“ಮಣ್ಣು ಪರಮ ಐಕ್ಯತೆಯ ಒಂದು ಸಾಧನ”: COP28 ನಲ್ಲಿ 1 ನೇ ದಿನದಂದು ಸದ್ಗುರುಗಳು

ಡಿಸೆಂಬರ್ 1 ರಂದು, ಸದ್ಗುರುಗಳು ದುಬೈನ ಕಾಪ್-28 (COP28) ರ ಉದ್ಘಾಟನಾ ಅಧಿವೇಶನಗಳಲ್ಲಿ ಭಾಗವಹಿಸಿದರು. ಭಾರತದ ಪ್ರಧಾನಿ – ಶ್ರೀ ನರೇಂದ್ರ ಮೋದಿ, ಯು.ಕೆ ಪ್ರಧಾನಿ – ರಿಷಿ ಸುನಕ್, ವಿಶ್ವಬ್ಯಾಂಕ್ ಅಧ್ಯಕ್ಷ – ಅಜಯ್ ಬಂಗಾ, ಫ್ರಾನ್ಸ್ ಅಧ್ಯಕ್ಷ – ಇಮ್ಯಾನುಯೆಲ್ ಮ್ಯಾಕ್ರನ್, ಇಂಡೋನೇಷಿಯಾ ಅಧ್ಯಕ್ಷ – ಜೋಕೊ ವಿಡೋಡೊ, ಯುಎಇ’ಯ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವರಾದ – ಹೆಚ್.ಇ ಮರಿಯಮ್ ಅಲ್ಮ್ಹೇರಿ, ಇಟಲಿ ಪ್ರಧಾನಿ – ಜಾರ್ಜಿಯಾ ಮೆಲೋನಿ ಮತ್ತು ಯುಎಸ್ ನ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸೇರಿದಂತೆ ಹಲವಾರು ವಿಶ್ವದ ನಾಯಕರು ಉಪಸ್ಥಿತರಿದ್ದರು.

ನೀವು ಯಾರೇ ಆಗಿರಿ, ನೀವು ಏನನ್ನೇ ನಂಬಿ ಅಥವಾ ನೀವು ಯಾವ ಸ್ವರ್ಗಕ್ಕೆ ಹೋಗುತ್ತೀರಿ ಎಂಬುದು ಮುಖ್ಯವಲ್ಲ, ನಾವೆಲ್ಲರೂ ಒಂದೇ ಮಣ್ಣಿನಿಂದ ಬಂದವರು, ಅದೇ ಮಣ್ಣಿನಿಂದ ಊಟ ಮಾಡುತ್ತೇವೆ ಮತ್ತು ನಾವು ಸತ್ತಾಗ ಅದೇ ಮಣ್ಣಲ್ಲಿ ಮಣ್ಣಾಗುತ್ತೇವೆ. ಮಣ್ಣು ಅಂತಿಮ ಏಕೀಕರಣವಾಗಿದೆ! ಮಣ್ಣಿನ ಪುನರುಜ್ಜೀವನಕ್ಕಾಗಿ ಕಾರ್ಯನೀತಿಗಳನ್ನು ಜಾರಿಗೆ ತರಲು ಜನರು ಮತ್ತು ಜನಪ್ರತಿನಿಧಿಗಳ ಮೇಲೆ ಪ್ರಭಾವ ಬೀರುವಲ್ಲಿ ಮತ್ತು ಪ್ರೇರೇಪಿಸುವಲ್ಲಿ ಧಾರ್ಮಿಕ ನಾಯಕರ ಪಾತ್ರ ಪ್ರಮುಖವಾಗಿದೆ. ಇದನ್ನು ಸಾಕಾರಗೊಳಿಸೋಣ. –ಸದ್ಗುರು

City Today News
9341997936

Leave a comment

This site uses Akismet to reduce spam. Learn how your comment data is processed.