ಕಳೆದ 44 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 10450 ಗ್ರಾಮ ಸಹಾಯಕರನ್ನು ಸರ್ಕಾರವು ‘ಡಿ’ ದರ್ಜೆ ನೌಕರರೆಂದು ಪರಿಗಣಿಸದೆ ಇರುವುದರಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ ದಲ್ಲಿ ಪಾದಯಾತ್ರೆಯ ಮೂಲಕ ಸರ್ಕಾರದ ಗಮನ ಸೆಳೆಯಲು ಮುಷ್ಕರ

ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961ರ ಅನ್ವಯ ಜಾರಿಯಿಂದಾಗಿ 00:01-02-1963 ರಿಂದ ಅನ್ವಯವಾಗುವಂತೆ ವಂಶಪಾರಂಪಯ್ಯದ ಎಲ್ಲಾ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರನ್ನು ತಾತ್ಕಾಲಿಕ ಆಧಾರದ ಮೇಲೆ ಯಾವುದೇ ವಂಶಪಾರಂಪಯ್ಯ ಹಕ್ಕುಗಳು ಅನ್ವಯವಾಗದಂತೆ ಆಡಳಿತಾತ್ಮಕ ಅನುಕೂಲಕ್ಕಾಗಿ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರಿ ಆದೇಶಗಳಲ್ಲಿ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ತಾತ್ಕಾಲಿಕವಾಗಿ ಮಂಜೂರು ಮಾಡಲಾಗಿದೆ. ಹಾಲಿ ನಮಗೆ ಮಾಸಿಕ ರೂ.13,000/- ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಇತರೆ ಭತ್ಯೆಗಳು ಇರುವುದಿಲ್ಲ. ಇಂದಿನ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬ ಜೀವನ ನಿರ್ವಹಣೆಗೆ ಕಷ್ಟಕರವಾಗಿರುತ್ತದೆ. ಹಾಗೂ ಇಂದಿನ ಮಾಸಿಕ ರೂ.13,000/- ಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಹಿರಿಯರ ಪಾಲನೆ ಪೋಷಣೆ ಮತ್ತು ವೈದ್ಯಕೀಯ ಚಿಕಿತ್ಸೆ ವೆಚ್ಚಭರಿಸಲು ದುಸ್ಥಿತಿಯಾಗಿರುತ್ತದೆ. ಸರ್ಕಾರಕ್ಕೆ ಈಗಾಗಲೇ ಹಲವು ಮನವಿಗಳನ್ನು ಕೇಂದ್ರ ಸಂಘ ಸಲ್ಲಿಸಿಕೊಂಡಿದ್ದರೂ ಸಹಾ ಈ ಬಗ್ಗೆ ಸರ್ಕಾರವು ಗಮನ ಹರಿಸಿರುವುದಿಲ್ಲ. ಗ್ರಾಮ ಸಹಾಯಕರಿಗೆ ಯಾವುದೇ ಸೇವಾ ನಿಯಮಾವಳಿ ಹಾಗೂ ಸೇವಾ ಭದ್ರತೆಯನ್ನು ನೀಡಿರುವುದಿಲ್ಲ. ಗ್ರಾಮ ಸಹಾಯಕರು ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಸಹಾಯ ಮಾಡಲು ಹಾಗೂ ಮಾಹಿತಿ ನೀಡಲು ನೇಮಕ ಮಾಡಿಕೊಂಡಿರುತ್ತಾರೆ.

ಈಗಾಗಲೇ ಗ್ರಾಮ ಸಹಾಯಕರನ್ನು 2007ನೇ ಸಾಲಿನಲ್ಲಿ 10450 ಹುದ್ದೆಗಳು ಮಿತವೇತನದ ಆಧಾರದ ಮೇಲೆ ಸರ್ಕಾರವು ಖಾಯಂ ಮಾಡಿರುತ್ತದೆ. ಆದರೆ, ಇಲ್ಲಿಯವರೆವಿಗೂ ವೇತನ ಪರಿಷ್ಕರಣೆ ಆಗಿರುವುದಿಲ್ಲ. 2012ನೇ ಸಾಲಿನಲ್ಲಿ ಮಾನ್ಯ ಅಡ್ವಕೋಟ್ ಜನರಲ್ ರವರು ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ಮಾಡುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿರುತ್ತಾರೆ ಆದರೂ ಸರ್ಕಾರವು ಇಲ್ಲಿಯವರೆವಿಗೂ ಗ್ರಾಮ ಸಹಾಯಕರಿಗೆ ಕನಿಷ್ಠ ವೇತನ ಜಾರಿ ಮಾಡುವಾಗಲೀ, ‘ಡಿ’ ದರ್ಜೆ ಎಂದು ಪರಿಗಣಿಸುವುದಾಗಲೀ ಕಂಡು ಬಂದಿರುವುದಿಲ್ಲ.

ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಿಗೆ 2023-ಸೆಪ್ಟೆಂಬರ್ ತಿಂಗಳಿನಲ್ಲಿ ಈ ಬಗ್ಗೆ ಮನವಿ ಸಲ್ಲಿಸಿರುತ್ತದೆ ಮತ್ತು ಮಾನ್ಯ ಕಂದಾಯ ಸಚಿವರಿಗೆ ಹಾಗೂ ಮಾನ್ಯ ಪ್ರಧಾನ ಕಾರ್ಯದರ್ಶಿಯವರಿಗೆ ಕೇಂದ್ರ ಸಂಘವು ಈ ಬಗ್ಗೆ ಮನವಿ ಸಲ್ಲಿಸಿರುತ್ತದೆ. ಆದರೆ ಇಲ್ಲಿಯವರೆವಿಗೂ ಗ್ರಾಮ ಸಹಾಯಕರ ಬೇಡಿಕೆಗಳ ಬಗ್ಗೆ ಸರ್ಕಾರವು ಕ್ರಮ ಕೈಗೊಂಡಿರುವ ಬಗ್ಗೆ ಕೇಂದ್ರ ಸಂಘಕ್ಕೆ ಮಾಹಿತಿ ಇರುವುದಿಲ್ಲ.

ಆದ್ದರಿಂದ ದಿನಾಂಕ:04-12-2023 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಗ್ರಾಮ ಸಹಾಯಕರ ಕೇಂದ್ರ ಸಂಘವು ಕಿತ್ತೂರು ರಾಣಿ ಚೆನ್ನಮ್ಮ ಅರಮನೆ (ಬೆಳಗಾವಿ ಜಿಲ್ಲೆ)ಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆಯ ಮೂಲಕ ಮುಷ್ಕರವನ್ನು ಹಮ್ಮಿಕೊಂಡಿರುತ್ತದೆ ಎಂದು ಹೆಚ್‌.ಎನ್‌.ದೇವರಾಜು, ಅಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು

ಪತ್ರಿಕಾ ಘೋಷ್ಠಿಯಲ್ಲಿ ಜನಾರ್ಧನ್ ಬಂಟ್ವಾಳ,ಗೌರವ ಅಧ್ಯಕ್ಷರು, ಬಿ.ಶಿವರುದ್ರಪ್ಪ,ಪ್ರಧಾನ ಕಾರ್ಯದರ್ಶಿ, ಶ್ರೀನಿವಾಸ್,ಖಜಾಂಚಿ ಮತ್ತು ಸಂಘದ ಮುಖಂಡರುಗಳು ಉಪಸ್ತಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.