ಆಸಿಡ್‌ ದಾಳಿಗೆ ತುತ್ತಾದವರ ಆರೈಕೆಗಾಗಿ ಎಮೋಷನಲ್‌ ಫಸ್ಟ್‌ ಏಯ್ಡ್‌ ಅಕಾಡೆಮಿಯಿಂದ ತರಬೇತಿ ; ಘಟಿಕೋತ್ಸವದಲ್ಲಿ ಇಂದು ಪ್ರಮಾಣ ಪತ್ರ ಪ್ರದಾನ

ಆಸಿಡ್‌ ದಾಳಿಗೆ ತುತ್ತಾದವರ ಆರೈಕೆಗಾಗಿ ಎಮೋಷನಲ್‌ ಫಸ್ಟ್‌ ಏಯ್ಡ್‌ ಅಕಾಡೆಮಿಯಿಂದ ತರಬೇತಿ ; ಘಟಿಕೋತ್ಸವದಲ್ಲಿ ಇಂದು ಪ್ರಮಾಣ ಪತ್ರ ಪ್ರದಾನ

ಬೆಂಗಳೂರು, ನ, 25; ಆ್ಯಸಿಡ್ ದಾಳಿಗೆ ತುತ್ತಾದವರನ್ನು ಮಾನಸಿಕವಾಗಿ ಬಲಪಡಿಸುವ ಮಹತ್ವದ ಗುರಿ ಹೊಂದಿರುವ ಹಾಗೂ ಮಾನಸಿಕ ಯೋಗ ಕ್ಷೇಮ ಸೇವೆ ನೀಡಲು ತರಬೇತಿ ಪಡೆದವರಿಗೆ ಎಮೋಷನಲ್ ಫಸ್ಟ್ ಏಡ್ ಅಕಾಡೆಮಿಯ ಘಟಿಕೋತ್ಸವದಲ್ಲಿ ಶನಿವಾರ ಪ್ರಮಾಣ ಪತ್ರ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಸುನಿತಾ ಕೆ. ಮಣಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರಾಡಿಸನ್‌ ಬ್ಲ್ಯೂ ಹೋಟೆಲ್‌ ನಲ್ಲಿ ಪ್ರತಿಷ್ಠಾನದಲ್ಲಿ ತರಬೇತಿಪಡೆದ ಅಭ್ಯರ್ಥಿಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಇದು ಅತ್ಯಂತ ಮಹತ್ವದ ವಲಯವಾಗಿದೆ. ಪ್ರತಿವರ್ಷ ದೇಶದಲ್ಲಿ 800 ಮಂದಿ ಆಸಿಡ್‌ ದಾಳಿಗೆ ಒಳಗಾಗುತ್ತಿದ್ದು, ಇಂತಹವರ ಆರೈಕೆಗಾಗಿ ಈ ಪ್ರಮಾಣಪತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಎಮೋಷನಲ್ ಫಸ್ಟ್ ಏಡ್ ಚಿಕಿತ್ಸಾ ಪೂರೈಕೆದಾರರು, ತರಬೇತಿ ಪಡೆದವರು. ಆ್ಯಸಿಡ್ ದಾಳಿಯಿಂದ ಸಂತಸ್ತರಾದವರು, ಬದುಕುಳಿದವರ ಪುನಶ್ವೇತನಕ್ಕಾಗಿಯೇ ಮೀಸಲಾಗಿರುವ ಛಾನ್ಸ್ ಪ್ರತಿಷ್ಠಾನದೊಂದಿಗೆ ಸಹಯೋಗಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತರಬೇತಿ ಪಡೆದವರನ್ನು ಮಾನಸಿಕವಾಗಿ ಸಜ್ಜುಗೊಳಿಸಿ ಶಸ್ತ್ರಸಜ್ಜಿತ ಸೈನಿಕರಂತೆ ಕಾರ್ಯನಿರ್ವಹಿಸಲಿದ್ದಾರೆ. ಆ್ಯಸಿಡ್ ದಾಳಿಗೆ ತುತ್ತಾಗಿ ನೊಂದು, ಬಾಳ ಕತ್ತಲೆಯಲ್ಲಿರುವವರಿಗೆ ಆಶಾಕಿರಣವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

City Today News 9341997936

Leave a comment

This site uses Akismet to reduce spam. Learn how your comment data is processed.