ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ “ಬೃಹತ್ ಜಾಗೃತ ಸಮಾವೇಶ”

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ “ಬೃಹತ್ ಜಾಗೃತ ಸಮಾವೇಶ” ಸ್ಥಳ : ಬೆಂಗಳೂರು ಪ್ರೆಸ್ ಕ್ಲಬ್ ದಿನಾಂಕ 14-12-2023

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಪತ್ರಿಕಾ ಗೋಷ್ಠಿ

ನಮ್ಮ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ಪತ್ರಿಕಾ ಗೋಷ್ಠಿಯನ್ನು ಕರೆದಿರುವ ಉದ್ದೇಶವೆನೆಂದರೇ, ಇದೇ ದಿನಾಂಕ 10-12-2023ರಂದು ಅರಮನೆ ಮೈದಾನದಲ್ಲಿ ನಡೆದ ನಮ್ಮ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ, ಬಿಲ್ಲವ, ನಾಮದಾರಿ, ನಾಡಾರ್ ಸೇರಿದಂತೆ ಎಲ್ಲಾ 26 ಪಂಗಡಗಳ ಬೃಹತ್ ಜಾಗೃತ ಸಮಾವೇಶ ಕಾರ್ಯಕ್ರಮವು ಬಹಳ ವಿಜೃಂಬಣೆಯಿಂದ ನೆರವೇರಿತು. ಈ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ವಿಗೆ ಕಾರಣರಾದ ಎಲ್ಲಾ ನಮ್ಮ ಕುಲಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ ಈ ಪತ್ರಿಕಾ ಗೋಷ್ಟಿಯನ್ನು ಕರೆಯಲಾಗಿದೆ.

ನಮ್ಮ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪಿತಗೊಂಡು ಇಲ್ಲಿಗೆ 78ವರ್ಷಗಳಾಗಿವೆ ನಮ್ಮ ಸಮುದಾಯದ ಈಡಿಗ, ಬಿಲ್ಲವ, ನಾಮದಾರಿ, ದೀವರು, ಸೇರಿದಂತೆ 26 ಪಂಗಡಗಳ ಎಲ್ಲಾ ಕುಲಬಾಂಧವರನ್ನು ಒಟ್ಟುಗೂಡಿಸುವ ಇದೇ ವೇದಿಕೆಯಲ್ಲಿ ಸರ್ಕಾರಕ್ಕೆ ಹಲವಾರು ಬೇಡಿಕೆಗಳನ್ನು ಮಂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲನೇಯದಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರಿಗೆ ಹೃದಯ ಪೂರ್ವಕ ಕೃತಜ್ಞತೆಗಳು.

ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್‌ರವರಿಗೆ,

ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿರವರಿಗೆ,

ನಮ್ಮ ಸಮಾಜದವರೇ ಆದ ಶಿಕ್ಷಣ ಮಂತ್ರಿಗಳು ಶ್ರೀ ಮಧುಬಂಗಾರಪ್ಪನವರಿಗೆ ನನ್ನ ಹೃದಯಪೂರ್ವಕ ವಂದನೆಗಳು.

ಚಲನಚಿತ್ರ ನಟರಾದ ಡಾ|| ಶಿವರಾಜ್ ಕುಮಾರ್ ರವರಿಗೆ, ಡೆಕ್ಕನ್ ಹೆರಾಲ್ಡ್ ನ ಜಂಟಿ ನಿರ್ದೇಶಕರಾದ ಶ್ರೀ ತಿಲಕ್‌ಕುಮಾರ್ ಹಾಗೂ ಎಲ್ಲಾ ಶಾಸಕರಿಗೂ ಮಾಜಿ ಶಾಸಕರು ಹಾಗೂ ಲೋಕಸಭಾಸದಸ್ಯರಿಗೂ, ಚಲನಚಿತ್ರ ನಟರಾದ ಶ್ರೀಮುರಳಿರವರಿಗೂ ಸಹ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು.

ಕರ್ನಾಟಕ ರಾಜ್ಯದ ಅಕ್ಕಪಕ್ಕದ ರಾಜ್ಯದಿಂದ ಬಂದಿದ್ದಂತಹ ನಮ್ಮ ಸಮಾಜದ ಕುಲಬಾಂಧವರಿಗೆ, ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಸಂಘಗಳಿಗೆ, ಈಡಿಗ ಹಾಗೂ 25 ಪಂಗಡಗಳ ನನ್ನ ಕುಲಬಾಂಧವರಿಗೆ ಕೃತಜ್ಞತೆಗಳು.

