
ಬೆಂಗಳೂರು ನಗರದ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಾರ್ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಇದೇ ರೀತಿ ಹಲವು ಪ್ರಕರಣಗಳು ವರದಿಯಾಗುತ್ತಿದ್ದರಿಂದ. ಈ ರೀತಿಯ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಈಶಾನ್ಯ ವಿಭಾಗದಲ್ಲಿ ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿರುತ್ತದೆ. ಈ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ 3 ಜನ ಆರೋಪಿತರನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿತರ ಬಂಧನದಿಂದ ಸುಮಾರು * 18,00.000/- ಬೆಲೆಬಾಳುವ 15 ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳು, ಎರಡು ಮೊಬೈಲ್, ಒಂದು ಮಾರುತಿ ಸ್ವೀಪ್ಟ್ ಕಾರು, ಒಂದು ಥೀಮ್ ಯುಗಾ ಬೈಕ್ ಹಾಗೂ 60 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಯಲಹಂಕ ಪೊಲೀಸ್ ಠಾಣೆಯ-3 ಪ್ರಕರಣ, ಕೊತ್ತನೂರು ಪೊಲೀಸ್ ಠಾಣೆಯ-3 ಪ್ರಕರಣ. ಚಿಕ್ಕಜಾಲ ಪೊಲೀಸ್ ಠಾಣೆಯ-3 ಪ್ರಕರಣ, ದೇವನಹಳ್ಳಿ ಪೊಲೀಸ್ ಠಾಣೆಯ-1 ಪ್ರಕರಣ, ಅಮೃತಹಳ್ಳಿ ಪೊಲೀಸ್ ಠಾಣೆಯ-1 ಪ್ರಕರಣ. ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ-2 ಪ್ರಕರಣ ಹಾಗೂ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ-1 ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿತರ ಪೈಕಿ ಒಬ್ಬ ಆರೋಪಿಯು ಈ ಹಿಂದೆ ದೇವನಹಳ್ಳಿ, ಚಿಕ್ಕಜಾಲ, ನಂದಿಕ್ರಾಸ್, ಹೊಸಕೋಟೆ, ಬಾಗಲೂರು, ವಿಜಯಪುರ, ಸಂಪಿಗೆಹಳ್ಳಿ, ಡಿ.ಜಿ.ಹಳ್ಳಿ ಪೊಲೀಸ್ ಠಾಣೆಗಳ ಬೈಕ್ ಕಳವು ಪ್ರಕರಣಗಳಲ್ಲಿ ಬಾಗಿಯಾಗಿರುತ್ತಾನೆ.
ಬೆಂಗಳೂರು ನಗರ, ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀಪ್ರಸಾದ್ ಬಿ.ಎಂ. ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಯಲಹಂಕ ಪೊಲೀಸ್ ಠಾಣೆ, ಸಬ್ ಇನ್ಸ್‌ಪೆಕ್ಟರ್ ಶ್ರೀ.ಮದುಸೂಧನ.ಎಲ್.ಡಿ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
City Today News 9341997936
