
ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ, ಶಾಸಕರು ಇವರ ಅಧ್ಯಕ್ಷತೆಯಲ್ಲಿ ಮಹಾಸಭೆಯ 24ನೇ ಮಹಾಅಧಿವೇಶನವನ್ನು 2023ರ ಡಿಸೆಂಬರ್ 23 ಮತ್ತು 24ರಂದು ಎಂ.ಬಿ.ಎ. ಕಾಲೇಜು ಮೈದಾನ, ದಾವಣಗೆರೆ ಇಲ್ಲಿ ಏರ್ಪಡಿಸಲಾಗಿದೆ. ಮಹಾಅಧಿವೇಶನಕ್ಕೆ ನಾಡಿನ ಹರ-ಗುರು- ಚರಮೂರ್ತಿಗಳು, ಹಾಲಿ ಮತ್ತು ಮಾಜಿ ಸಚಿವರುಗಳು, ಶಾಸಕರುಗಳು, ಸಂಸದರುಗಳು, ಸಮಾಜದ ಗಣ್ಯರು, ವಾಣಿಜ್ಯೋದ್ಯಮಿಗಳು, ಸಾಹಿತಿಗಳು, ವಿದ್ವಾಂಸರು, ಕಲಾವಿದರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಮಹಾಸಭೆಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಉದ್ಘಾಟನೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಯುವ, ಮಹಿಳಾ ಅಧಿವೇಶನಗಳು ಮತ್ತು ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಪರಂಪರೆ ಮುಂತಾದ ವಿಷಯಗಳ ಬಗ್ಗೆ ಗೋಷ್ಠಿಗಳಿರುತ್ತವೆ. ಅಧಿವೇಶನದ ಸವಿನೆನಪಿಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಮಹಾಸಭೆಯ ಇತಿಹಾಸ, ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ವಸ್ತು ಪ್ರದರ್ಶನವಿರುತ್ತದೆ. ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಹಾಗೆಯೇ ಕೈಗಾರಿಕಾ ಮತ್ತು ವಾಣಿಜ್ಯ ಹಾಗೂ ಕೃಷಿ ಸಂಬಂಧಿತ ಪ್ರದರ್ಶನವಿರುತ್ತದೆ. ವಚನ ಗಾಯನ, ನೃತ್ಯರೂಪಕ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಇಂತಹದೊಂದು ಅಭೂತಪೂರ್ವ ಸಮಾವೇಶಕ್ಕೆ ಜಿಲ್ಲೆಯ ವೀರಶೈವ-ಲಿಂಗಾಯತ ಬಂಧುಗಳು ಕುಟುಂಬ ಸಮೇತ ಆಗಮಿಸಿ, ಸಮಾರಂಭವನ್ನು ಯಶಸ್ವಿಗೊಳಿಸಲು ಕೋರುತ್ತೇವೆ. ಆಮಂತ್ರಿಸುತ್ತೇವೆ.
ಈ ಐತಿಹಾಸಿಕ 24ನೇ ಮಹಾಅಧಿವೇಶನ ಸಮಾರೋಪ ಸಮಾರಂಭದಲ್ಲಿ ಸಮಾಜದ ಭವಿಷ್ಯದ ಅಭಿವೃದ್ಧಿಗಾಗಿ, ಸಮಾಜದ ಒಳತಿಗಾಗಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಅವುಗಳಲ್ಲಿ ಕೆಲವುಗಳೆಂದರೆ,
ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಗಳ(ಓ.ಬಿ.ಸಿ) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು.
ಸುಮಾರು ఎంటు ವರ್ಷಗಳಷ್ಟು ಹಳೆಯದಾದ, ಅನೇಕ ಲೋಪದೋಷಗಳಿಂದ ಕೂಡಿರುವ, ಬಿಡುಗಡೆಗೂ ಮುನ್ನಾವೇ ಬಹಿರಂಗಗೊಂಡಿರುವ ಕಾಂತರಾಜು ಆಯೋಗದ ವರದಿಯನ್ನು ತಿರಸ್ಕರಿಸುವುದು ಮತ್ತು ಯಾವುದೇ ಕಾರಣಕ್ಕೂ ವರದಿಯನ್ನು ಸ್ವೀಕರಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು.
ಪ್ರಸ್ತುತ ತಂತ್ರಜ್ಞಾನಗಳನ್ನು ಬಳಸಿಕೊಂಡು, ಲೋಪ-ದೋಷಗಳನ್ನು ಸರಿಪಡಿಸಿಕೊಂಡು ರಾಜ್ಯ ಸರ್ಕಾರವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾದರೆ ಸಂಪೂರ್ಣ ಸಹಕಾರ ನೀಡುವುದು ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಸ್. ಗುರುಸ್ವಾಮಿ-ಅಧ್ಯಕ್ಷರು & ಜಿ. ಎಸ್. ಮೃತ್ಯುಂಜಯಸ್ಞಾಮಿ-ಪ್ರಧಾನ ಕಾರ್ಯದರ್ಶಿ,ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News 9341997936