ವಿಶೇಷವಾಗಿ ನಮ್ಮ ಕರ್ನಾಟಕ ಮತ್ತು ಇತರೆ ರಾಜ್ಯಗಳ ಪತ್ರಿಕಾ ಹಾಗೂ ದೂರದರ್ಶನ ಮಾಧ್ಯಮಗಳಿಗೆ ಮತ್ತು ಸಾಮಾಜಿಕ ಜಾಲತಾಣಗಳಿಗೂ ನಮ್ಮ ಸಂಘ ಹೃದಯ ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ, ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ನಮ್ಮ ಸಂಘದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ನಾನು ನಮ್ಮ ಜನಾಂಗದ ಏಳಿಗೆಗಾಗಿ ತನು, ಮನ, ಧನದಿಂದ ಯಾವುದೇ ಪಲಾಪೇಕ್ಷೆಯನ್ನು ನಿರೀಕ್ಷಿಸದೇ ನನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಇದಕ್ಕಾಗಿ ನಾನು ಈಡಿಗ ಮತ್ತು 25 ಪಂಗಡಗಳ ಮುಖಂಡರನ್ನು ನಿರಂತರವಾಗಿ ಸಂಪರ್ಕದಲ್ಲಿ ಇಟ್ಟುಕೊಂಡಿದ್ದೇನೆ.

ದಿನಾಂಕ 10-12-2023ರಂದು ಅರಮನೆ ಮೈದಾನದಲ್ಲಿ ನಡೆಸಿದ ಸಮಾವೇಶದ ಉದ್ದೇಶವೇನೆಂದರೇ ನಮ್ಮ

ಸಮಾಜದಲ್ಲಿರುವ ನಮ್ಮದೇ ಸಮುದಾಯದ ಸ್ವಾಮೀಜಿಗಳನ್ನು ಮತ್ತು ನಮ್ಮ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಮಾಜಿ ಲೋಕಸಭಾ ಸದಸ್ಯರು, ಹಾಲಿ ಮಂತ್ರಿಗಳು, ಹಾಲಿ ರಾಜ್ಯ ಸಭಾ ಸದಸ್ಯರು, ಮಾಜಿ ರಾಜ್ಯ ಸಭಾ ಸದಸ್ಯರು ಹಾಗೂ ಇತರೆ ರಾಜಕೀಯ ಮುಖಂಡರನ್ನು ಒಗ್ಗೂಡಿಸುವುದು ಇದರಲ್ಲಿ ಯಾವುದೇ ಸ್ವಾರ್ಥ ಒಂದಿಷ್ಟು ಇಲ್ಲ.

ಈ ಸಮಾವೇಶದ ಮುಖ್ಯ ಉದ್ದೇಶ ಈಗಾಗಲೇ ಘೋಷಣೆಯಾಗಿರುವ ಈಡಿಗ ಅಭಿವೃದ್ಧಿ ನಿಗಮಕ್ಕೆ ರೂ.500ಕೋಟಿಗಳ ಅನುದಾನವನ್ನು ಮೀಸಲಿಡುವುದು ಹಾಗೂ ಈಡಿಗ ಮತ್ತು 25 ಪಂಗಡಗಳು ಸೇರಿ ಹಲವು ಬೇಡಿಕೆಗಳನ್ನು ಸರ್ಕಾರದ ಮೂಲಕ ಪೂರೈಸಿಕೊಳ್ಳುವುದಕ್ಕಾಗಿ ಎಂದು ಈಗಾಗಲೇ ತಿಳಿಸಿರುತ್ತೇವೆ.

ನಮಗೆ ಸಮಯದ ಅಭಾವ ಇದ್ದಿದ್ದರಿಂದ ಹಾಗೂ ಸಮಾವೇಶದ ದಿನಾಂಕವು ಘೋಷಣೆಯಾಗಿದ್ದರಿಂದ ಸಂಘದ ವತಿಯಿಂದ ಹಲವಾರು ಪೂರ್ವಭಾವಿ ಸಿದ್ಧತೆಗಳನ್ನು ದಿನಾಂಕ 01-11-2023, 10-11-2023 ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಸಹ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಈ ಸಮಾವೇಶದಲ್ಲಿ ಹೆಚ್ಚು ಜನರನ್ನು ಸಂಘಟಿಸುವ ಪ್ರಯತ್ನವನ್ನು ಮಾಡಿದೆವು. ಅದರಂತೆ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಾ ಬಂದೆವು. ಸಮಾವೇಶದ ಸ್ಥಳವನ್ನು ನಿಗಧಿ ಪಡಿಸಿ, ಡಿ.ಪಿ.ಆರ್. ಅವರ ಆದೇಶದಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಅನುಮತಿ ಪಡೆಯಲಾಯಿತು.

ನಮ್ಮ ಸಮಾಜದ ಸ್ವಾಮೀಜಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲುರು, ಶ್ರೀ ರೇಣುಕಾನಂದ ಸ್ವಾಮೀಜಿ, ನಿಟ್ಟೂರು, ಶ್ರೀ ಯೋಗೇಂದ್ರ ಅವದೂತರು, ಶ್ರೀ ಸತ್ಯಾನಂದ ಸ್ವಾಮೀಜಿಗಳು, ಶಿವಗಿರಿ.

