅರುಂದತಿಯ ಜೀವನವನ್ನು ಕೆಟ್ಟದಾಗಿ ಬಾಧಿಸುತ್ತಿದೆ ಮತ್ತು ಆಕೆಯ ಜೀವನವು ಅಸ್ಥಿರವಾಗಿದೆ. ಭರಮಸಾಗರ ಪೊಲೀಸರು ಈ ವಿಷಯದಲ್ಲಿ ತುರ್ತಾಗಿ ತನಿಖೆ ನಡೆಸುವಂತೆ ಚಿತ್ರದುರ್ಗ ಜಿಲ್ಲಾ ಎಸ್ಪಿ ಮತ್ತು ಡಿಸಿ ಅವರು ಆದೇಶಿಸಬೇಕು ಮತ್ತು ಅರುಂಧತಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ.
ಲಿಂಗತ್ವ ಅಲ್ಪಸಂಖ್ಯಾತರು ಕೇವಲ ಭಿಕ್ಷೆ ಬೇಡಿ ಜೀವನ ಮಾಡುತ್ತಾರೆ ಎನ್ನುವ ಈ ಸಮಾಜದ ಮಧ್ಯೆ 45 ಮೇಕೆ 05 ಕುರಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ನನಗೆ ಈ ಘಟನೆ ಇಂದ ಅಘಾಥವಾಗಿದೆ. ಭವಿಷ್ಯದಲ್ಲಿ ನನ್ನ ಜೀವನವನ್ನು ನಡೆಸಲು ನನಗೆ ಯಾವುದೇ ಮಾರ್ಗವನ್ನು ನೋಡಲು ಸಾಧ್ಯವಾಗುತ್ತಿಲ್ಲ – ನನ್ನ ಭವಿಷ್ಯವು ಕತ್ತಲೆಯಾಗಿದೆ. ಲೈಂಗಿಕ ವೃತ್ತಿ ಮತ್ತು ಭಿಕ್ಷಾಟನೆ ಮಾಡದ ನಾನು ಕುರಿ ಸಾಕಾಣಿಕೆಯಲ್ಲೇ ಜೀವನ ಮುಂದು ವರಿಸಬೇಕೆಂದಿದ್ದೇನೆ. ಆದರೆ ಪೋಲೀಸ್ ರವರ ನಿರ್ಲಕ್ಷದಿಂದ ದಾರಿತೋರದಾಗಿದೆ ಎಂದು ನೊಂದ ಅರುಂಧತಿ ತಿಳಿಸಿದರು.
ಲಿಂಗತ್ಯ ಮತ್ತು ಲೈಂಗಿಕ ವೈವಿಧ್ಯತೆಗಾಗಿ ಚಳುವಳಿ (Movement for Gender and Sexual Diversity) ಯ ಸಹ ಅಧ್ಯಕ್ಷರಾದ ವೈಶಾಲಿ ಯವರು ಮಾತನಾಡಿ, ಈ ಘಟನೆಯಲ್ಲಿ ಪೋಲೀಸು ವರ್ತನೆ, ಖಂಡನೀಯ ಲಿಂಗತ್ವ ಅಲ್ಪಸಂಖ್ಯಾರಲ್ಲಿ ಸ್ವಂತ ಕಾಲಿನ ಮೇಲೆ ನಿಂತು ದುಡಿಯುವ ಜನರು ಬಹಳ ಕಮ್ಮಿ, ಅವರಲ್ಲಿ ಒಬ್ಬರಾದ ಅರುಂದತಿಯರಿಗೆ ಈ ರೀತಿ ಯಾಗಿರುವುದನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸದೇ ಇರುವುದು ಬಹಳ ನೋವಾಗಿದೆ. ಆಕೆಗೆ ನ್ಯಾಯ ಸಿಗದಿದ್ದಲ್ಲಿ ನಲ್ಲಿ ನಮ್ಮ ಚಳುವಳಿಯ ಮೂಲಕ ಚಿತ್ರದುರ್ಗ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಲಿಂಗತ್ವ ಮತ್ತು ಲೈಂಗಿಕ ವೈವಿಧ್ಯತೆಗಾಗಿ ಚಳುವಳಿ (Movement for Gender and Sexual Diversity) ಯ ಮತ್ತೊಬ್ಬ ಸಹ ಅಧ್ಯಕ್ಷರಾದ ಅಶ್ವಿನಿ ರಾಜನ್ ರವರು ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾರತ ಸ್ವಾವಲಂಭಿ ಜೀವನಕ್ಕಾಗಿ ಸರ್ಕಾರದ ಯಾವುದೇ ವಿಷೇಶ ಯೋಜನೆ ಇಲ್ಲದಿದ್ದರೂ, ಸಮುದಾಯದವರಿಗೆ ಮಾದರಿಯಾಗುವಂತೆ ಸ್ವಂತ ಹಣ ದಿಂದ ಜೀವನ ಕಟ್ಟಿಕೊಂಡಿದ್ದ ಅರುಂಧತಿಯವರಿಗೆ ಪೋಲೀಸ್ ಇಲಾಖೆ ನೆರವಿಗೆ ನಿಲ್ಲಬೇಕು, ಆ ಕಾರಣಕ್ಕೆ ನಾವು ಇಂದು ಮಧ್ಯಾಹ್ನ ಐ.ಜಿ. ಯವರನ್ನು ಸಹ ಬೇಟಿ ಮಾಡಲಿದ್ದೇವೆ. ನಂತರವೂ ನ್ಯಾಯಸಿಗದೇ ಇದ್ದಲ್ಲಿ ವೈಷ್ಣವಿ ಯವರು ತಿಳಿಸಿದ ಹಾಗೆ ಚಳುವಳಿಯ ಮೂಲಕ ಚಿತ್ರದುರ್ಗ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
City Today News 9341997936