ಶ್ರೀ ರಾಮಪ್ಪನವರು, ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಮತ್ತು ಮುಖಂಡರುಗಳು ರಾಜ್ಯದ ಮೂಲೆ ಮೂಲೆಗಳಿಗೆ ಪ್ರವಾಸ ಮಾಡಿ ಸಮಾಜದ ಕುಲಬಾಂಧವರನ್ನು ಸಂಘಟಿಸಿದ ಪಲವಾಗಿ ಸಮಾವೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮಾಜದ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆದರೇ ಸಮಯದ ಅಭಾವದಿಂದ ನಾವು ಹೆಚ್ಚಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲ. ಸುಮಾರು ಮೂರರಿಂದ ನಾಲ್ಕು ಲಕ್ಷ ಜನರು ಈ ಕಾರ್ಯಕ್ರಮಕ್ಕೆ ಬರಲು ಸಿದ್ದರಿದ್ದರು ಅದರೇ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದರಿಂದ ಅವರುಗಳನ್ನು ತಡೆಯಬೇಕಾಯಿತು. ಇದಕ್ಕಾಗಿ ನಾನು ಸಮಾಜಬಾಂಧವರಲ್ಲಿ ಕ್ಷಮೆಯಾಚಿಸುತ್ತೇನೆ. ಆದರೂ ಸಮೀಕ್ಷೆಯ ಪ್ರಕಾರ ಸುಮಾರು 2 ಲಕ್ಷ (ಎರಡು ಲಕ್ಷ) ಜನರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ನಿರಂತರವಾಗಿ ಈಡಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಸಲುವಾಗಿ ಸುಮಾರು 15ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಅದರಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಈಡಿಗ ಅಭಿವೃದ್ಧಿ ನಿಗಮವನ್ನು ಘೋಷಿಸಲಾಗಿದೆ. ಈಗ ಅನುದಾನವನ್ನು ನೀಡಬೇಕಾಗಿ ಬಿನ್ನವತ್ತಳೆಯಲ್ಲಿ ಸೇರಿಸಿ ಇನ್ನು ಹಲವಾರು ಬೇಡಿಕೆಗಳನ್ನು ಮಂಡಿಸಲಾಗಿದೆ.

ಈ ಸಮಾವೇಶದಲ್ಲಿ ಲಕ್ಷಾಂತರ ಕುಲಬಾಂಧವರನ್ನು ಒಂದೇ ಸೂರಿನಡಿಯಲ್ಲಿ ವಿಕ್ಷೀಸಿರುವ ಘನ ಸರ್ಕಾರ

ಬಿನ್ನವತ್ತಳೆಯಲ್ಲಿ ಮಂಡಿಸಿರುವ ಎಲ್ಲಾ ಬೇಡಿಕೆಗಳನ್ನು ನೆರವೇರಿಸಿಕೊಡುವುದೆಂದು ನನಗೆ ಸಂಪೂರ್ಣ

ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು

ನಿರಂತರವಾಗಿ ಸರ್ಕಾರದ ಸಂಪರ್ಕದಲ್ಲಿದ್ದು ಬೇಡಿಕೆಗಳು ಈಡೇರಿಸಲು ಹೋರಾಟ ಮಾಡುತ್ತೇವೆ. ಕೊನೆಯದಾಗಿ ಸಮಾವೇಶಕ್ಕೆ ಇತರ ರಾಜ್ಯಗಳಿಂದ ನಮ್ಮ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಂತಹ ನಮ್ಮ ಸಮಾಜದ ಗಣ್ಯವ್ಯಕ್ತಿಗಳಾದ ಶ್ರೀ ಗೋಕುಲಮ್ ಗೋಪಾಲನ್, ಗೋಕುಲಮ್ ಚಿಟ್ಸ್, ಚೆನೈ, ಶ್ರೀ ವೈಕುಂಠರಾಜ್ (ನಾಡಾರ್), ವಿ.ವಿ. ಮಿನರಲ್ಸ್, ಚೈನೈ.

ಶ್ರೀ ಮನೋಜ್ ಕನ್ಯಾಕುಮಾರಿ,

ಶ್ರೀ ಮುಕುಂದರಾಜ್

ಈ ಬೃಹತ್ ಸಮಾವೇಶವು ಅಭೂತಪೂರ್ವ ಯಶಸ್ಸು ಕಾಣಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಕಲರಿಗೂ ಮತ್ತೊಮ್ಮೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು ಎಂದು ಡಾ|| ಎಂ.ತಿಮ್ಮೇಗೌಡ ಅಧ್ಯಕ್ಷರು & ಹೆಚ್.ಟಿ. ಮೋಹನ್‌ದಾಸ್ ಪ್ರಧಾನ ಕಾರ್ಯದರ್ಶಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.